ನವದೆಹಲಿ: ಹೇರ್ ಕಲರ್ ನಲ್ಲಿ ನೂತನ ಅವಿಷ್ಕಾರ ಮಾಡಿರುವ ಬೈ ಹ್ಯಾಪಿ ಮಾರ್ಕೆಟಿಂಗ್ ಕಂಪನಿಗೆ ಈಗ ಭಾರತ ಸರ್ಕಾರದಿಂದ 20 ವರ್ಷಗಳ ಕಾಲ ಪೇಟೆಂಟ್ ಸಿಕ್ಕಿದೆ.ಈಗ ಈ ಸಂಶೋಧನೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿರುವ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ರಾಧಾಕೃಷ್ಣನ್ ಅವರು ಈ ವಿಚಾರವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ : Suspected terrorist arrested: ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ತಾಲೀಬ್​ ಹುಸೇನ್!?


ಈ ಹೇರ್ ಕಲರ್ ನ ನೂತನ ಅವಿಷ್ಕಾರಕ್ಕೆ ಲಕ್ಷಾಂತರ ಪುರುಷರು ಹಾಗೂ ಮಹಿಳೆಯರು ಮನಸೋತಿದ್ದು, ವಿಐಪಿ ಹೇರ್ ಕಲರ್ ಶಾಂಪೂ ಎಂದು ಕರೆಯಲ್ಪಡುವ ಈ ಆವಿಷ್ಕಾರವು ಕೈಗವಸುಗಳು, ಬೌಲ್ ಮತ್ತು ಬ್ರಷ್ ಇಲ್ಲದೆ ಕೂದಲಿಗೆ ಬಣ್ಣ ಹಚ್ಚುವ ಪ್ರಕ್ರಿಯೆಯನ್ನು ಸರಳಗೊಳಿಸಿದೆ.ಅಷ್ಟೇ ಅಲ್ಲದೆ ನಿಮ್ಮ ಕೂದಲಿಗೆ ಬಣ್ಣ ಹಚ್ಚುವುದು ಸ್ನಾನ ಮಾಡುವಾಗ ನಿಮ್ಮ ತಲೆಗೆ ಇದು ಶಾಂಪೂ ಹಚ್ಚಿದಷ್ಟು ಸರಳ ಪ್ರಕ್ರಿಯೆ ಎಂದು ಹೇಳಬಹುದು.[[{"fid":"243315","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಇದರ ಜೊತೆಗೆ ಕೂದಲು, ಮೀಸೆ, ಗಡ್ಡಗಳಿಗೂ ಕೂಡ ಕೈಯಿಂದಲೇ ಬಣ್ಣವನ್ನು ಬಳಿದುಕೊಳ್ಳಬಹುದು, ವಿಶೇಷವೆಂದರೆ ಈ ಹೇರ್ ಐಯಿಲ್ ನಿಮ್ಮ ಕೈಗೆ ಅಂಟಿಕೊಳ್ಳುವುದಿಲ್ಲ, ಬದಲಾಗಿ ಅದು ಕೂದಲಿಗೆ ಮಾತ್ರ ಅಂಟಿಕೊಳ್ಳುತ್ತದೆ.ಈಗ ಮಾರುಕಟ್ಟೆಯಲ್ಲಿ ನಿಮ್ಮ ಕೈಗಳ ಮೂಲಕ ನಿಮ್ಮ ಕೂದಲಿಗೆ ಬಣ್ಣ ಬಳಿದುಕೊಳ್ಳಲು ಲಭ್ಯ ಇರುವ ಏಕೈಕ ಶಾಂಪೂ ಇದಾಗಿದೆ.ಈ ವಿಐಪಿ ಹೇರ್ ಕಲರ್ ಶಾಂಪೂವನ್ನು ಆಗಸ್ಟ್ 15 2019 ರಂದು ನಡೆದ ಕಾರ್ಯಕ್ರಮವೊಂದರಲ್ಲಿ ಒಂದೇ ವೇದಿಕೆಯಲ್ಲಿ ಸುಮಾರು 1004 ಜನರು ಬಳಸುವ ಮೂಲಕ ಗಿನ್ನಿಸ್ ದಾಖಲೆಯನ್ನು ನಿರ್ಮಿಸಿತು.ಆ ಮೂಲಕ ಈ ಶಾಂಪೂ ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿತು ಎಂದು ಹೇಳಬಹುದು.


ಇದನ್ನೂ ಓದಿ-ಇನ್ನು ಹತ್ತು ದಿನಗಳಲ್ಲಿ ಈ ಎರಡು ರಾಶಿಯವರಿಗೆ ಭಾರೀ ಧನ ಲಾಭ ಕರುಣಿಸಲಿದ್ದಾನೆ ಶುಕ್ರ


ಈಗ ಈ ಉತ್ಪನ್ನದ ಬಗ್ಗೆ ಪ್ರತಿಕ್ರಿಯಿಸಿರುವ ರಾಧಾಕೃಷ್ಣನ್ ಅವರು "ನನ್ನ ವಿಐಪಿ ಹೇರ್ ಕಲರ್ ಶಾಂಪೂ ಆವಿಷ್ಕಾರ, ಈಗ ಐದು ವರ್ಷಗಳಿಂದ ಅಸ್ತಿತ್ವದಲ್ಲಿದೆ. ಇದೊಂದು ರೀತಿ ಈಗ ವಿಶಿಷ್ಟ ಉತ್ಪನ್ನವೆಂದು ನಾವು ಹೇಳಬಹುದಾಗಿದೆ.ಮಾರುಕಟ್ಟೆಯಲ್ಲಿ ಹಲವಾರು ಹೇರ್ ಕಲರಿಂಗ್ ಉತ್ಪನ್ನಗಳು ಲಭ್ಯವಿವೆ, ಆದರೆ ಇದಕ್ಕೆ ನೀವು ಹ್ಯಾಂಡ್ ಗ್ಲೌಸ್ ಧರಿಸುವುದು ಕಡ್ಡಾಯವಾಗಿದೆ. ಆದರೆ ನಮ್ಮ ಉತ್ಪನ್ನ ಹಾಗಲ್ಲ, ಕೂದಲಿಗೆ ಕಲರ್ ಹಚ್ಚುವ ಮೊದಲು ಗ್ಲೌಸ್ ಬಳಸದೆಯೇ ಬಳಸಬಹುದಾದ ವಿಶ್ವದ ಏಕೈಕ ಉತ್ಪನ್ನ ನಮ್ಮದಾಗಿದೆ, ವಿಐಪಿ ಹೇರ್ ಕಲರ್ ಶಾಂಪೂವನ್ನು ಗ್ಲೋವ್ಸ್, ಬೌಲ್ ಅಥವಾ ಬ್ರಷ್ ಇಲ್ಲದೆ ಕೂದಲಿಗೆ ಹಚ್ಚಿಕೊಳ್ಳಬಹುದಾಗಿದೆ, ಅಷ್ಟೇ ಅಲ್ಲದೆ ಫಲಿತಾಂಶವು ಕೂಡ ಶೇ 100 ರಷ್ಟಿರುತ್ತದೆ. ನಾವು ಈಗ ಈ ಉತ್ಪನ್ನಕ್ಕಾಗಿ 20 ವರ್ಷಗಳ ಕಾಲ ಸರ್ಕಾರದಿಂದ ಪೇಟೆಂಟ್ ನ್ನು ಪಡೆದಿರುವುದಕ್ಕೆ ತುಂಬಾ ಸಂತೋಷವಾಗಿದೆ" ಎಂದು ಅವರು ಹೇಳಿದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.