Suspected terrorist arrested: ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ತಾಲೀಬ್​ ಹುಸೇನ್!?

Suspected terrorist arrested: ಸಿಲಿಕಾನ್ ಸಿಟಿಯಲ್ಲಿ ಹಿಜ್ಬುಲ್​​ ಮುಜಾಹಿದ್ದೀನ್ ಕಮಾಂಡರ್​​ ತಾಲೀಬ್​ ಹುಸೇನ್ ಬಂಧನವಾಗಿದ್ದು, ಆತನ ಕುರಿತಾದ ಸ್ಫೋಟಕ ವಿಷಯ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ. ಯುವಕರ ಬ್ರೈನ್​ ವಾಶ್ ಮಾಡಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. 

Written by - VISHWANATH HARIHARA | Edited by - Zee Kannada News Desk | Last Updated : Jun 7, 2022, 03:15 PM IST
  • ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ಶಂಕಿತ ಉಗ್ರನ ಬಂಧನ
  • ಬಂಧಿತ ಶಂಕಿತ ಉಗ್ರ ತಾಲೀಬ್​ ಹುಸೇನ್​
  • ಹಿಜ್ಬುಲ್​​ ಮುಜಾಹಿದ್ದೀನ್ ಕಮಾಂಡರ್​​ ತಾಲೀಬ್​ ಹುಸೇನ್
Suspected terrorist arrested: ಯುವಕರ ಬ್ರೈನ್​ ವಾಶ್ ಮಾಡುತ್ತಿದ್ದ ತಾಲೀಬ್​ ಹುಸೇನ್!? title=
ತಾಲೀಬ್​ ಹುಸೇನ್​ 

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಹಿಜ್ಬುಲ್​​ ಮುಜಾಹಿದ್ದೀನ್ ಕಮಾಂಡರ್​​ ತಾಲೀಬ್​ ಹುಸೇನ್ ಬಂಧನವಾಗಿದ್ದು, ಆತನ ಕುರಿತಾದ ಸ್ಫೋಟಕ ವಿಷಯ ಬಹಿರಂಗಗೊಂಡಿವೆ ಎನ್ನಲಾಗುತ್ತಿದೆ. ಯುವಕರ ಬ್ರೈನ್​ ವಾಶ್ ಮಾಡಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೆ ಕುಮ್ಮಕ್ಕು ನೀಡುತ್ತಿದ್ದ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ: ಪಠ್ಯ ವಿವಾದ: ಜೂನ್ 9 ರಂದು ಕಾಂಗ್ರೆಸ್‌ನಿಂದ ಪ್ರತಿಭಟನೆ

ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲೇ ವೇಷ ಬದಲಿಸಿ ಜೀವನ ನಡೆಸುತ್ತಿದ್ದ ಶಂಕಿತ ಉಗ್ರನ ಬಂಧನದವಾಗಿದ್ದು, ಪೊಲೀಸರು ತೀವ್ರ ಕಟ್ಟೆಚ್ಚರ ವಹಿಸಿದ್ದಾರೆ. ​​​ಮಸೀದಿಗಳಲ್ಲಿ ಪಾಠ ಪ್ರವಚನ ಮಾಡುತ್ತಿದ್ದ ಎಂದೂ ಸಹ ಹೇಳಲಾಗುತ್ತಿದೆ. ಈತ ಆಟೋ ಓಡಿಸುತ್ತ ಜೀವನ ನಡೆಸುತ್ತಿದ್ದನಂತೆ. 

ಬಂಧಿತ ಶಂಕಿತ ಉಗ್ರನನ್ನು ತಾಲೀಬ್​ ಹುಸೇನ್​ ಎಂದು ಗುರುತಿಸಲಾಗಿದ್ದು, ಹಿಜ್ಬುಲ್​ ಮುಜಾಹಿದ್ದೀನ್ ಉಗ್ರ ಸಂಘಟನೆಯ ಪ್ರಮುಖ ಕಮಾಂಡರ್​ಗಳಲ್ಲಿ ಈತನು ಕೂಡ ಒಬ್ಬ ಎನ್ನಲಾಗಿದೆ. ಈತ ಮೂಲತಃ ಜಮ್ಮು-ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯವನು. 2016ರಲ್ಲಿ ಭಯೋತ್ಪಾದಕ ಸಂಘಟನೆಗೆ ಸೇರಿದ್ದು, ಇಬ್ಬರು ಹೆಂಡತಿ ಮತ್ತು ಐವರು ಮಕ್ಕಳನ್ನ ಹೊಂದಿದ್ದಾನಂತೆ.

ಇದನ್ನೂ ಓದಿ: ಆನೆ ಹೋಗುತ್ತಿರುತ್ತದೆ ಶ್ವಾನ ಬೊಗಳುತ್ತಿರುತ್ತವೆ : ಚಡ್ಡಿ ಟೀಕಾಕಾರರಿಗೆ ಸವದಿ ತಿರುಗೇಟು

ಯುವಕರ ಬ್ರೈನ್​ ವಾಶ್​ ಮಾಡಿ ಜಮ್ಮು-ಕಾಶ್ಮೀರದಲ್ಲಿ ಹತ್ಯೆಗೆ ಸಂಚು ರೂಪಿಸುತ್ತಿದ್ದ ಎನ್ನಲಾಗುತ್ತಿದೆ. ಕಣಿವೆ ನಾಡಿನಲ್ಲಿ ನಡೆದ ಅನೇಕ ಬಾಂಬ್​ ಸ್ಫೋಟ ಪ್ರಕರಣಗಳಲ್ಲಿ ಈತ ಭಾಗಿಯಾಗಿರುವ ಮಾಹಿತಿ ಲಭ್ಯವಾಗಿದೆಯಂತೆ. ಸಶಸ್ತ್ರ ಪಡೆ ಈತನ ಬಂಧನಕ್ಕಾಗಿ ಶೋಧ ನಡೆಸುತ್ತಿದ್ದಾಗ ಹೆಂಡತಿ, ಮಕ್ಕಳೊಂದಿಗೆ ಬೆಂಗಳೂರಿಗೆ ಬಂದು 2 ವರ್ಷಗಳಿಂದ ನೆಲೆಸಿದ್ದನಂತೆ. 

ಆಟೋ ಓಡಿಸಿಕೊಂಡು ಸಾಮಾನ್ಯ ಜನರಂತೆ ಜೀವನ ನಡೆಸುತ್ತಿದ್ದ. ಸದ್ಯ ಈತನ ಬಂಧನದಿಂದ ಸಿಲಿಕಾನ್ ಸಿಟಿಯ ಜನ ಬೆಚ್ಚಿ ಬಿದ್ದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News