ಬೆಂಗಳೂರು :  ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುವುದರ ಜೊತೆಗೆ ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ, ಅಧಿಕ ರಕ್ತದೊತ್ತಡವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ಕಬ್ಬಿಣದ ಕೊರತೆಯನ್ನು ತಡೆಯುತ್ತದೆ ಎಂದು ನಮಗೆಲ್ಲರಿಗೂ ತಿಳಿದಿದೆ. ರಕ್ತದಲ್ಲಿನ ಯೂರಿಕ್ ಆಮ್ಲದ ಮಟ್ಟವನ್ನು ನಿಯಂತ್ರಿಸಲು ಕೂಡ ಇದು ಸಹಾಯ ಮಾಡುತ್ತದೆ. ಆದರೆ ಅನೇಕ ಗುಣಲಕ್ಷಣಗಳನ್ನು ಹೊಂದಿರುವ ವಿಟಮಿನ್ ಸಿ ನಿಮ್ಮ ಬಾಯಿಯ ಆರೋಗ್ಯಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿ ಎಂದು ನಿಮಗೆ ತಿಳಿದಿದೆಯೇ? ವಿಟಮಿನ್ ಸಿ (Vitamin C) ಸಮೃದ್ಧವಾಗಿರುವ ಆಹಾರವು ಒಸಡುಗಳಿಂದ ರಕ್ತಸ್ರಾವವಾಗುವ ಸಮಸ್ಯೆಯನ್ನು ತಡೆಯುತ್ತದೆ ಎಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ.


COMMERCIAL BREAK
SCROLL TO CONTINUE READING

ಜಿಂಗೈವಿಟಿಸ್ ಒಸಡುಗಳ ರಕ್ತಸ್ರಾವದ ಸಂಕೇತವಾಗಿದೆ :
ವಾಷಿಂಗ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ ಮತ್ತು ಅಧ್ಯಯನದ ಫಲಿತಾಂಶಗಳನ್ನು ನ್ಯೂಟ್ರಿಷನ್ ರಿವ್ಯೂ ಎಂಬ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ಅಧ್ಯಯನದ ಪ್ರಕಾರ, ನಿಮ್ಮ ಒಸಡುಗಳಲ್ಲಿ ರಕ್ತಸ್ರಾವವಾಗುತ್ತಿದ್ದರೆ (Bleeding Gums), ನಂತರ ನೀವು ದಿನಕ್ಕೆ ಎರಡು ಬಾರಿ ಫ್ಲೋಸಿಂಗ್‌ನೊಂದಿಗೆ ಬ್ರಷ್ ಮಾಡಬೇಕು, ಏಕೆಂದರೆ ಇದು ಜಿಂಗೈವಿಟಿಸ್‌ನ ಆರಂಭಿಕ ಲಕ್ಷಣವಾಗಿದೆ. ದೇಹದಲ್ಲಿ ವಿಟಮಿನ್ ಸಿ ಕೊರತೆಯಿರುವಾಗ ಕೆಲವೊಮ್ಮೆ ಒಸಡುಗಳಿಂದ ರಕ್ತಸ್ರಾವವಾಗುವ ಸಮಸ್ಯೆ ಕೂಡ ಕಾಣಿಸಿಕೊಳ್ಳುತ್ತದೆ ಎಂದು ಅಧ್ಯಯನದಿಂದ ತಿಳಿದುಬಂದಿದೆ.

ಇದನ್ನೂ ಓದಿ - ಪ್ರತಿದಿನ 1 ಕಪ್ Coffee ಕುಡಿದು, ಈ ಮಾರಕ ಕಾಯಿಲೆಗಳಿಂದ ದೂರವಿರಿ


ವಿಟಮಿನ್ ಸಿ ಕೊರತೆಯಿಂದಾಗಿ ಒಸಡುಗಳಿಂದ ರಕ್ತಸ್ರಾವ :
ಅಧ್ಯಯನದ ಪ್ರಮುಖ ಲೇಖಕ, ಬಾಯಿಯ ಆರೋಗ್ಯ ವಿಜ್ಞಾನಗಳ ಪ್ರಾಧ್ಯಾಪಕ ಮತ್ತು ಸ್ವತಃ ದಂತವೈದ್ಯರಾದ ಫಿಲಿಪ್ ಹುಜೋಲ್ ಈ ಅಧ್ಯಯನವನ್ನು ವಿವರಿಸುತ್ತಾ, "ಯಾರಾದರೂ ಹಲ್ಲು ಅಥವಾ ಒಸಡುಗಳಿಂದ ರಕ್ತ (Blood) ಹೊರಬರುವುದನ್ನು ನೋಡಿದಾಗ, ಅವರು ಸಮರ್ಪಕವಾಗಿ ಹಲ್ಲುಜ್ಜುತ್ತಿಲ್ಲ ಎಂದು ಭಾವಿಸುತ್ತಾರೆ. ಆದರೆ ಒಸಡುಗಳಿಂದ ರಕ್ತ ಏಕೆ ಬರುತ್ತಿದೆ ಮತ್ತು ದೇಹದಲ್ಲಿ ವಿಟಮಿನ್ ಸಿ ಕೊರತೆಯು ಇದಕ್ಕೆ ಕಾರಣವಾಗಬಹುದು ಎಂದು ಇಲ್ಲಿ ನೀವು ತಿಳಿದುಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದ್ದಾರೆ.


ವಿಟಮಿನ್ ಸಿ ಸೇವನೆಯನ್ನು ಹೆಚ್ಚಿಸುವ ಮೂಲಕ ಸಮಸ್ಯೆ ನಿವಾರಣೆ :
ರೆಟಿನಲ್ ಹೆಮರೇಜಿಂಗ್ ಎಂದು ಕರೆಯಲ್ಪಡುವ ಕಣ್ಣಿನಲ್ಲಿನ ಜಿಂಗೈವಲ್ ರಕ್ತಸ್ರಾವ ಅಥವಾ ಬ್ಲೀಚಿಂಗ್ ಅನ್ನು ಸೌಮ್ಯವಾದ ರೀತಿಯಲ್ಲಿ ಪರೀಕ್ಷಿಸಿದಾಗ ರಕ್ತದಲ್ಲಿನ ವಿಟಮಿನ್ ಸಿ (Vitamin C) ಕಡಿಮೆ ಆದ ಸಂದರ್ಭದಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ ಎಂದು ಹೇಳಲಾಗಿದೆ. ಕಡಿಮೆ ವಿಟಮಿನ್ ಸಿ ಪ್ಲಾಸ್ಮಾ ಮಟ್ಟವನ್ನು ಹೊಂದಿರುವವರಲ್ಲಿ ದೈನಂದಿನ ಆಹಾರದಲ್ಲಿ ವಿಟಮಿನ್ ಸಿ ಮಟ್ಟವನ್ನು ಹೆಚ್ಚಿಸುವುದು ರಕ್ತಸ್ರಾವಕ್ಕೆ ಸಂಬಂಧಿಸಿದ ಈ ರೋಗಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧಕರು ತಮ್ಮ ಸಂಶೋಧನೆಯ ಸಮಯದಲ್ಲಿ ಕಂಡುಕೊಂಡಿದ್ದಾರೆ ಎಂದು ಇದರಲ್ಲಿ ವಿವರಿಸಲಾಗಿದೆ.


ಇದನ್ನೂ ಓದಿ - Chips, Burger, Pizza ಪ್ರಿಯರಿಗೊಂದು ಮಹತ್ವದ ಸುದ್ದಿ, FSSAI ಹೊಸ ನಿಯಮ ನಿಮಗೂ ತಿಳಿದಿರಲಿ


ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರಗಳನ್ನು ಸೇವಿಸಿ :
18 ರಿಂದ 65 ವರ್ಷ ವಯಸ್ಸಿನ ಆರೋಗ್ಯವಂತ ವಯಸ್ಕ, ದೇಹಕ್ಕೆ ಪ್ರತಿದಿನ 40 ಮಿಲಿಗ್ರಾಂ ವಿಟಮಿನ್ ಸಿ ಅಗತ್ಯವಿದೆ. ವಿಟಮಿನ್ ಸಿ ಅನ್ನು ದೇಹದಲ್ಲಿ ಶೇಖರಿಸಿಡಲು ಸಾಧ್ಯವಿಲ್ಲದ ಕಾರಣ, ನೀವು ಅದನ್ನು ನಿಮ್ಮ ಆಹಾರದಿಂದ ಪ್ರತಿದಿನ ತೆಗೆದುಕೊಳ್ಳಬೇಕಾಗುತ್ತದೆ. ಈ ಸಂದರ್ಭದಲ್ಲಿ, ಖಂಡಿತವಾಗಿಯೂ ಈ ವಸ್ತುಗಳನ್ನು ತಿನ್ನಿರಿ-
- ಸಿಟ್ರಸ್ ಹಣ್ಣುಗಳಾದ ಕಿತ್ತಳೆ, ಮೌಸಾಂಬಿ, ನಿಂಬೆ (Lemon), ಆಮ್ಲಾ, ಕಿವಿ
- ಸೀಬೆಹಣ್ಣು ಮತ್ತು ಪಪ್ಪಾಯಿ
-ರೆಡ್, ಹಳದಿ, ಹಸಿರು ಕ್ಯಾಪ್ಸಿಕಂ
-ಬೆರ್ರಿ-ಸ್ಟ್ರಾಬೆರಿ, ಬ್ಲ್ಯಾಕ್‌ಬೆರಿ, ಬ್ಲೂಬೆರ್ರಿ, ರಾಸ್‌ಪ್ಬೆರಿ
-ಬ್ರೊಕ್ಲಿ 
- ಥೈಮ್ ಮತ್ತು ಪಾರ್ಸ್ಲಿ  ಎಂದು ಸಂಶೋಧಕರು ಸಲಹೆ ನೀಡಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy


ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.