ಬೆಂಗಳೂರು : ದಿನೇ ದಿನೇ ಸೂರ್ಯನ ಬಿಸಿಲು ಏರತೊಡಗಿದೆ. ಬೇಸಿಗೆ ಮತ್ತು ಬಿಸಿ ಗಾಳಿಗೆ ಸಂಬಂಧಪಟ್ಟಂತೆ ಹವಾಮಾನ ಇಲಾಖೆ ಕೂಡಾ ಎಚ್ಚರಿಕೆ ನೀಡಿದೆ. ಹವಾಮಾನ ಬದಲಾಗುತ್ತಿದ್ದಂತೆಯೇ ನಾವು ಸೇವಿಸುವ ಆಹಾರ ಪದ್ದತಿಯನ್ನು ಕೂಡಾ ಬದಲಿಸಿಕೊಳ್ಳಬೇಕಾಗುತ್ತದೆ.   ಮಳೆ ಅಥವಾ ಚಳಿಗಾಲದಲ್ಲಿ ಸೇವಿಸುವ ಆಹಾರವನ್ನೇ ಬಿರು ಬೇಸಿಗೆಯಲ್ಲಿಯೂ ಸೇವಿಸುತ್ತೇವೆ ಎಂದರೆ ನಮ್ಮ ದೇಹ ಅದನ್ನು ಒಪ್ಪಿಕೊಳ್ಳುವುದಿಲ್ಲ.  ಇದರಿಂದ ಸಮಸ್ಯೆಗಳು ಉಂಟಾಗುತ್ತವೆ. ಬೇಸಿಗೆಯಲ್ಲಿ ದೇಹಕ್ಕೆ ನೀರಿನ ಅವಶ್ಯಕತೆ ಹೆಚ್ಚಾಗಿರುತ್ತದೆ. ಇದಕ್ಕಾಗಿ ದ್ರವ ಪದಾರ್ಥಗಳ ಜೊತೆಗೆ ಕೆಲವು ಹಣ್ಣುಗಳನ್ನು ಕೂಡಾ ಸೇವಿಸಬೇಕಾಗುತ್ತದೆ. ಇಂಥ ಅಧಿಕ ನೀರಿನ ಅಂಶ ಇರುವ ಹಣ್ಣು ಎಂದರೆ ಅದು ಕಲ್ಲಂಗಡಿ. ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣು ಆರೋಗ್ಯಕ್ಕೆ ಹೇಳಿ ಮಾಡಿಸಿರುವ ಹಣ್ಣು. ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಪ್ರಮಾಣ ಹೆಚ್ಚಾಗಿರುತ್ತದೆ. ಇದರಿಂದಾಗಿ ದೇಹ ಹೈಡ್ರೇಟ್ ಆಗಿ ಇಡುತ್ತದೆ. 


COMMERCIAL BREAK
SCROLL TO CONTINUE READING

ಕಲ್ಲಂಗಡಿ ಹಣ್ಣನ್ನು ತಿನ್ನುವುದಕ್ಕೂ ಸಮಯವಿದೆ : 
ಯಾವುದೇ ಹಣ್ಣಾಗಲೀ ಆಹಾರವಾಗಲಿ ಅದನ್ನು ಸೇವಿಸುವುದಕ್ಕೆ ಒಂದು ನಿಯಮವಿರುತ್ತದೆ. ಅದನ್ನು ಯಾವಾಗ ತಿನ್ನಬೇಕು ಎಷ್ಟು ತಿನ್ನಬೇಕು ಎನ್ನುವುದನ್ನು ತಿಳಿದುಕೊಳ್ಳುವುದು ಕೂಡಾ ಮುಖ್ಯವಾಗಿರುತ್ತದೆ. ಈ ವಿಷಯಗಳನ್ನು ಕಲ್ಲಂಗಡಿ ಸೇವಿಸುವ ಮುನ್ನವೂ ತಿಳಿದುಕೊಂಡಿರಬೇಕು. ಉಪಹಾರ ಮತ್ತು ಊಟದ ನಡುವೆ ಕಲ್ಲಂಗಡಿ ಹಣ್ಣನ್ನು ತಿನ್ನಬಾರದು. ಸಂಜೆಯ ವೇಳೆಗೆ ಇದು ಬೆಸ್ಟ್ ಫುಡ್. ರಾತ್ರಿ ಕೂಡಾ ಈ ಹಣ್ಣನ್ನು ತಿನ್ನಬಾರದು. 


ಇದನ್ನೂ ಓದಿ : ಒಡೆದ ತುಟಿಗಳಿಗೆ ಇಲ್ಲಿವೆ ಪರಿಣಾಮಕಾರಿ ಮನೆಮದ್ದುಗಳು..!


ಕಲಂಗಡಿ ಹಣ್ಣಿನ ಪ್ರಯೋಜನ : 
ಕಲ್ಲಂಗಡಿ ಹಣ್ಣಿನಲ್ಲಿ ಅಧಿಕ ಪ್ರಮಾಣದಲ್ಲಿ ವಿಟಮಿನ್ ಸಿ ಕಂಡುಬರುತ್ತದೆ. ವಿಟಮಿನ್ ಸಿಯ ಕಾರಣದಿಂದಾಗಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತದೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಎ ಮತ್ತು ಬೀಟಾ-ಕ್ಯಾರೋಟಿನ್ ತ್ವಚೆಯನ್ನು ಆರೋಗ್ಯಕರವಾಗಿರಿಸುತ್ತದೆ. ಕೂದಲಿನ ಬೆಳವಣಿಗೆಯನ್ನು ಕೂಡಾ ಹೆಚ್ಚಿಸುತ್ತದೆ. 


ತೂಕ ನಷ್ಟಕ್ಕೆ ಸಹಕಾರಿ : 
ತೂಕ ನಷ್ಟಕ್ಕೆ ಕಲ್ಲಂಗಡಿ ಹಣ್ಣು ಸಹಾಯಕ. ಕಲ್ಲಂಗಡಿ ಹಣ್ಣು ಸಿಹಿಯಾಗಿರುತ್ತದೆ ಎನ್ನುವ ಕಾರಣಕ್ಕೆ ಇದರಲ್ಲಿ ಅಧಿಕ ಸಕ್ಕರೆ ಇರುತ್ತದೆ ಎನ್ನುವುದು ಸಾಮಾನ್ಯ ನಂಬಿಕೆ. ಆದರೆ ಇದು ಸುಳ್ಳು. 100 ಗ್ರಾಂ ಕಲ್ಲಂಗಡಿ 6.2 ಗ್ರಾಂ ಸಕ್ಕರೆಯನ್ನು ಹೊಂದಿರುತ್ತದೆ. ಇದು ಕಡಿಮೆ ಕ್ಯಾಲೋರಿಗಳನ್ನು ಒಳಗೊಂಡಿರುವುದರಿಂದ, ತೂಕ ಇಳಿಕೆಗೆ ಸಹಾಯ ಮಾಡುತ್ತದೆ. 


ಇದನ್ನೂ ಓದಿ : ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಒಂದು ಹಣ್ಣು!


ಹೃದಯದ ಆರೋಗ್ಯಕ್ಕೆ : 
ಕಲ್ಲಂಗಡಿ ಅನೇಕ ಪೋಷಕಾಂಶಗಳನ್ನು ಹೊಂದಿರುವ ಹಣ್ಣು. ಇದು ಹೃದಯದ ಆರೋಗ್ಯವನ್ನು ಕಾಪಾಡುತ್ತದೆ. ಕಲ್ಲಂಗಡಿಯಲ್ಲಿರುವ  ಲೈಕೋಪೀನ್ ಕಾರಣದಿಂದಾಗಿ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.   ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕಲ್ಲಂಗಡಿ ಅಮೈನೋ ಆಮ್ಲ ಸಿಟ್ರುಲಿನ್ ಮತ್ತು ನೈಟ್ರಿಕ್ ಆಕ್ಸೈಡ್ ಅನ್ನು ಹೊಂದಿದ್ದು, ರಕ್ತದಲ್ಲಿನ ಸಕ್ಕರೆಯಲ್ಲಿ  ಬಹು ಬೇಗ ಜಾಸ್ತಿಯಾಗದಂತೆ ನೋಡಿಕೊಳ್ಳುತ್ತದೆ. 


ಕಲ್ಲಂಗಡಿ ಹಣ್ಣಿನಲ್ಲಿರುವ ವಿಟಮಿನ್ ಸಿ ಕಾರಣದಿಂದ ಇದು ಹಲ್ಲುಗಳನ್ನು ಬಲಪಡಿಸುತ್ತದೆ. ಒಸಡುಗಳನ್ನು ಕೂಡಾ  ಆರೋಗ್ಯಕರವಾಗಿಡುತ್ತದೆ. ತುಟಿಗಳು ಒಡೆಯದಂತೆ ತಡೆಯುತ್ತದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.