ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಒಂದು ಹಣ್ಣು!

Dragon Fruit To Reduce Cholesterol: ಡ್ರ್ಯಾಗನ್ ಹಣ್ಣನ್ನು ನಿಯಮಿತವಾಗಿ  ಸೇವಿಸುವುದರಿಂದ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ. ಕೆಟ್ಟ ಕೊಲೆಸ್ಟ್ರಾಲ್ ಕಡಿಮೆ ಮಾಡಿ ಹೃದಯದ ಆರೋಗ್ಯವನ್ನು ಕಾಪಾಡಲು ಕೂಡಾ ಈ ಹಣ್ಣು ಸಹಕಾರಿಯಾಗಿದೆ.

Written by - Ranjitha R K | Last Updated : Apr 14, 2023, 12:05 PM IST
  • ಇತ್ತೀಚಿನ ದಿನಗಳಲ್ಲಿ ಕೊಲೆಸ್ಟ್ರಾಲ್ ಕೂಡಾ ಜನರನ್ನು ಬಾಧಿಸುತ್ತಿದೆ.
  • ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ರಕ್ತದ ಹರಿವಿನಲ್ಲಿಯೂ ಅಡಚಣೆ
  • ಕೊಲೆಸ್ಟ್ರಾಲ್ ಗೆ ರಾಮಬಾಣ ಡ್ರ್ಯಾಗನ್ ಹಣ್ಣು
ಕೊಲೆಸ್ಟ್ರಾಲ್ ಸಮಸ್ಯೆಯನ್ನು ಸಂಪೂರ್ಣವಾಗಿ ಕಡಿಮೆ ಮಾಡುತ್ತದೆ ಈ ಒಂದು ಹಣ್ಣು!  title=

Dragon Fruit To Reduce Cholesterol : ಇತ್ತೀಚಿನ ದಿನಗಳಲ್ಲಿ ಹೇಗೆ ಡಯಾಬಿಟೀಸ್ ಎನ್ನುವುದು ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಕಾಡುತ್ತಿದೆಯೋ, ಕೊಲೆಸ್ಟ್ರಾಲ್ ಕೂಡಾ ಅದೇ ರೀತಿ ಜನರನ್ನು ಬಾಧಿಸುತ್ತಿದೆ. ಎಷ್ಟೋ ಸಲ ಕೊಲೆಸ್ಟ್ರಾಲ್ ಇರುವುದೇ ತಿಳಿಯುವುದಿಲ್ಲ. ಆದರೆ ದೇಹ ನೀಡುವ ಸೂಚನೆಗಳನ್ನು ಸೂಕ್ಷ್ಮವಾಗಿ ಗಮನಿಸಿ ಪರೀಕ್ಷೆಗೆ  ಒಳಪಟ್ಟರೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುತ್ತಿರುವುದು ಕಂಡು ಬರುತ್ತದೆ. ಈ ಸಮಸ್ಯೆಯನ್ನು ಸರಿಯಾದ ಸಮಯಕ್ಕೆ ಪತ್ತೆ ಹಚ್ಚಿ ನಿಯಂತ್ರಿಸದಿದ್ದರೆ, ಅದು ರಕ್ತನಾಳಗಳಲ್ಲಿ ಸಂಗ್ರಹವಾಗುತ್ತದೆ. ರಕ್ತ ನಾಳಗಳಲ್ಲಿ ಕೊಲೆಸ್ಟ್ರಾಲ್ ಸಂಗ್ರಹವಾದಾಗ ಅದು ರಕ್ತದ ಹರಿವಿನಲ್ಲಿಯೂ ಅಡಚಣೆ ಉಂಟುಮಾಡುತ್ತದೆ. ಇದರಿಂದಾಗಿ ಬಿಪಿ, ಕೊರೊನರಿ ಆರ್ಟರಿ ಡಿಸೀಸ್, ಟ್ರಿಪಲ್ ವೆಸಲ್ ಡಿಸೀಸ್ ಮತ್ತು ಹೃದಯಾಘಾತದಂತಹ ಮಾರಕ ಕಾಯಿಲೆಗಳು ಕಾಣಿಸಿಕೊಳ್ಳುತ್ತವೆ. ಎಲ್ಲಾ ಕಾಯಿಲೆಗಳಿಗೂ, ಮನೆ ಮದ್ದು ಇರುವಂತೆ ಕೊಲೆಸ್ಟ್ರಾಲ್ ನಿಯಂತ್ರಿಸಬಹುದು.

ಕೊಲೆಸ್ಟ್ರಾಲ್ ಗೆ ರಾಮಬಾಣ ಡ್ರ್ಯಾಗನ್ ಹಣ್ಣು : 
ಕೊಲೆಸ್ಟ್ರಾಲ್ ಸಮಸ್ಯೆಯಿಂದ ಬಳಲುತ್ತಿರುವವರು ನಿಯಮಿತವಾಗಿ ಡ್ರ್ಯಾಗನ್ ಹಣ್ಣನ್ನು ತಿನ್ನುತ್ತಿರಬೇಕು. ಡ್ರ್ಯಾಗನ್ ಹಣ್ಣು ಸೇವಿಸುವ ಮೂಲಕ ರಕ್ತದಲ್ಲಿ ಸಂಗ್ರಹವಾಗಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು  ನಿಯಂತ್ರಿಸುವುದು ಸಾಧ್ಯವಾಗುತ್ತದೆ. ಅಷ್ಟು ಮಾತ್ರವಲ್ಲ ಈ ಹಣ್ಣು ದೇಹಕ್ಕೆ ಇತರ ಹಲವು ರೀತಿಯಲ್ಲಿ ಪ್ರಯೋಜನವನ್ನು ನೀಡುತ್ತದೆ.  

ಇದನ್ನೂ ಓದಿ : Skin Care: ಬೇವಿನ ಜೊತೆ ಈ 3 ವಸ್ತುಗಳನ್ನು ಬೆರೆಸಿ ಮುಖಕ್ಕೆ ಹಚ್ಚಿದರೆ ಒಂದೇ ವಾರದಲ್ಲಿ ಬೆಳ್ಳಗಾಗುವುದು ತ್ವಚೆ!

ಪೋಷಕಾಂಶಗಳ ಗಣಿ ಈ ಹಣ್ಣು  :
ಅದ್ಭುತ ರುಚಿಯನ್ನು ಹೊಂದಿರುವ ಡ್ರ್ಯಾಗನ್ ಹಣ್ಣು  ನೋಡುವುದಕ್ಕೂ  ಆಕರ್ಷಕವಾಗಿ ಕಾಣುತ್ತದೆ. ಈ ಹಣ್ಣಿನಲ್ಲಿ ಜೀವಸತ್ವಗಳು, ಖನಿಜಗಳು ಮತ್ತು ಫೈಟೊನ್ಯೂಟ್ರಿಯೆಂಟ್‌ಗಳು ಸಮೃದ್ಧವಾಗಿವೆ. ಇದಲ್ಲದೆ, ಉತ್ಕರ್ಷಣ ನಿರೋಧಕಗಳು, ಕ್ಯಾರೋಟಿನ್, ಪ್ರೋಟೀನ್ ಗಳು, ಥಯಾಮಿನ್ ಮತ್ತು ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳಿವೆ. ಹೀಗಾಗಿ ಈ ಹಣ್ಣು ಪೌಷ್ಟಿಕಾಂಶದ ಆಗರವಾಗಿದೆ. 

ಡ್ರ್ಯಾಗನ್ ಹಣ್ಣು ತಿನ್ನುವ ಪ್ರಯೋಜನಗಳು :
1. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ : 
ಡ್ರ್ಯಾಗನ್ ಹಣ್ಣಿನಲ್ಲಿ ಬಹುಅಪರ್ಯಾಪ್ತ ಕೊಬ್ಬುಗಳು, ಒಮೆಗಾ-3 ಮತ್ತು ಒಮೆಗಾ-6 ಕೊಬ್ಬಿನಾಮ್ಲಗಳು ಹೇರಳವಾಗಿದ್ದು ಅದು ಕೊಲೆಸ್ಟ್ರಾಲ್ ಅನ್ನು  ನಿಯಂತ್ರಿಸುತ್ತದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ಎಲ್‌ಡಿಎಲ್ ಮಟ್ಟವನ್ನು ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. 

ಇದನ್ನೂ ಓದಿ : Giloy Health Benefits: ಪುರುಷರ ಹಲವು ಲೈಂಗಿಕ ಸಮಸ್ಯೆಗಳಿಗೆ ರಾಮಬಾಣ ಈ ಬಳ್ಳಿ?

2. ಡಯಾಬಿಟಿಸ್‌ನಲ್ಲಿ  ಸಹಕಾರಿ : 
ಡ್ರ್ಯಾಗನ್ ಹಣ್ಣಿನಲ್ಲಿರುವ ಪಾಲಿಫಿನಾಲ್‌ಗಳು, ಥಿಯೋಲ್‌ಗಳು, ಕ್ಯಾರೊಟಿನಾಯ್ಡ್‌ಗಳು ಮತ್ತು ಗ್ಲುಕೋಸಿನೊಲೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ. ಇದರಲ್ಲಿ ಫೈಬರ್ ಅಂಶ ಕೂಡಾ ಅಧಿಕ ಪ್ರಮಾಣದಲ್ಲಿರುವ ಕಾರಣ,  ಏನನ್ನಾದರೂ ತಿಂದ ನಂತರ ಗ್ಲೂಕೋಸ್ ಮಟ್ಟ ಹೆಚ್ಚಾಗದಂತೆ ತಡೆಯುತ್ತದೆ. 

3. ಹೃದಯದ ಆರೋಗ್ಯ ಕಾಪಾಡುತ್ತದೆ : 
ಡ್ರ್ಯಾಗನ್ ಹಣ್ಣಿನಲ್ಲಿ ಸರಿಯಾದ ಪ್ರಮಾಣದ ಮೊನೊಸಾಚುರೇಟೆಡ್ ಕೊಬ್ಬು ಅಡಗಿದೆ. ಇದರಲ್ಲಿರುವ ಆಂಟಿಆಕ್ಸಿಡೆಂಟ್‌ಗಳು ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸಿ, ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡುತ್ತದೆ. 

( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News