Giloy Benefits For Male: ಕೇವಲ ಮಹಿಳೆಯರಷ್ಟೇ ಅಲ್ಲ ಪುರುಷರೂ ಕೂಡ ತಮ್ಮ ಕೆಲ ಆರೋಗ್ಯ ಸಮಸ್ಯೆಗಳನ್ನು ವೈದ್ಯರ ಬಳಿ ಹೇಳಿಕೊಳ್ಳಲು ಹಿಂಜರಿಯುತ್ತಾರೆ. ಇವುಗಳಲ್ಲಿ ಕಡಿಮೆ ವೀರ್ಯಾಣು ಸಂಖ್ಯೆ ಮತ್ತು ಬಂಜೆತನ ಸಮಸ್ಯೆಗಳು ಶಾಮೀಲಾಗಿದ್ದು, ಇವು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಕಾಯಿಲೆಗಳಾಗಿ ಪರಿಣಮಿಸುತ್ತಿವೆ. ಇದೇ ವೇಳೆ, ಹೆಚ್ಚಿನ ಪುರುಷರು ತಮ್ಮ ಸಮಸ್ಯೆಯನ್ನು ವೈದ್ಯರ ಬಳಿ ಹೇಳಿಕೊಳ್ಳಲು ನಾಚಿಕೆಪಡುತ್ತಾರೆ. ಇನ್ನೊಂದೆಡೆ ಕೆಲವರು ವೈದ್ಯರನ್ನು ಸಂಪರ್ಕಿಸದೆ ಪೂರಕಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸುತ್ತಾರೆ. ಪುರುಷರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ನಿವಾರಿಸಲು ಅಮೃತ ಬಳ್ಳಿ ಸಹಾಯ ಮಾಡುತ್ತದೆ. ಪುರುಷರಿಗೆ ಅಮೃತ ಬಳ್ಳಿ ಹೇಗೆ ಪ್ರಯೋಜನಕಾರಿ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಪುರುಷರಿಗೆ ಅಮೃತ ಬಳ್ಳಿ ಸೇವನೆಯಿಂದಾಗುವ ಪ್ರಯೋಜನಗಳು
ಕಾಮೋತ್ತೇಜಕ ಹಾರ್ಮೋನ ಸೃವಿಕೆ ಹೆಚ್ಚಾಗುತ್ತದೆ
ಅಮೃತ ಬಳ್ಳಿ ಒಂದು ನೈಸರ್ಗಿಕ ಕಾಮೋತ್ತೇಜಕ ಮೂಲಿಕೆಯಾಗಿದೆ. ಇದು ಪುರುಷರಲ್ಲಿ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ಕಾಮಾಸಕ್ತಿಯನ್ನು ಹೆಚ್ಚಿಸಲು ಹಾರ್ಮೋನುಗಳನ್ನು ಉತ್ತೇಜಿಸುತ್ತದೆ.
ಶಕ್ತಿಯಲ್ಲಿ ಸುಧಾರಣೆ
ಪುರುಷರ ಬಲ, ಶಕ್ತಿ ಮತ್ತು ತ್ರಾಣವನ್ನು ಸುಧಾರಿಸಲು ಅಮೃತ ಬಳ್ಳಿ ಸಹಾಯ ಮಾಡುತ್ತದೆ. ಅಮೃತ ಬಳ್ಳಿ ಶಕ್ತಿಯುತ ಖಿನ್ನತೆ-ಶಮನಕಾರಿ ಗುಣಗಳನ್ನು ಹೊಂದಿದೆ. ಇದು ಮನಸ್ಸನ್ನು ಶಾಂತಗೊಳಿಸುತ್ತದೆ, ಇದರ ಜೊತೆಗೆ ಒತ್ತಡ, ಕೋಪ ಅಥವಾ ಕಿರಿಕಿರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ವಿರ್ಯಾಣುಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ
ವೀರ್ಯಾಣುಗಳ ಸಂಖ್ಯೆ ಕಡಿಮೆಯಾಗುವುದು ಬಂಜೆತನಕ್ಕೆ ಪ್ರಮುಖ ಒಂದು ಪ್ರಮುಖ ಕಾರಣ. ವೀರ್ಯ ಸಂಖ್ಯೆಯನ್ನು ಹೆಚ್ಚಿಸಲು ನೀವು ಅಮೃತ ಬಳ್ಳಿ ಅನ್ನು ಸೇವಿಸಬಹುದು. ಅಮೃತ ಬಳ್ಳಿ ವೀರ್ಯದ ಗುಣಮಟ್ಟವನ್ನು ಸುಧಾರಿಸುವುದರ ಜೊತೆಗೆ ಅವುಗಳ ಚಲನಶೀಲತೆಯನ್ನು ಹೆಚ್ಚಿಸುತ್ತದೆ.
ಫಲವತ್ತತೆಯನ್ನು ಹೆಚ್ಚಿಸಿ
ಇತ್ತೀಚಿನ ದಿನಗಳಲ್ಲಿ ಪುರುಷರಲ್ಲಿಯೂ ಕೂಡ ಬಂಜೆತನ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತಿದೆ. ನೀವು ಸಹ ಈ ಸಮಸ್ಯೆಯಿಂದ ತೊಂದರೆಗೀಡಾಗಿದ್ದರೆ, ನೀವು ಅಮೃತ ಬಳ್ಳಿ ಸೇವನೆಯನ್ನು ಪ್ರಾರಂಭಿಸಬಹುದು. ಇದು ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ನಿಮ್ಮ ಫಲವತ್ತತೆಯನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ-Diabetic Sugar: ನಿಮ್ಮ ಆಹಾರದಲ್ಲಿ ಈ ಸಕ್ಕರೆಯನ್ನು ಬಳಸಿ, ಮಧುಮೇಹದಿಂದ ದೂರ ಉಳಿಯಿರಿ!
ಅಮೃತ ಬಳ್ಳಿ ಅನ್ನು ಈ ರೀತಿಯಲ್ಲಿ ಸೇವಿಸಿ
1- ಪುರುಷರು ಮಲಗುವ ಮುನ್ನ ಒಂದು ಚಮಚ ಅಮೃತ ಬಳ್ಳಿ ಪುಡಿಯನ್ನು ಸೇವಿಸಬಹುದು.
2- ಪುರುಷರು ಅಮೃತ ಬಳ್ಳಿ ಅನ್ನು ಕಷಾಯ ರೂಪದಲ್ಲಿ ಸೇವಿಸಬಹುದು.
ಇದನ್ನೂ ಓದಿ-Diabetes: ಖಾಲಿ ಹೊಟ್ಟೆ ತುಪ್ಪದಲ್ಲಿ ಬೆರೆಸಿ ಈ ಪದಾರ್ಥ ಸೇವಿಸಿ, ನೈಸರ್ಗಿಕವಾಗಿ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ!
(ಹಕ್ಕುತ್ಯಾಗ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.