Jeera Water For Weight Loss: ಆಹಾರ ಪದಾರ್ಥಗಳ ಸ್ವಾದವನ್ನು ಹೆಚ್ಚಿಸಲು ಪ್ರತಿ ಮನೆಯಲ್ಲಿ ಜೀರಿಗೆಯನ್ನು ಬಳಸುತ್ತಾರೆ. ಆದರೆ ಜೀರಿಗೆ ನಮ್ಮ ಆರೋಗ್ಯಕ್ಕೆ ತುಂಬಾ ಹಿತಕಾರಿಯಾಗಿದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಮೆಗ್ನೀಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮತ್ತು ವಿಟಮಿನ್ ಗಳು ಜೀರಿಗೆಯಲ್ಲಿ ಹೇರಳ ಪ್ರಮಾಣದಲ್ಲಿ ಕಂಡುಬರುತ್ತವೆ. ಇದಲ್ಲದೆ, ಜೀರಿಗೆ ಫೈಬರ್ ಮತ್ತು ಪೊಟ್ಯಾಸಿಯಮ್‌ನ ಉತ್ತಮ ಮೂಲವಾಗಿದೆ. ಅಷ್ಟೇ ಅಲ್ಲ, ಜೀರಿಗೆ ಸೇವನೆಯಿಂದ ದೇಹದ ರೋಗನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.ಇನ್ನೊಂದೆಡೆ, ತೂಕವನ್ನು ಇಳಿಕೆ ಮಾಡಲು ಕೂಡ ಜೀರಿಗೆ ನಮಗೆ ಸಹಾಯ ಮಾಡುತ್ತದೆ. ಹೀಗಿರುವಾಗ, ತೂಕವನ್ನು ಇಳಿಕೆ ಮಾಡಿಕೊಳ್ಳಲು ನಾವು ಜೀರಿಗೆಯನ್ನು ಹೇಗೆ ಬಳಸಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ  ಜೀರಿಗೆಯನ್ನು ಈ ರೀತಿ ಸೇವಿಸಿ-
ಜೀರಿಗೆ ಮತ್ತು ಕರಿಬೇವಿನ ಎಲೆಯ ನೀರು

ಜೀರಿಗೆ ಮತ್ತು ಕರಿಬೇವಿನ ನೀರು ತೂಕ ಇಳಿಕೆಗೆ ತುಂಬಾ ಸಹಕಾರಿಯಾಗಿವೆ. ಇದಕ್ಕಾಗಿ ರಾತ್ರಿಯಿಡಿ ಒಂದು ಲೋಟ ನೀರಿನಲ್ಲಿ, ಜೀರಿಗೆ ಮತ್ತು ಕರಿಬೇವಿನ ಎಲೆಗಳನ್ನು ನೆನೆ ಹಾಕಬೇಕು. ಈ ನೀರು ತೂಕ ಇಳಿಕೆ ಮಾಡು ಸಹಾಯ ಮಾಡುತ್ತದೆ. ಇದಕ್ಕಾಗಿ, ಒಂದು ಲೋಟ ನೀರಿಗೆ ಒಂದು ಚಮಚ ಜೀರಿಗೆ ಮತ್ತು 7 ಕರಿಬೇವಿನ ಎಲೆಗಳನ್ನು ರಾತ್ರಿ ಇಡೀ ನೆನೆಹಾಕಿ. ಈಗ ಈ ನೀರನ್ನು ಬೆಳಗ್ಗೆ ಫಿಲ್ಟರ್ ಮಾಡಿ ಕುಡಿಯಿರಿ. ನಿತ್ಯ ಈ ಪಾನೀಯ ಸೇವನೆಯಿಂದ, ನಿಮ್ಮ ಚಯಾಪಚಯ ಕ್ರಿಯೆಯೇ ದರವು ಹೆಚ್ಚಾಗುತ್ತದೆ. ಅಲ್ಲದೆ ಇದು ನಿಮ್ಮ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರಿಗೆ ಮತ್ತು ಕೊತ್ತಂಬರಿ ನೀರು
ಜೀರಿಗೆ ಮತ್ತು ಕೊತ್ತಂಬರಿ ಎರಡೂ ತೂಕವನ್ನು ಇಳಿಕೆ ಮಾಡಲು ಸಹಾಯ ಮಾಡುತ್ತವೆ. ನೀವೂ ಕೂಡ ತೂಕ ಇಳಿಸಿಕೊಳ್ಳಲು ಬಯುತ್ತಿದ್ದರೆ, ರಾತ್ರಿಯಲ್ಲಿ ಜೀರಿಗೆ ಮತ್ತು ಕೊತ್ತಂಬರಿ ಬೀಜಗಳನ್ನು ನೀರಿನಲ್ಲಿ ಹಾಕಿ. ನಂತರ, ಬೆಳಗ್ಗೆ ಎದ್ದು ಈ ನೀರನ್ನು ಕುಡಿಯಿರಿ. ಇದನ್ನು ಮಾಡುವುದರಿಂದ, ನಿಮಗೆ ದೀರ್ಘಕಾಲದವರೆಗೆ ಹಸಿವಿನ ಅನುಭವ ಉಂಟಾಗುವುದಿಲ್ಲ, ಇದರಿಂದಾಗಿ ನಿಮ್ಮ ತೂಕವು ನಿಯಂತ್ರಣದಲ್ಲಿರುತ್ತದೆ.


ಇದನ್ನೂ ಓದಿ-Diabetes Symptoms: ಶರೀರದ ಈ ಭಾಗ ಹಳದಿ ಬಣ್ಣಕ್ಕೆ ತಿರುಗಿದರೆ ತಕ್ಷಣ ಎಚ್ಚೆತ್ತುಕೊಳ್ಳಿ! ಈ ಲಕ್ಷಣವಾಗಿರಬಹುದು

ಜೀರಿಗೆ ಮತ್ತು ನಿಂಬೆ ನೀರು
ಜೀರಿಗೆಯಂತೆ, ನಿಂಬೆ ಕೂಡ ತೂಕ ಇಳಿಕೆಗೆ ತುಂಬಾ ಉಪಯುಕ್ತ ಸಾಬೀತಾಗಿದೆ ತೂಕ ಇಳಿಕೆಗೆ, 2 ಚಮಚ ಜೀರಿಗೆ ಬೀಜಗಳನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಗ್ಗೆ ಈ ನೀರನ್ನು ಚೆನ್ನಾಗಿ ಕುದಿಸಿ. ಬಳಿಕ ನೀರನ್ನು ಫಿಲ್ಟರ್ ಮಾಡಿ ಮತ್ತು ಅದರಲ್ಲಿ ನಿಂಬೆ ರಸ ಬೆರೆಸಿ ಕುಡಿಯಿರಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜೀರಿಗೆ ನೀರನ್ನು ಕುಡಿಯುವುದರಿಂದ ನಿಮ್ಮ ತೂಕವನ್ನು ನೀವು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು. 


ಇದನ್ನೂ ಓದಿ-Skin Care Tips: ಮಳೆಗಾಲದ ಋತುವಿನಲ್ಲಿ ಕಾಲುಗಳಲ್ಲಿ ಆಗುವ ಈ ಫಂಗಲ್ ಇನ್ಫೆಕ್ಷನ್ ನಿಂದ ಈ ರೀತಿ ಮುಕ್ತಿ ಪಡೆಯಿರಿ

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಇದನ್ನೂ ನೋಡಿ-


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.