What is Disease X: ಪ್ರಸ್ತುತ ಇಡೀ ಜಗತ್ತು ಕೊರೊನಾ ಹೆಸರಿನ ಮಹಾಮಾರಿಯ ಕಪಿಮುಷ್ಠಿಯಲ್ಲಿದೆ. ಆದಷ್ಟು ಬೇಗ ಈ ಮಹಾಮಾರಿ ಮುಕ್ತಾಯಗೊಂಡು ಜನರು ಬೇಗನೆ ನಿಟ್ಟುಸಿರು ಬಿಡುವಂತಾಗಲಿ ಎಂದು ಎಲ್ಲರು ನಿರೀಕ್ಷಿಸುತ್ತಿದ್ದಾರೆ. ಅಷ್ಟೇ ಅಲ್ಲ ಜೀವನ ಕೂಡ ಮತ್ತೆ ಎಂದಿನಂತೆ ಸುಗಮವಾಗಲಿ ಎಂದು ಎಲ್ಲರು ಆಶಿಸುತ್ತಿದ್ದಾರೆ. ಏತನ್ಮಧ್ಯೆ ಮತ್ತೊಂದು ಭಯ ಹುಟ್ಟಿಸುವ ವರದಿಯೊಂದು ಬಹಿರಂಗವಾಗಿದೆ. ವಿಜ್ಞಾನಿಗಳು ನೀಡಿರುವ ಈ ಎಚ್ಚರಿಕೆಯಿಂದ ನೀವೂ ಕೂಡ ಬೆಚ್ಚಿಬೀಳುವಿರಿ.


COMMERCIAL BREAK
SCROLL TO CONTINUE READING

ಜಗತ್ತಿನಲ್ಲಿ ಮತ್ತೊಂದು ಮಹಾಮಾರಿ ಕದ ತಟ್ಟುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಇದೊಂದು ಅಪಾಯಕಾರಿ ವೈರಸ್ ಮಹಾಮಾರಿಯಾಗಿದ್ದು, ಇದಕ್ಕೆ ಡಿಸೀಜ್ ಎಕ್ಸ್ ಎಂದು ಕರೆಯಲಾಗುತ್ತಿದೆ. 


ಇದನ್ನು ಓದಿ-COVID-19 vaccine: Covishield vs Covaxin, ಇಲ್ಲಿದೆ ನೀವು ತಿಳಿದುಕೊಳ್ಳಬೇಕಾದ ಅಂಶಗಳು


Covid-19 ರೀತಿಯಲ್ಲೇ ಈ ಮಾರಕ ರೋಗ ಕೂಡ ಅತಿ ವೇಗವಾಗಿ ಹರಡುತ್ತಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ ಹಾಗೂ ಇದು ಎಬೋಲಾ ವೈರಸ್ ರೀತಿಯಲ್ಲಿ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ.


ಈ ಎಚ್ಚರಿಕೆ ಮಹತ್ವ ಪಡೆದುಕೊಳ್ಳಲು ಕಾರಣ ಎಂದರೆ, ಈ ಎಚ್ಚರಿಕೆಯನ್ನು 1976ರಲ್ಲಿ ಎಬೋಲಾ ಪತ್ತೆಗೆ ಸಹಕಾರ ನೀಡಿದ್ದ ವಿಜ್ಞಾನಿ ಜಿನ್-ಜಾಕ್ಸ್  ಮ್ಯುಎಂಬೆ ನೀಡಿದ್ದಾರೆ.


ಈ ರೋಗ ವಿಶ್ವಾದ್ಯಂತ ಭಯಾನಕ ವಿನಾಶಕ್ಕೆ ಕಾರಣವಾಗಬಹುದು ಎಂದು ಅವರು ಎಚ್ಚರಿಸಿದ್ದಾರೆ. ಆಫ್ರಿಕಾದ ಉಷ್ಣವಲಯದ ಮಳೆಕಾಡಿನಿಂದ ಅನೇಕ ಹೊಸ ರೀತಿಯ ಮಾರಕ ವೈರಸ್‌ಗಳು ಹೊರಬರುತ್ತಿರುವುದರಿಂದ ಜಗತ್ತು ಜಾಗರೂಕರಾಗಿರಬೇಕು ಎಂದು ಟಾಮ್‌ಫಮ್ ಹೇಳಿದ್ದಾರೆ. ಈ ವೈರಸ್‌ಗಳು ಮಾನವ ನಾಗರಿಕತೆಗೆ ಹಾನಿಕಾರಕವಾಗಬಹುದು ಎಂದು ಅವರು ಹೇಳಿದ್ದಾರೆ. 


ಇದನ್ನು ಓದಿ-Corona Vaccine: ಲಸಿಕೆ ಹಾಕಿಸಿಕೊಳ್ಳಬೇಕೇ? Co-WIN App ಮೂಲಕ ಮೊದಲು ಹೆಸರು ನೊಂದಾಯಿಸಿ


ಈ ಎಚ್ಚರಿಕೆ ಬಂದಾಗಿನಿಂದ ಈ ರೋಗವು ಸಾಮಾಜಿಕ ಮಾಧ್ಯಮದಲ್ಲಿ ಟ್ರೆಂಡ್ ಸೃಷ್ಟಿಸಿದೆ. ಅದರಲ್ಲಿ ಏನಾಗುತ್ತದೆ ಮತ್ತು ಅದು ಯಾವಾಗ ಇಡೀ ಜಗತ್ತನ್ನು ಆವರಿಸುತ್ತದೆ ಎಂಬುದನ್ನು ತಿಳಿದುಕೊಳ್ಳಲು ಜನರು ಉತ್ಸುಕರಾಗಿದ್ದಾರೆ.


ಆದರೆ ವಿಜ್ಞಾನಿಗಳು ಮಾತ್ರ ನಾವು ಹೊಸ ಮಹಾಮಾರಿಗಳು ಅಪ್ಪಳಿಸುವ ಕಾಲದಲ್ಲಿದ್ದೇವೆ. ಮತ್ತು ಈ ಮಹಾಮಾರಿಗಳು ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ದೂರಲಿವೆ. ಇದನ್ನು ಎದುರಿಸುವುದು ಹೇಗೆ ಎಂಬುದು ಜನರಿಗೆ ಗೊತ್ತಾಗುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.


ಇದನ್ನು ಓದಿ- BIG NEWS: Covishield, Covaxin ತುರ್ತು ಬಳಕೆಗೆ DCGI ಅನುಮತಿ, ನಿರ್ಣಯ ಸ್ವಾಗತಿಸಿದ WHO


ಡಿಸೀಜ್ ಎಕ್ಸ್, ಕಾರೋನಾ ಮಹಾಮಾರಿಗಿಂತಲೂ ಅಪಾಯಕಾರಿ ಸಾಬೀತಾಗುವ ಸಾಧ್ಯತೆ ಇದೆ. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಇಂಗೆಂಡೆ ಪ್ರಾಂತ್ಯದಲ್ಲಿ ಈ ಮಾರಕ ಕಾಯಿಲೆಗೆ ವ್ಯಕ್ತಿಯೊಬ್ಬ ಬಲಿಯಾಗಿದ್ದಾನೆ. ಅವನಲ್ಲಿ ಈ ರಕ್ತಸ್ರಾವವಾಗುವ ಜ್ವರದ ಆರಂಭಿಕ ಲಕ್ಷಣಗಳು ಕಂಡುಬಂದಿವೆ. ಮೊದಲು ವೈದ್ಯರು ಇದನ್ನು ಎಬೋಲಾ ಎಂದು ಭಾವಿಸಿದ್ದಾರೆ. ಆದರೆ, ಬಳಿಕ ಇದು ಡಿಸೀಜ್ ಎಕ್ಸ್ ನ ಆರಂಭಿಕ ಲಕ್ಷಣಗಳಾಗಿವೆ ಎಂದು ಅವರು ಹೇಳಿದ್ದಾರೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.