World Sleep Day 2023 : ಉತ್ತಮ ನಿದ್ರೆಗಾಗಿ ರಾತ್ರಿ ಊಟದ ಸಮಯದಲ್ಲಿ ಈ ಆಹಾರಗಳನ್ನು ತಪ್ಪಿಸಿ..!
ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಜನರು ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ಈ ವರ್ಷ ಈ ದಿನವನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ನಿದ್ರೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ದಿನ ನಿದ್ರೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2008 ರಿಂದ ವಿಶ್ವ ನಿದ್ರಾ ದಿನವನ್ನು ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
World Sleep Day 2023 : ಪ್ರತಿ ವರ್ಷ ಮಾರ್ಚ್ ತಿಂಗಳಲ್ಲಿ ಜಗತ್ತಿನಾದ್ಯಂತ ಜನರು ವಿಶ್ವ ನಿದ್ರಾ ದಿನವನ್ನು ಆಚರಿಸುತ್ತಾರೆ. ಈ ವರ್ಷ ಈ ದಿನವನ್ನು ಮಾರ್ಚ್ 17 ರಂದು ಆಚರಿಸಲಾಗುತ್ತದೆ. ನಿದ್ರೆಯ ಕೊರತೆಯು ಹಲವು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಹೀಗಾಗಿ ಈ ದಿನ ನಿದ್ರೆ ಮತ್ತು ಅದರ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಹೊಂದಿದೆ. 2008 ರಿಂದ ವಿಶ್ವ ನಿದ್ರಾ ದಿನವನ್ನು ಪ್ರಮುಖ ದಿನಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.
ನಿದ್ರೆಯು ದೇಹ ಮತ್ತು ಮನಸ್ಸು ವಿಶ್ರಾಂತಿ ನೀಡುತ್ತದೆ. ಒಳ್ಳೆಯ ನಿದ್ದೆ ಮನುಷ್ಯನ ಆರೋಗ್ಯಕ್ಕೆ ಬಹಳ ಅವಶ್ಯಕ. ನಾವು ನಮ್ಮ ಜೀವನದ ಮೂರನೇ ಒಂದು ಭಾಗವನ್ನು ನಿದ್ರೆಯಲ್ಲಿ ಕಳೆಯುತ್ತೇವೆ. ಸರಿಯಾಗಿ ನಿದ್ದೆ ಮಾಡದಿದ್ದರೆ ಅದು ನಮ್ಮ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಒಬ್ಬ ವ್ಯಕ್ತಿಯು ಸರಿಯಾಗಿ ನಿದ್ದೆ ಮಾಡುವುದು ಅತ್ಯಗತ್ಯ. ವಯಸ್ಕರು ರಾತ್ರಿಯಲ್ಲಿ ಏಳು ಗಂಟೆಗಳ ಕಾಲ ಮಲಗುವುದರಿಂದ ಮೆದುಳನ್ನು ವಯಸ್ಸಾಗದಂತೆ ರಕ್ಷಿಸಬಹುದು ಎಂದು ಹೊಸ ಸಂಶೋಧನೆ ತೋರಿಸುತ್ತದೆ. ದಿನಕ್ಕೆ ಒಂಬತ್ತು ಗಂಟೆ ನಿದ್ದೆ ಮಾಡುವವರಿಗೆ ಮತ್ತು ಐದು ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಿಗೆ ಜ್ಞಾಪಕ ಶಕ್ತಿ ನಷ್ಟ, ಗಮನ ಕೊರತೆಯಂತಹ ಸಮಸ್ಯೆಗಳು ಕಾಡುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು.
ನಿದ್ರೆಯ ಮೇಲೆ ಪರಿಣಾಮ ಬೀರುವ ಪ್ರಮುಖ ಅಂಶಗಳು
ಒತ್ತಡ, ಲೈಂಗಿಕ ವ್ಯಸನ, ಆತಂಕ, ಖಿನ್ನತೆ, ಗದ್ದಲದ ವಾತಾವರಣ, ಜನದಟ್ಟಣೆ, ಅನಾನುಕೂಲ ಹಾಸಿಗೆ, ಅತಿಯಾದ ಕನಸು ಮತ್ತು ದುಃಸ್ವಪ್ನಗಳು ಸೇರಿದಂತೆ ಔಷಧಿಗಳು ಶಾಂತ ನಿದ್ರೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರುತ್ತವೆ ಎಂದು ಹೇಳಲಾಗುತ್ತದೆ. ಆದರೆ ಈ ಎಲ್ಲಕ್ಕಿಂತ ಹೆಚ್ಚಾಗಿ ರಾತ್ರಿಯ ಊಟವು ನಮ್ಮ ನಿದ್ರೆಯ ಮೇಲೆ ಗಂಭೀರವಾಗಿ ಪರಿಣಾಮ ಬೀರಬಹುದು.
ಅಧ್ಯಯನಗಳ ಪ್ರಕಾರ, ಸರಿಯಾದ ನಿದ್ದೆ ಮಾಡಲು ಮಲಗುವ ಮುನ್ನ ಕನಿಷ್ಠ ಒಂದು ಗಂಟೆ ಮುಂಚಿತವಾಗಿ ರಾತ್ರಿಯ ಊಟವನ್ನು ತಿನ್ನಬೇಕು. ಅದೇ ರೀತಿ, ಲ್ಯಾಪ್‌ಟಾಪ್ ಮತ್ತು ಮೊಬೈಲ್ ಫೋನ್‌ಗಳಂತಹ ಎಲೆಕ್ಟ್ರಾನಿಕ್ ಸಾಧನಗಳ ಮಲಗುವ ಕನಿಷ್ಠ ಒಂದು ಗಂಟೆ ಮೊದಲು ಬಳಸುವುದನ್ನು ನಿಲ್ಲಿಸಬೇಕು. ಹಗಲು ನಿದ್ರೆ ಮಾಡುವುದನ್ನು ಮೊದಲು ತಪ್ಪಿಸಿ. ಪ್ರತಿದಿನ ವ್ಯಾಯಾಮ ಮಾಡಿ ಮತ್ತು ನಿಯಮಿತವಾಗಿ ಪ್ರತಿದಿನ ಒಂದೇ ಸಮಯದಲ್ಲಿ ಮಲಗಲು ಪ್ರಯತ್ನಿಸಿ. ಮಲಗುವ ಮುನ್ನ ನಿಮ್ಮ ನೆಚ್ಚಿನ ಪುಸ್ತಕವನ್ನು ಓದಿ, ಇವೆಲ್ಲವೂ ನಿಮಗೆ ಉತ್ತಮ ನಿದ್ರೆ ಹೊಂದಲು ಸಹಾಯ ಮಾಡುತ್ತದೆ.
ಇಷ್ಟಲ್ಲದೆ, ರಾತ್ರಿಯ ಸಮಯದಲ್ಲಿ ನಾವು ಸೇವಿಸುವ ಆಹಾರವು ನಮ್ಮ ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ. ಉತ್ತಮ ನಿದ್ರೆಯನ್ನು ಖಚಿತಪಡಿಸಿಕೊಳ್ಳಲು ರಾತ್ರಿಯ ಊಟದ ಸಮಯದಲ್ಲಿ ಕೆಲವು ಆಹಾರಗಳನ್ನು ತ್ಯಜಿಸಲು ಸಲಹೆ ನೀಡಲಾಗುತ್ತದೆ.
ಇದನ್ನೂ ಓದಿ: Kidney Health : ಕಿಡ್ನಿ ಆರೋಗ್ಯಕ್ಕೆ ಅನುಸರಿಸಿ ಈ ನಿಯಮ : ಯಾವಾಗಲೂ ಫಿಟ್ ಆಗಿರುತ್ತದೆ!
ಉತ್ತಮ ನಿದ್ರೆಗಾಗಿ ರಾತ್ರಿ ಊಟದ ಸಮಯದಲ್ಲಿ ಈ ಆಹಾರಗಳನ್ನು ತಪ್ಪಿಸಿ..
ಕೆಫೀನ್ : ಕೆಫೀನ್ ನಿದ್ರಾ ಭಂಗಕಾರಕವಾಗಿದೆ. ಈ ಉತ್ತೇಜಕವನ್ನು ದೇಹದಿಂದ ಹೊರಹಾಕಲು ಸುಮಾರು ಆರು ಗಂಟೆಗಳ ಕಾಲ ತೆಗೆದುಕೊಳ್ಳುತ್ತದೆ. ಆದ್ದರಿಂದ, ಮಲಗುವ ಮುನ್ನ ಕಾಫಿ, ಟೀ, ಎನರ್ಜಿ ಡ್ರಿಂಕ್ಸ್ ಅಥವಾ ಯಾವುದೇ ಕೆಫೀನ್ ಇರುವ ಪಾನೀಯಗಳನ್ನು ಸೇವಿಸಬೇಡಿ.
ಆಲ್ಕೋಹಾಲ್: ಆಲ್ಕೋಹಾಲ್ ಅರೆನಿದ್ರಾವಸ್ಥೆಯನ್ನು ಉಂಟುಮಾಡುತ್ತದೆಯಾದರೂ, ಇದು ನಿದ್ರೆಗೆ ಅಡ್ಡಿಪಡಿಸುತ್ತದೆ. ಅಂದರೆ, ಇದು ಆಗಾಗ್ಗೆ ರಾತ್ರಿ ಎಚ್ಚರಗೊಳ್ಳಲು ಕಾರಣವಾಗಬಹುದು. ಮಲಗುವ ಮುನ್ನ ಮದ್ಯವನ್ನು ತ್ಯಜಿಸುವುದು ಉತ್ತಮ.
ಮಸಾಲೆಯುಕ್ತ ಮತ್ತು ಕೊಬ್ಬಿನ ಆಹಾರವನ್ನು ತಪ್ಪಿಸಿ : ರಾತ್ರಿಯಲ್ಲಿ ಹೆಚ್ಚು ಮಸಾಲೆ ಮತ್ತು ಕೊಬ್ಬಿನ ಆಹಾರವನ್ನು ಸೇವಿಸುವುದರಿಂದ ಎದೆಯುರಿ, ಅಜೀರ್ಣ, ಆಮ್ಲೀಯತೆ ಇತ್ಯಾದಿಗಳಿಗೆ ಕಾರಣವಾಗಬಹುದು. ಇದು ನಿದ್ರೆಗೆ ಭಂಗ ತರಬಹುದು.
ಸಕ್ಕರೆ ಆಹಾರಗಳು: ಸಕ್ಕರೆಯಲ್ಲಿ ಸಮೃದ್ಧವಾಗಿರುವ ಆಹಾರಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸಬಹುದು ಮತ್ತು ನಿದ್ರಾಹೀನತೆಗೆ ಕಾರಣವಾಗಬಹುದು. ಆದ್ದರಿಂದ ಮಲಗುವ ಮುನ್ನ ಈ ರೀತಿಯ ಆಹಾರಗಳನ್ನು ತ್ಯಜಿಸುವುದು ಉತ್ತಮ.
ಹೆಚ್ಚಿನ ಪ್ರೋಟೀನ್ ಆಹಾರಗಳು: ರಾತ್ರಿಯಲ್ಲಿ ಪ್ರೋಟೀನ್ ಭರಿತ ಆಹಾರವನ್ನು ಜೀರ್ಣಿಸಿಕೊಳ್ಳಲು ದೇಹಕ್ಕೆ ಸವಾಲಾಗಿದೆ. ಇದು ಹೆಚ್ಚು ಚಡಪಡಿಕೆಯನ್ನು ಉಂಟುಮಾಡುತ್ತದೆ ಮತ್ತು ನಿದ್ರೆಯನ್ನು ಅಡ್ಡಿಪಡಿಸುತ್ತದೆ. ಆದ್ದರಿಂದ, ಮಲಗುವ ಮುನ್ನ ಹೆಚ್ಚಿನ ಕೊಬ್ಬು ಮತ್ತು ಹೆಚ್ಚಿನ ಪ್ರೋಟೀನ್ ಆಹಾರಗಳನ್ನು ತ್ಯಜಿಸುವುದು ಉತ್ತಮ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.