Sugarcane Juice Benefits : ಬೇಸಿಗೆಯಲ್ಲಿ ತಣ್ಣನೆಯ ಪದಾರ್ಥಗಳನ್ನು ಸವಿಯುವುದೇ ಎಲ್ಲರಿಗೂ ಇಷ್ಟ. ಅದಕ್ಕಾಗಿಯೇ ಹೆಚ್ಚಿನವರು ಬೇಸಿಗೆಯಲ್ಲಿ ತಂಪು ಪಾನೀಯ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸುತ್ತಾರೆ. ಆದರೆ ತಂಪು ಪಾನೀಯಗಳ ಬದಲಿಗೆ ಬೇಸಿಗೆಯಲ್ಲಿ ಕಬ್ಬಿನ ಹಾಲನ್ನು ಸೇವಿಸುವುದು ಆರೋಗ್ಯಕ್ಕೆ ಬಹಳ ಸಹಕಾರಿ. ಕಬ್ಬಿನ ಜ್ಯೂಸ್ ಕುಡಿಯುವುದರಿಂದ ದಾಹ ತಣಿಯುವುದಲ್ಲದೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಕಬ್ಬಿನ ಹಾಲು ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಐರನ್ ನಂಥಹ ಗುಣಗಳು ಅಡಗಿವೆ. ಕಬ್ಬಿನ ಹಾಲು ಕುಡಿಯುವುದರಿಂದ ರೋಗ ನಿರೋಧಕ ಶಕ್ತಿಯೂ ಹೆಚ್ಚಾಗುತ್ತದೆ.
ಕಬ್ಬಿನ ರಸವನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳು :
ರೋಗನಿರೋಧಕ ಶಕ್ತಿ ಹೆಚ್ಚುತ್ತದೆ :
ಕಬ್ಬಿನ ರಸವು ನೈಸರ್ಗಿಕ ರೋಗನಿರೋಧಕ ಶಕ್ತಿ ವರ್ಧಕ ಪಾನೀಯವಾಗಿದೆ. ಇದು ಆಂಟಿಆಕ್ಸಿಡೆಂಟ್ ಮತ್ತು ಫೋಟೊಪ್ರೊಟೆಕ್ಟಿವ್ ಅಂಶಗಳನ್ನು ಒಳಗೊಂಡಿದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಮತ್ತೊಂದೆಡೆ, ಪ್ರತಿದಿನ ಕಬ್ಬಿನ ಹಾಲನ್ನು ಸೇವಿಸಿದರೆ, ರೋಗನಿರೋಧಕ ಶಕ್ತಿ ಬಲಗೊಳ್ಳುತ್ತದೆ ಮತ್ತು ಅನೇಕ ರೋಗಗಳಿಂದ ಮುಕ್ತರಾಗುತ್ತೀರಿ.
ಇದನ್ನೂ ಓದಿ : ಈ ನಾಲ್ಕು ಕಾಯಿಲೆಗಳನ್ನು ಶಾಶ್ವತವಾಗಿ ದೂರವಿಡುತ್ತದೆ ಹಲಸಿನ ಹಣ್ಣು
ದೇಹದಲ್ಲಿ ಶಕ್ತಿ ಉಳಿಯುತ್ತದೆ :
ಕಬ್ಬಿನ ರಸವು ಸೂಪರ್ ಎನರ್ಜಿ ಡ್ರಿಂಕ್ ಆಗಿದೆ. ಅದಕ್ಕಾಗಿಯೇ ಇದನ್ನು ಸೇವಿಸಿದರೆ ಶಕ್ತಿಯ ಮಟ್ಟವು ಹೆಚ್ಚಾಗುತ್ತದೆ ಮತ್ತು ಆಯಾಸ ದೂರವಾಗುತ್ತದೆ. ಅಷ್ಟೇ ಅಲ್ಲ ಇದನ್ನು ಸೇವಿಸುವುದರಿಂದ ನಿರ್ಜಲೀಕರಣ ಸಮಸ್ಯೆ ದೂರವಾಗುತ್ತದೆ.
ಮೂಳೆಗಳು ಗಟ್ಟಿಯಾಗುತ್ತವೆ :
ಕಬ್ಬಿನ ರಸವನ್ನು ಕುಡಿಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ. ಇದರಲ್ಲಿ ಕ್ಯಾಲ್ಸಿಯಂ ಮತ್ತು ರಂಜಕದಂತಹ ಪೋಷಕಾಂಶಗಳಿದ್ದು, ಮೂಳೆಗಳನ್ನು ಸದೃಢವಾಗಿರಿಸುತ್ತದೆ. ಪ್ರತಿದಿನ ಕಬ್ಬಿನ ರಸವನ್ನು ಕುಡಿಯುವುದರಿಂದ ಮೂಳೆ ನೋವಿನಿಂದ ಪರಿಹಾರ ಸಿಗುತ್ತದೆ.
ಇದನ್ನೂ ಓದಿ : ಹಲವು ಕಾಯಿಲೆಗಳ ಅಪಾಯ ಕಡಿಮೆ ಮಾಡಲು ಈ ಹಣ್ಣು ಒಂದು ವರದಾನಕ್ಕೆ ಸಮಾನ!
ಯಕೃತ್ತು ಆರೋಗ್ಯಕರವಾಗಿರುತ್ತದೆ :
ಕಬ್ಬಿನ ರಸವು ಯಕೃತ್ತಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಏಕೆಂದರೆ, ಇದು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ