Kidney Health : ಕಿಡ್ನಿ ಆರೋಗ್ಯಕ್ಕೆ ಅನುಸರಿಸಿ ಈ ನಿಯಮ : ಯಾವಾಗಲೂ ಫಿಟ್ ಆಗಿರುತ್ತದೆ!

Kidney : ಇತ್ತೀಚಿನ ದಿನಗಳಲ್ಲಿ ಜನರು ಅನಾರೋಗ್ಯಕರ ಜೀವನಶೈಲಿಯಿಂದ ಕಿಡ್ನಿ ಸಂಬಂಧಿತ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಇತರ ಅನೇಕ ಕಾಯಿಲೆಗಳು ಸಹ ಜನರನ್ನು ಅವರಿಸಿಕೊಳ್ಳುತ್ತಿವೆ, ಆದರೆ ಮೂತ್ರಪಿಂಡದ ಸಮಸ್ಯೆಯ ಹಿಂದಿನ ಕಾರಣ ನೀವು ಪ್ರತಿ ದಿನ ಮಾಡುವ ಕೆಲವು ತಪ್ಪುಗಳು..!

Written by - Channabasava A Kashinakunti | Last Updated : Mar 16, 2023, 05:29 PM IST
  • ಕಿಡ್ನಿಯನ್ನು ಈ ರೀತಿ ನೋಡಿಕೊಳ್ಳಿ
  • ಅತಿಯಾಗಿ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಿ
  • ಆರೋಗ್ಯಕರ ಆಹಾರವನ್ನು ಸೇವಿಸಿ
Kidney Health : ಕಿಡ್ನಿ ಆರೋಗ್ಯಕ್ಕೆ ಅನುಸರಿಸಿ ಈ ನಿಯಮ : ಯಾವಾಗಲೂ ಫಿಟ್ ಆಗಿರುತ್ತದೆ! title=

How To Take Care Of Kidney : ಇತ್ತೀಚಿನ ದಿನಗಳಲ್ಲಿ ಜನರು ಅನಾರೋಗ್ಯಕರ ಜೀವನಶೈಲಿಯಿಂದ ಕಿಡ್ನಿ ಸಂಬಂಧಿತ ಕಾಯಿಲೆಗಳನ್ನು ಎದುರಿಸುತ್ತಿದ್ದಾರೆ. ಇದರಿಂದಾಗಿ ಇತರ ಅನೇಕ ಕಾಯಿಲೆಗಳು ಸಹ ಜನರನ್ನು ಅವರಿಸಿಕೊಳ್ಳುತ್ತಿವೆ, ಆದರೆ ಮೂತ್ರಪಿಂಡದ ಸಮಸ್ಯೆಯ ಹಿಂದಿನ ಕಾರಣ ನೀವು ಪ್ರತಿ ದಿನ ಮಾಡುವ ಕೆಲವು ತಪ್ಪುಗಳು..!

ಹೌದು.. ನಿಮ್ಮ ಮೂತ್ರಪಿಂಡವನ್ನು ಆರೋಗ್ಯಕರವಾಗಿ ಇರಿಸಿಕೊಳ್ಳಲು ನೀವು ಬಯಸಿದರೆ, ನೀವು ಕೆಲವು ವಿಷಯಗಳನ್ನು ನೋಡಿಕೊಳ್ಳಬೇಕು. ಕಿಡ್ನಿ ಸಮಸ್ಯೆಯನ್ನು ಯಾವ ರೀತಿಯಲ್ಲಿ ಹೋಗಲಾಡಿಸಬಹುದು ಮತ್ತು ಅದನ್ನು ಆರೋಗ್ಯವಾಗಿರಿಸಿಕೊಳ್ಳುವುದು ಹೇಗೆ ಎಂಬುದನ್ನು ಈ ಕೆಳಗಿದೆ ಓದಿ..

ಇದನ್ನೂ ಓದಿ : Health Tips : ಪ್ರತಿದಿನ ರಾತ್ರಿ 2 ಲವಂಗ ಸೇವಿಸಿದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಲಾಭ ಗೋತ್ತಾ?

ಕಿಡ್ನಿಯನ್ನು ಈ ರೀತಿ ನೋಡಿಕೊಳ್ಳಿ

ಅತಿಯಾಗಿ ಔಷಧಿ ತೆಗೆದುಕೊಳ್ಳುವುದನ್ನು ತಪ್ಪಿಸಿ

ಆಗೊಮ್ಮೆ ಈಗೊಮ್ಮೆ ಔಷಧ ಸೇವಿಸಲು ಆರಂಭಿಸುವ ಅಭ್ಯಾಸ ಬಹುತೇಕರಿಗೆ ಇದೆ. ಆದರೆ ಇದು ನಿಮ್ಮ ಕಿಡ್ನಿ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಗೊತ್ತಾ. ಏಕೆಂದರೆ ಔಷಧಿಗಳು ಮೂತ್ರಪಿಂಡಗಳಿಗೆ ಹಾನಿಯನ್ನುಂಟುಮಾಡುತ್ತವೆ. ಅದಕ್ಕಾಗಿಯೇ ವೈದ್ಯರ ಸಲಹೆಯಿಲ್ಲದೆ ಔಷಧಿ ಸೇವಿಸಬೇಡಿ.

ಆರೋಗ್ಯಕರ ಆಹಾರವನ್ನು ಸೇವಿಸಿ 

ಕಿಡ್ನಿಯನ್ನು ಆರೋಗ್ಯವಾಗಿಡಲು ಉತ್ತಮ ಆಹಾರ ಕ್ರಮವನ್ನು ತೆಗೆದುಕೊಳ್ಳಿ, ಇದರಿಂದ ನಿಮಗೆ ಅಧಿಕ ರಕ್ತದೊತ್ತಡ, ಬೊಜ್ಜು ಮತ್ತು ಮಧುಮೇಹದಂತಹ ಸಮಸ್ಯೆಗಳು ಬರುವುದಿಲ್ಲ. ಅದೇ ಸಮಯದಲ್ಲಿ, ಆಹಾರದಲ್ಲಿ ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳನ್ನು ತಿನ್ನಿರಿ.

ಹೆಚ್ಚು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯುವುದರಿಂದ ಕಿಡ್ನಿ ಆರೋಗ್ಯಕರವಾಗಿರುತ್ತದೆ. ಏಕೆಂದರೆ ನೀರು ಕುಡಿಯುವುದರಿಂದ ಕಿಡ್ನಿಯಲ್ಲಿರುವ ವಿಷಕಾರಿ ಅಂಶ ಹೊರಹೋಗುತ್ತದೆ. ಇದರಿಂದಾಗಿ ನಿಮಗೆ ಕಲ್ಲುಗಳು ಅಥವಾ ಮೂತ್ರಪಿಂಡದ ಸೋಂಕಿನಂತಹ ಸಮಸ್ಯೆಗಳಿಲ್ಲ.

ಇದನ್ನೂ ಓದಿ : Hair Fall Control : ಕೂದಲು ಉದುರುವುದಕ್ಕೆ ಇಲ್ಲಿದೆ ಮನೆ ಮದ್ದು : ತಲೆಹೊಟ್ಟು ಸಮಸ್ಯೆಗೆ ಹೇಳಿ ಗುಡ್ ಬೈ!

ಯಾವುದೇ ರೀತಿಯ ಮಾದಕತೆಯಿಂದ ದೂರವಿರಿ

ಧೂಮಪಾನವು ಮೂತ್ರಪಿಂಡವನ್ನು ಹಾನಿಗೊಳಿಸುತ್ತದೆ. ಮತ್ತೊಂದೆಡೆ, ಆಲ್ಕೋಹಾಲ್ ಸೇವನೆಯಿಂದ, ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಕಿಡ್ನಿ ಸಮಸ್ಯೆ ಇರಬಾರದು ಎಂದು ಬಯಸಿದರೆ ತಕ್ಷಣ ಧೂಮಪಾನ ಮತ್ತು ಮದ್ಯಪಾನದಿಂದ ಅಂತರ ಕಾಯ್ದುಕೊಳ್ಳಬೇಕು.

ದೈನಂದಿನ ವ್ಯಾಯಾಮ

ಕಿಡ್ನಿ ಆರೋಗ್ಯವಾಗಿರಲು ಪ್ರತಿದಿನ 30 ನಿಮಿಷಗಳ ಕಾಲ ವ್ಯಾಯಾಮ ಮಾಡಿ. ಈ ಕಾರಣದಿಂದಾಗಿ, ಮಧುಮೇಹ ಮತ್ತು ಹೃದ್ರೋಗದ ದೂರು ಸಹ ಕಡಿಮೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News