ಬೆಂಗಳೂರು : ಬಹುಶಃ ಹಾಲು ಎಲ್ಲರೂ ಕುಡಿಯುತ್ತಾರೆ. ಹಾಲು (Milk) ಕುಡಿಯುವುದಕ್ಕೂ ಒಂದು ಹೊತ್ತು ಗೊತ್ತು ಇರುತ್ತದೆ. ಹಾಲನ್ನು ಯಾವ ಹೊತ್ತಿಗೆ ಕುಡಿದರೆ ಆರೋಗ್ಯಕ್ಕೆ ಹಿತಕಾರಿ. ಯಾವ ಟೈಮ್ ನಲ್ಲಿ ಹಾಲು ಕುಡಿಯಬಾರದು. ಹೊತ್ತುಗೊತ್ತುನೋಡಿ ಹಾಲು ಕುಡಿದರೆ ಏನು ಲಾಭ ನೋಡೋಣ. ಆಹಾರ ತಜ್ಞರು ನೀಡಿರುವ ಅಭಿಪ್ರಾಯಗಳನ್ನು ಏಕತ್ರ ಕ್ರೋಡಿಕರಿಸಿ ಇಲ್ಲಿ ನೀಡಲಾಗಿದೆ. 


COMMERCIAL BREAK
SCROLL TO CONTINUE READING

1. ಬೆಳಗ್ಗೆ ಹಾಲು ಕುಡಿದರೆ ಲಾಭ ಏನು..?
ಹಾಲಿನಲ್ಲಿ (Milk) ಕ್ಯಾಲ್ಸಿಯಂ, ಮೆಗ್ನೇಶಿಯಂ, ಪೊಟಾಶಿಯಂ, ಪ್ರೊಟೀನ್ ವಿಟಮಿನ್ ಭರಪೂರವಾಗಿರುತ್ತದೆ. ಬೆಳಗೆ ಬ್ರೇಕ್ ಫಾಸ್ಟ್ ಗೆ (Break fast) ಹಾಲು ಕುಡಿದರೆ ಅದು ಮೂಳೆಯ ಬೆಳವಣಿಗೆಗೆ ಬೆಸ್ಟ್. ಜೊತೆಗೆ ಸಮೃದ್ಧ ವಿಟಮಿನ್ ಸಿಗುವ ಕಾರಣ ನೀವು ದಿನವಿಡೀ ಉಲ್ಲಸಿತರಾಗಿರುತ್ತೀರಿ.


2. ಬೆಳಗ್ಗೆ ಹಾಲು ಕುಡಿದರೆ ಹಾನಿ ಏನು..?
ಯಾರಿಗೆ ಜೀರ್ಣ ಕ್ರೀಯೆಯಲ್ಲಿ (Digestion) ಸಮಸ್ಯೆ ಇದೆಯೋ ಅವರು ಬೆಳಗ್ಗೆ ಹಾಲು ಕುಡಿಯಬಾರದು. ಅಂಥವರು ಬೆಳಗೆದ್ದು ಹಾಲು ಕುಡಿದರೆ ದಿನವಿಡೀ ಹೊಟ್ಟೆ ಉಬ್ಬರಿಸಿದಂತೆ ಕಾಣುತ್ತದೆ.  ಕೆಲವರಿಗೆ ಹೊಟ್ಟೆ ನೋವು, ಅಜೀರ್ಣ ಕೂಡಾ ಕಾಣಿಸಿಕೊಳ್ಳುತ್ತದೆ.


ಇದನ್ನೂ ಓದಿ : Garlic Juice Benefits: ಬೆಳ್ಳುಳ್ಳಿ ರಸದ ಪ್ರಯೋಜನಗಳ ಬಗ್ಗೆ ತಪ್ಪದೇ ತಿಳಿಯಿರಿ


3. ರಾತ್ರಿ ಹಾಲು ಕುಡಿದರೆ ಲಾಭ
ಆಯುರ್ವೇದ (Ayurveda) ಪ್ರಕಾರ ರಾತ್ರಿ ಬಿಸಿ ಹಾಲು ಕುಡಿದರೆ ಮನಸ್ಸು ರಿಲ್ಯಾಕ್ಸ್ ಆಗುತ್ತದೆ. ದೇಹಕ್ಕೂ ಆರಾಮ ಸಿಗುತ್ತದೆ.  ರಾತ್ರಿ ಹಾಲು ಕುಡಿದರೆ ಹೊಟ್ಟೆ ತುಂಬುತ್ತದೆ. ನಡುರಾತ್ರಿ ಅಕಾಲ ಹಸಿವು ಆಗುವುದಿಲ್ಲ. ಹಾಲು ನಿದ್ರೆಯ ಪ್ರಚೋದಕ ಹಾಗಾಗಿ, ಚೆನ್ನಾಗಿ ನಿದ್ದೆ ಬರುತ್ತದೆ.


4. ರಾತ್ರಿ ಹಾಲು ಕುಡಿಯುವುದರಿಂದ ಆಗುವ ನಷ್ಟ ಏನು..?
ಲ್ಯಾಕ್ಟೋ ಇನ್ಟಾರೆನ್ಸ್ ಕಾಯಿಲೆ ಇರುವವರು ರಾತ್ರಿ ಹಾಲು ಕುಡಿಯಲೇ ಬಾರದು. ಇನ್ಸುಲಿನ್ ಸಮಸ್ಯೆ ಇರುವವರು ವೈದ್ಯರ ಸಲಹೆ ಬಳಿಕವೇ ರಾತ್ರಿ ಹಾಲು ಕುಡಿಯಬೇಕು. ಇಲ್ಲದೇ ಹೋದರೆ ರಾತ್ರಿ ಹೊತ್ತು ಇನ್ಸುಲಿನ್ (Insulin) ಹೆಚ್ಚಾಗುವ ಅಪಾಯ ಇದೆ. 


ಇದನ್ನೂ ಓದಿ : ನಿಷಿದ್ಧ.! ಮೊಸರಿನ ಜೊತೆ ಈ ಆಹಾರಗಳನ್ನು ತಿನ್ನಲೇಬಾರದು..!


5. ಹಾಲು ಕುಡಿಯಲು ಯೋಗ್ಯ ಸಮಯ ಯಾವುದು.?
ತಜ್ಞರ ಪ್ರಕಾರ ಹಾಲನ್ನು ಯಾವ ಹೊತ್ತು ಬೇಕಾದರೂ ಕುಡಿಯಬಹುದು. ಅದಕ್ಕೆ ಯಾವುದೇ ಶಿಫಾರಸು ಸಿಗುವುದಿಲ್ಲ. ಆದರೆ, ನೀವು ತೂಕ ಕಡಿಮೆ ಮಾಡಲು ವರ್ಕೌಟ್ ಮಾಡುತ್ತೀರಾದರೆ, ವರ್ಕೌಟ್ (work out)  ಆದಮೇಲೆ ಹಾಲು ಕುಡಿಯಿರಿ.

 


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.