Triphala for diabetes : ಆಯುರ್ವೇದದಲ್ಲಿ ಅನೇಕ ರೋಗಗಳಿಗೆ ಪರಿಹಾರ ಹೇಳಲಾಗುತ್ತದೆ.  ಆಯುರ್ವೇದದಲ್ಲಿ ಹೇಳಲಾಗುವ ಪರಿಹಾರವನ್ನು ಸರಿಯಾದ ರೀತಿಯಲ್ಲಿ ಅನುಸರಿಸಿದರೆ, ಆ ರೋಗವನ್ನು ಮೂಲದಿಂದ ತೊಡೆದುಹಾಕಲು ಸಹಾಯ ಮಾಡುತ್ತವೆ. ಈ ರೋಗಗಳಲ್ಲಿ ಒಂದು ಮಧುಮೇಹ. ಇದು ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಯಾದ ಕಾರಣ ಮಧುಮೇಹವನ್ನು ಮೂಲದಿಂದ ನಿವಾರಿಸುವುದು ಸ್ವಲ್ಪ ಕಷ್ಟ. ಮಧುಮೇಹದಲ್ಲಿ, ರಕ್ತದಲ್ಲಿನ ಸಕ್ಕರೆಯ ಪ್ರಮಾಣದಲ್ಲಿ  ಏರಿಳಿತ ಕಾಣುತ್ತಲೇ ಇರುತ್ತವೆ.  ಆದರೆ ಆಯುರ್ವೇದದಲ್ಲಿ ಬರೆದಿರುವ ಕೆಲವು ವಿಷಯಗಳ ಸಹಾಯದಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬಹುದು. ಮಧುಮೇಹದಲ್ಲಿ'ಸಂಜೀವನಿ'ಯಾಗಿ ಕಾರ್ಯನಿರ್ವಹಿಸಬಲ್ಲ ಒಂದು ಗಿಡಮೂಲಿಕೆ ಎಂದರೆ ತ್ರಿಫಲ. 


COMMERCIAL BREAK
SCROLL TO CONTINUE READING

ತ್ರಿಫಲ ಎಂದರೇನು ?: 
ತ್ರಿಫಲ ಮೂರು ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವಾಗಿದೆ. ತ್ರಿಫಲಾ ಕಪ್ಪುಅಳಲೆಕಾಯಿ, ಶಾಂತಿ ಮರದ ಕಾಯಿ ಮತ್ತು ನೆಲ್ಲಿಕಾಯಿಯಿಂದ ಮಾಡಿದ ಆಯುರ್ವೇದ ಔಷಧವಾಗಿದೆ. ಈ ಮೂರೂ ಕಾಯಿಗಳಿಂದ ವಿಭಿನ್ನ ಪ್ರಯೋಜನಗಳು ಸಿಗುತ್ತವೆ. ನಿಮ್ಮ ಜೀರ್ಣಾಂಗ ವ್ಯವಸ್ಥೆಯಲ್ಲಿರುವ ಕಿಣ್ವಗಳನ್ನು ನಿಯಂತ್ರಿಸುವ ಮೂಲಕ ಕಪ್ಪುಅಳಲೆಕಾಯಿ, ಶಾಂತಿ ಮರದ ಕಾಯಿ ಕೆಲಸ ಮಾಡುತ್ತವೆ. ಇದಲ್ಲದೆ, ನೆಲ್ಲಿ ಕಾಯಿಯಲ್ಲಿ ಉತ್ಕರ್ಷಣ ನಿರೋಧಕಗಳು ಇರುತ್ತವೆ. ಇದು ನಿಮ್ಮ ರಕ್ತದಲ್ಲಿರುವ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ.  


ಇದನ್ನೂ ಓದಿ : Health Tips: ಪುರುಷರು ಪ್ರತಿದಿನ ಜೇನುತುಪ್ಪ, ಒಣದ್ರಾಕ್ಷಿ ತಿಂದ್ರೆ ಸಿಗುತ್ತೆ ಇಷ್ಟೆಲ್ಲ ಲಾಭ


ಮಧುಮೇಹದಲ್ಲಿ ತ್ರಿಫಲ :
ಆಯುರ್ವೇದದ ಪ್ರಕಾರ, ತ್ರಿಫಲವು ನಮ್ಮ ಮೇದೋಜ್ಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿಸಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ತ್ರಿಫಲ ಎಂಬ ಈ ಆಯುರ್ವೇದ ಮೂಲಿಕೆಯಿಂದ ಅಂಗಾಂಗಗಳು ಉತ್ತೇಜಿತವಾಗುತ್ತವೆ. ಇದರಿಂದಾಗಿ ಇನ್ಸುಲಿನ್ ಉತ್ಪಾದನೆಯು ಹೆಚ್ಚಾಗಲು ಪ್ರಾರಂಭಿಸುತ್ತದೆ. ಮಧುಮೇಹ ರೋಗಿಗಳಿಗೆ ಇನ್ಸುಲಿನ್ ಎಂಬ ಹಾರ್ಮೋನ್ ಅವಶ್ಯಕವಾಗಿದೆ. ಅದರ ಸಹಾಯದಿಂದ ಸಕ್ಕರೆಯನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ.


ದೇಸಿ ತುಪ್ಪ ಮತ್ತು ತ್ರಿಫಲ :
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ತ್ರಿಫಲವನ್ನು ಬಳಸುತ್ತಿದ್ದರೆ, ಅದನ್ನು ದೇಸಿ ತುಪ್ಪದೊಂದಿಗೆ ತೆಗೆದುಕೊಂಡರೆ ಪ್ರಯೋಜನಕಾರಿಯಾಗಿದೆ. ತ್ರಿಫಲವನ್ನು ದೇಸಿ ತುಪ್ಪದಲ್ಲಿ ಬೆರೆಸಿ ಬಿಸಿಯಾಗಿರುವಾಗಲೇ ಸೇವಿಸಿ. ಇದು ಕರುಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುವುದಲ್ಲದೆ, ದೇಹದಿಂದ ಕರುಳಿನಲ್ಲಿ ಸಂಗ್ರಹವಾದ ಹಾನಿಕಾರಕ ವಸ್ತುಗಳನ್ನು ತೆಗೆದುಹಾಕುತ್ತದೆ. ಈ ವಿಧಾನ 1-ದೇಹವನ್ನು ನಿರ್ವಿಷಗೊಳಿಸುವುದು 2-ರಕ್ತ ಪರಿಚಲನೆ ಸುಧಾರಿಸುವುದು 3-ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 


ಇದನ್ನೂ ಓದಿ : Cinnamon Tea: ಈ ಚಹಾ ಸೇವನೆಯಿಂದ ಕೇವಲ ತೂಕ ಇಳಿಕೆ ಅಷ್ಟೇ ಅಲ್ಲ, ಆರೋಗ್ಯಕ್ಕೂ ಹಲವು ಲಾಭಗಳು


ಮಜ್ಜಿಗೆಯೊಂದಿಗೆ ತ್ರಿಫಲ :
 ತ್ರಿಫಲವನ್ನು ದೇಸಿ ತುಪ್ಪದೊಂದಿಗೆ ಸೇವಿಸಲು ಸಾಧ್ಯವಾಗದಿದ್ದರೆ, ಅದನ್ನು ಮಜ್ಜಿಗೆಯೊಂದಿಗೆ ಬಳಸಬಹುದು. ತ್ರಿಫಲವನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯಬಹುದು. ತ್ರಿಫಲವನ್ನು ಮಜ್ಜಿಗೆಯೊಂದಿಗೆ ಬೆರೆಸಿ ಕುಡಿಯುವುದರಿಂದ ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ನಿಮಗೆ ಮಧುಮೇಹ ಇದ್ದರೆ, ಮಧ್ಯಾಹ್ನದ ಆಹಾರ ಸೇವಿಸಿದ ನಂತರ, 1 ಲೋಟ ಮಜ್ಜಿಗೆಗೆ ಕೇವಲ 1 ಚಮಚ ತ್ರಿಫಲವನ್ನು ಬೆರೆಸಿ ಕುಡಿಯಿರಿ. ಇದನ್ನು ನಿಯಮಿತವಾಗಿ ಮಾಡುವುದರಿಂದ ಶೀಘ್ರದಲ್ಲೇ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು.


 



ಸೂಚನೆ : ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.