White Hair To Black Hair Naturally : ಚಿಕ್ಕ ವಯಸ್ಸಿನಲ್ಲಿಯೇ ತಲೆಯಲ್ಲಿ ಬಿಳಿ ಕೂದಲು ಮೂಡುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿ ಎಲ್ಲರೂ ಎದುರಿಸುತ್ತಿರುವ ಸಮಸ್ಯೆ. ಬಿಳಿ ಕೂದಲು ಮುಖ ಅಂದವನ್ನು ಕೆಡಿಸುವುದು ಮಾತ್ರವಲ್ಲ ಬಹಳಷ್ಟು ಬಾರಿ ಆತ್ಮವಿಶ್ವಾಸವನ್ನೇ ಕುಗ್ಗಿಸಿ ಬಿಡುತ್ತದೆ. ಈ ಸಮಸ್ಯೆಯನ್ನು ಕಡಿಮೆ ಮಾಡಲು, ಅನೇಕ ಜನರು ತಮ್ಮ ಕೂದಲಿಗೆ ಕಲರ್ ಮಾಡುತ್ತಾರೆ. ಆದರೆ, ಇದು ಶಾಶ್ವತ ಪರಿಹಾರ ಅಲ್ಲ. ಹೇರ್ ಕಲರ್ ಮಾಡಿದ ಕೆಲವು ದಿನಗಳವರೆಗೆ ಕೂದಲು ಕಪ್ಪಾಗಬಹುದು. ನಂತರ ಮತ್ತೆ ಬಿಳಿ ಕೂದಲು ಕಾಣಿಸುತ್ತದೆ. 


COMMERCIAL BREAK
SCROLL TO CONTINUE READING

ಕೆಮಿಕಲ್ ನಿಂದ ಅಡ್ಡ ಪರಿಣಾಮ : 
ಅಲ್ಲದೆ ಈ ಹೇರ್ ಕಲರ್ ಗಳಲ್ಲಿ ಕೆಮಿಕಲ್ ಗಳು ಹೆಚ್ಚಿನ ಪ್ರಮಾಣದಲ್ಲಿ ಇರುತ್ತವೆ. ಈ ಕೆಮಿಕಲ್ ಗಳು ಅನೇಕ ಅಡ್ಡ ಪರಿಣಾಮವನ್ನು ಉಂಟುಮಾಡುತ್ತದೆ. ಸ್ವಲ್ಪ ಇದ್ದ ಬಿಳಿ ಕೂದಲು ಈ ಕಲರ್ ಹಚ್ಚಿದ ನಂತರ ಅಧಿಕವಾಗಿರುವ ಅನೇಕ ಪ್ರಸಂಗಗಳು ನಮ್ಮ ಕಣ್ಣ ಮುಂದೆಯೇ ಇವೆ. ಅಲ್ಲದೆ, ಚರ್ಮದ ತುರಿಕೆ, ದದ್ದುಗಳು, ಕಣ್ಣು ಉರಿ, ಮುಂತಾದ ಅಲರ್ಜಿ ಸಮಸ್ಯೆಗಳನ್ನು ಕೂಡಾ ಎದುರಿಸಬೇಕಾಗಬಹುದು. ಇಂಥ ಪರಿಸ್ಥಿತಿಯಲ್ಲಿ ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ನೈಸರ್ಗಿಕ ಪರಿಹಾರಗಳನ್ನು ಆಶ್ರಯಿಸುವುದು ಸೂಕ್ತ. ಈ ವಸ್ತುಗಳು  ಬಿಳಿ ಕೂದಲು ಕಪ್ಪಾಗುವಂತೆ ಮಾಡುವುದು ಮಾತ್ರವಲ್ಲ, ಮತ್ತೆ ಬಿಳಿ ಕೂದಲು ಬೆಳೆಯದಂತೆ ತಡೆಯುತ್ತದೆ. 


ಇದನ್ನೂ ಓದಿ  : ಈ ಕಾಯಿಲೆ ಇರುವವರು ಮೊಮೊಸ್ ತಿನ್ನುವ ಮುನ್ನ ಯೋಚಿಸಿ!


ಡೈ ಇಲ್ಲದೆ ನೈಸರ್ಗಿಕವಾಗಿ ಕೂದಲು ಕಪ್ಪಾಗಿಸುವುದು ಹೇಗೆ ? :
ತೆಂಗಿನ ಎಣ್ಣೆ ಮತ್ತು ನೆಲ್ಲಿಕಾಯಿ ಪುಡಿ : 
ಬಿಳಿ ಕೂದಲಿನ ಸಮಸ್ಯೆಯನ್ನು ಕಡಿಮೆ ಮಾಡಲು ತೆಂಗಿನ ಎಣ್ಣೆಯನ್ನು ಬಳಸಬಹುದು. ಇದಕ್ಕಾಗಿ ತೆಂಗಿನ ಎಣ್ಣೆಗೆ 2 ರಿಂದ 3 ಚಮಚ ಆಮ್ಲಾ ಪುಡಿಯನ್ನು ಹಾಕಿ ಮಿಶ್ರಣ ಮಾಡಿ. ಇದರ ನಂತರ, ಈ ಎಣ್ಣೆಯನ್ನು ಬಿಸಿ ಮಾಡಿ ತಣ್ಣಗಾಗಲು ಬಿಡಿ. ತಯಾರಾದ ಎಣ್ಣೆಯನ್ನು  ಜಾರ್ ನಲ್ಲಿ ಹಾಕಿಡಿ. ಅದನ್ನು ನಿಮ್ಮ ಕೂದಲಿಗೆ ನಿಯಮಿತವಾಗಿ ಹಚ್ಚುತ್ತಾ ಬನ್ನಿ. ಕೂದಲು ಕಪ್ಪಾಗುವುದು ಮಾತ್ರವಲ್ಲ. ಬಿಳಿ ಕೂದಲಿನ ಬೆಳವಣಿಗೆಯನ್ನು ಕೂಡಾ ಇದು ತಡೆಯುತ್ತದೆ. 


ಇಂಡಿಗೋ ಪೌಡರ್ ಮತ್ತು ಗೋರಂಟಿ :
ಕೂದಲನ್ನು ಕಪ್ಪಾಗಿಸಲು, ನಿಮ್ಮ ಕೂದಲಿಗೆ ಇಂಡಿಗೋ ಪೌಡರ್ ಮತ್ತು ಗೋರಂಟಿ ಬಳಸಬಹುದು. ಮೊದಲು ಒಂದು ಬೌಲ್ ತೆಗೆದುಕೊಂಡು ಅದರಲ್ಲಿ ಒಂದು ಚಮಚ ಇಂಡಿಗೋ ಪೌಡರ್ ಮತ್ತು ಒಂದು ಚಮಚ ಗೋರಂಟಿ ಪುಡಿಯನ್ನು ಮಿಶ್ರಣ ಮಾಡಿ. ನಂತರ, ಅದರಲ್ಲಿ ಸ್ವಲ್ಪ ಮೊಸರು ಬೆರೆಸಿ ಪೇಸ್ಟ್ ತಯಾರಿಸಿ. ಸಿದ್ಧಪಡಿಸಿದ ಮಿಶ್ರಣವನ್ನು ನಿಮ್ಮ ಕೂದಲಿಗೆ ಹಚ್ಚಿ. ಇದರಿಂದ ನಿಮ್ಮ ಬಿಳಿ ಕೂದಲು ಕಪ್ಪಾಗುವುದು. ಮಾತ್ರವಲ್ಲ ಕೂದಲಿನ ಅನೇಕ ಸಮಸ್ಯೆಗಳನ್ನು ಇದು ಪರಿಹರಿಸುತ್ತದೆ. 


ಇದನ್ನೂ ಓದಿ  : Health Benefits of Almonds: ಬಾದಾಮಿಯ ಅದ್ಭುತ ಆರೋಗ್ಯ ಪ್ರಯೋಜನಗಳು


ನೆಲ್ಲಿಕಾಯಿ ಮತ್ತು ಶಿಕಾಕೈ ಹೇರ್ ಪ್ಯಾಕ್ :
ನೆಲ್ಲಿಕಾಯಿ  ಮತ್ತು ಶಿಕಾಕೈ ಹೇರ್ ಪ್ಯಾಕ್ ಬಿಳಿ ಕೂದಲನ್ನು ಕಪ್ಪಾಗಿಸಲು ಸಹಕಾರಿಯಾಗಿದೆ. ಮೊದಲು 1 ಕಬ್ಬಿಣದ ಪ್ಯಾನ್ ತೆಗೆದುಕೊಳ್ಳಿ. ಇದಕ್ಕೆ 4 ಚಮಚ ನೆಲ್ಲಿಕಾಯಿ ಪುಡಿ  1 ಚಮಚ ಶಿಕಾಕಾಯಿ ಪುಡಿಯನ್ನು ಬೆರೆಸಿ. ಇದಕ್ಕೆ ತೆಂಗಿನೆಣ್ಣೆ ಹಾಕಿ ಮಿಕ್ಸ್ ಮಾಡಿ. ಈ ಮಿಶ್ರಣವನ್ನು  2 ರಿಂದ 3 ಗಂಟೆಗಳ ಕಾಲ ಬಿಟ್ಟು ಕೂದಲಿಗೆ ಹಚ್ಚಿ.  ರಾತ್ರಿಯಿಡೀ ಮಿಶ್ರಣವನ್ನು ಹಾಗೆಯೇ ಬಿಟ್ಟು ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆಯಿರಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.