Corona Vaccine : ಇದು ವೈದ್ಯಲೋಕದ ಅಚ್ಚರಿ, ಭಾರತೀಯರಿಗೆ ಹೆಮ್ಮೆಯ ಸಂಗತಿ.! ನಮ್ಮಲ್ಲಿ ಇನ್ನೆಷ್ಟು ವ್ಯಾಕ್ಸಿನ್ ರೆಡಿಯಾಗುತ್ತಿದೆ ಗೊತ್ತಾ..?
ಕರೋನಾ ಲಸಿಕೆಗಳಾದ ಕೊವಿಶೀಲ್ಡ್, ಕೋವ್ಯಾಕ್ಸಿನ್ ಅಲ್ಲದೆ,ಇನ್ನೂ ಏಳು ಲಸಿಕೆಗಳು ತಯಾರಿಕಾ ಹಂತದಲ್ಲಿವೆ.
ನವದೆಹಲಿ : ಕರೋನಾ ಲಸಿಕೆಗಳಾದ ಕೊವಿಶೀಲ್ಡ್, ಕೋವ್ಯಾಕ್ಸಿನ್ (Covaxin) ತುರ್ತು ಬಳಕೆಗೆ ಅನುಮತಿ ಪಡೆದುಕೊಂಡಿವೆ. ಇನ್ನ ಸ್ವಲ್ಪ ದಿನಗಳಲ್ಲಿ ಈ ಲಸಿಕೆ ಸಾಮಾನ್ಯರಿಗೂ ಸಿಗಲಿದೆ. ಈ ಎರಡು ವ್ಯಾಕ್ಸಿನ್ ಗಳು ಅಷ್ಟೇ ಅಲ್ಲ. ಭಾರತದಲ್ಲಿ ಇನ್ನೂ ಏಳು ಲಸಿಕೆಗಳು ವಿವಿಧ ಹಂತದ ತಯಾರಿಯಲ್ಲಿವೆ. ಅವುಗಳ ಸ್ಟ್ಯಾಟಸ್ ಇಲ್ಲಿದೆ ನೋಡಿ.
1. ZyCoV-D (ಜೈಡಸ್ ಕೆಡಿಲ್ಲಾ)
ಅಹಮದಬಾದಿನ ಕಂಪನಿ ಜೈಡಸ್ ಕೆಡಿಲಾ ಡಿಎನ್ ಎ ಆಧಾರಿತ ZyCoV-D ಲಸಿಕೆ ತಯಾರಿಸುತ್ತಿದೆ. ಬಯೋಟೆಕ್ನಾಲಜಿ ವಿಭಾಗದ ಸಹಯೋಗದೊಂದಿಗೆ ಜೈಡಸ್ ಈ ಲಸಿಕೆ ತಯಾರಿಸುತ್ತಿದೆ. ಸದ್ಯ ಲಸಿಕೆಯ (Corona Vaccine) ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಇನ್ನು ಮೂರು ತಿಂಗಳಿನಲ್ಲಿ ಲಸಿಕೆ ಸಿಗಬಹುದು.
2. ಸ್ಪುಟ್ನಿಕ್ (ಡಾ. ರೆಡ್ಡೀಸ್ ಲ್ಯಾಬ್ )
ಇದು ಮೂಲತಃ ರಷ್ಯಾದ ವ್ಯಾಕ್ಸಿನ್. ರಷ್ಯಾದಲ್ಲಿ ಇದಕ್ಕೆ ಅನುಮತಿ ಸಿಕ್ಕಿದೆ. ವ್ಯಾಕ್ಸಿನೇಶನ್ (Vaccination) ಕೂಡಾ ಆಗಸ್ಟ್ ನಲ್ಲಿ ಆರಂಭವಾಗಿದೆ. ಭಾರತದ ವಾತಾವರಣದಲ್ಲಿಇದರ ಪರಿಣಾಮದ ಬಗ್ಗೆ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ. ಡಾ. ರೆಡ್ಡೀಸ್ ಲ್ಯಾಬ್ ನಲ್ಲಿ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ (ClinicalTrail) ನಡೆಯುತ್ತಿದೆ. ಫೆಬ್ರವರಿಯಲ್ಲಿ ಲಸಿಕೆ ಜನರಿಗೆ ಸಿಗಬಹುದು ಎನ್ನುವ ಆಶಾಭಾವನೆ ಇದೆ.
ಇದನ್ನೂ ಓದಿ : ಶಾಕಿಂಗ್ ! Pfizer ಲಸಿಕೆ ಪಡೆದ ನಂತರ ಪಾರ್ಶ್ವವಾಯುವಿಗೆ ತುತ್ತಾದ ಮಹಿಳಾ ವೈದ್ಯೆ
3. NVX-Cov 2373 (ಸಿರಂ ಸಂಸ್ಥೆ)
ಇದು ಮೂಲತಃ ಅಮೆರಿಕ ಕಂಪನಿ ನೊವಾವೆಕ್ಸ್ ತಯಾರಿಸಿರುವ ವ್ಯಾಕ್ಸಿನ್. ಅಮೆರಿಕದಲ್ಲಿ 3 ನೇ ಹಂತದ ಟ್ರಯಲ್ ನಡೆಯುತ್ತಿದೆ. ಕೊವಿಶೀಲ್ಡ್ (Covishield) ತಯಾರಿಸಿರುವ ಸೀರಂ ಸಂಸ್ಥೆ ಭಾರತದಲ್ಲಿ ಈ ವ್ಯಾಕ್ಸಿನ್ ಅಭಿವೃದ್ಧಿ ಪಡಿಸುತ್ತಿದೆ. ಭಾರತದಲ್ಲಿ ಇದು 2ನೇ ಹಂತದ ಕ್ಲಿನಿಕಲ್ ಟ್ರಯಲ್ ನಲ್ಲಿದೆ. ಎಪ್ರಿಲ್ ನಂತರ ಲಸಿಕೆ ಸಿಗುವ ಸಾಧ್ಯತೆಗಳಿವೆ.
4. ಡಯನಾವೆಕ್ಸ್ ವ್ಯಾಕ್ಸಿನ್ (ಬಯಲಾಜಿಕಲ್ ಇ)
ಹ್ಯೂಸ್ಟನ್ ನ ಬೆಲಾರ್ ಕಾಲೇಜ್ ಆಫ್ ಮೆಡಿಸಿನ್ ಮತ್ತು ಅಮೆರಿಕಾದ ಕಂಪನಿ ಡಯನಾವೆಕ್ಸ್ ಸಹಯೋಗದೊಂದಿಗೆ ಹೈದರಾಬಾದಿನ ಕಂಪನಿ ಬಯಲಾಜಿಕಲ್ ಇ ಇದು ಡಯನಾವೆಕ್ಸ್ ವ್ಯಾಕ್ಸಿನ್ ತಯಾರಿಸುತ್ತಿದೆ. ಇನ್ನೂ ಆರಂಭಿಕ ಹಂತದಲ್ಲಿದೆ. ಜುಲೈ ಹೊತ್ತಿಗೆ ಈ ವ್ಯಾಕ್ಸಿನ್ ಲಭ್ಯವಾಗಬಹುದು.
5. mRNA ವ್ಯಾಕ್ಸಿನ್ (ಜೆನೋವಾ ಫಾರ್ಮಾ)
ಪುಣೆಯ ಕಂಪನಿ ಜೆನೋವಾ ಫಾರ್ಮಾ RNA (mRNA) ಫ್ಲಾಟ್ ಫಾರಂನಲ್ಲಿ HGCO19 ವ್ಯಾಕ್ಸಿನ್ ತಯಾರಿಸುತ್ತಿದೆ. ಅಮೆರಿಕದ ಹೆಚ್ ಡಿಟಿ ಬಯೋಟೆಕ್ ಸಹಯೋಗದೊಂದಿಗೆ ವ್ಯಾಕ್ಸಿನ್ ರೆಡಿಯಾಗುತ್ತಿದೆ. ಫೈಜರ್ (Pfizer) ಮತ್ತು ಮಾಡೆರ್ನಾ ವ್ಯಾಕ್ಸಿನ್ ರೀತಿಯಲ್ಲಿ ಇವು mRNA ಪ್ಲ್ಯಾಟ್ ಫಾರಂ ಅಡಿಯಲ್ಲಿ ಈ ವ್ಯಾಕ್ಸಿನ್ ತಯಾರಿ ನಡೆಯುತ್ತಿದೆ. ಮೊದಲ ಹಂತದ ಟ್ರಯಲ್ ಇನ್ನಷ್ಟೇ ಶುರುವಾಗಬೇಕಾಗಿದೆ. ಏನಿಲ್ಲಾ ಅಂದ್ರೂ ಇನ್ನೂ ಆರು ತಿಂಗಳು ಬೇಕು ಈ ಲಸಿಕೆ ಸಿಗಬೇಕಂದ್ರೆ. ಜುಲೈ ಹೊತ್ತಿಗೆ ಸಿಗಬಹುದು.
ಇದನ್ನೂ ಓದಿ : Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ
6. ನೈಜಲ್ ವ್ಯಾಕ್ಸಿನ್ (ಭಾರತ್ ಬಯೋಟೆಕ್)
ಇದು ಸಿಂಗಲ್ ಡೋಸ್ ವ್ಯಾಕ್ಸಿನ್. ಇದು ಮೂಗಿನ ಮೂಲಕ ಬಿಡಬಹುದಾದ ವ್ಯಾಕ್ಸಿನ್. ಹೈದರಾಬಾದ್ ಕಂಪನಿ ಭಾರತ್ ಬಯೋಟೆಕ್ ಈಗ 2 ರೀತಿಯ ನೈಜಲ್ ವ್ಯಾಕ್ಸಿನ್ ರೂಪಿಸುತ್ತಿದೆ. ಯುನಿವರ್ಸಿಟಿ ಆಫ್ ವಾಷಿಂಗ್ಟನ್ ನ ಸ್ಕೂಲ್ ಆಫ್ ಮೆಡಿಸಿನ್ ನ ಸಹಕಾರದೊಂದಿಗೆ ಒಂದು ವ್ಯಾಕ್ಸಿನ್ ಹಾಗೂ ಅಮೆರಿಕದ ಕಂಪನಿ ಪ್ಲೂಜೆನ್ ಮತ್ತು ಯುನಿವರ್ಸಿಟಿ ಆಫ್ ವಿಸ್ಕಿನ್ಸನ್ ಮೆಡಿಸಿನ್ ಸಹಕಾರದೊಂದಿಗೆ ಇನ್ನೊಂದು ವ್ಯಾಕ್ಸಿನ್ ರೆಡಿಯಾಗುತ್ತಿದೆ.
ಇನ್ನೂ ಫೇಸ್ 1 ರ ಹಂತದಲ್ಲಿದೆ. ಜನರಿಗೆ ಸಿಗಬೇಕೆಂದರೆ ಇನ್ನೂ ಆರು ತಿಂಗಳು ಬೇಕು.
7. ಅರಂಬಿದೋ ಫಾರ್ಮ್ ವ್ಯಾಕ್ಸಿನ್
ಅಮೆರಿಕ ಮೂಲದ ಆರೋ ವ್ಯಾಕ್ಸಿನ್ ಕಂಪನಿಯ ಸಹಯೋಗದೊಂದಿಗೆ ಅರಬಿಂದೋ ಫಾರ್ಮಾ ಕಂಪನಿ ಈ ವ್ಯಾಕ್ಸಿನ್ ತಯಾರಿಸುತ್ತಿದೆ. ಪ್ರೊಪೆಕ್ಟಸ್ ಬಯೋಟೆಕ್ ಈ ವ್ಯಾಕ್ಸಿನ್ ನನ್ನು ಅಭಿವೃದ್ದಿ ಪಡಿಸುತ್ತಿದೆ. ಇದಿನ್ನೂ ತೀರಾ ಆರಂಭದ ಹಂತದಲ್ಲಿದೆ. ಜನರಿಗೆ ಸಿಗಬೇಕಾದರೆ ಏಳೆಂಟು ತಿಂಗಳೇ ಬೇಕಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.