Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ಪ್ರಸ್ತುತ ಭಾರತದ ಜನರು ಕೂಡ ಸ್ವದೇಶಿ ವ್ಯಾಕ್ಸಿನ್ ಗಾಗಿ ಕಾಯುತ್ತಿದ್ದಾರೆ.ಪ್ರಧಾನಿ ಮೋದಿ ಕೂಡ ಇನ್ನೂ ಕೆಲವೇ ವಾರಗಳಲ್ಲಿ ಲಸಿಕೆ ಜನರಿಗೆ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ.

Last Updated : Dec 9, 2020, 05:30 PM IST
  • ಇನ್ನೇನು ಕೆಲವೇ ದಿನಗಳಲ್ಲಿ ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ.
  • ವ್ಯಾಕ್ಸಿನ್ ಗಾಗಿ ದೇಶಾದ್ಯಂತ ಜನರು ತುದಿಗಳಲ್ಲಿ ಕಾಯುತ್ತಿದ್ದಾರೆ.
  • ಆದರೆ, ಹತ್ತಿರಕ್ಕೆ ಬರುತ್ತಿರುವ ಈ ಸಂತಸದ ಸುದ್ದಿ ಜೊತೆಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಕೂಡ ಮೂಡಿವೆ.
Coronavaccine ಹಾಕಿಸಿಕೊಂಡ ಬಳಿಕ ಮಹಾಮಾರಿಯ ಅಪಾಯ ತಪ್ಪುತ್ತಾ....? ಉತ್ತರಕ್ಕಾಗಿ ಇಲ್ಲಿಗೆ ಭೇಟಿ ನೀಡಿ

ನವದೆಹಲಿ: ಇನ್ನೇನು ಕೆಲವೇ ದಿನಗಳಲ್ಲಿ ವ್ಯಾಕ್ಸಿನ್ ಮಾರುಕಟ್ಟೆಗೆ ಬರಲಿದೆ. ವ್ಯಾಕ್ಸಿನ್ ಗಾಗಿ ದೇಶಾದ್ಯಂತ ಜನರು ತುದಿಗಳಲ್ಲಿ ಕಾಯುತ್ತಿದ್ದಾರೆ. ಆದರೆ, ಹತ್ತಿರಕ್ಕೆ ಬರುತ್ತಿರುವ ಈ ಸಂತಸದ ಸುದ್ದಿ ಜೊತೆಗೆ ಜನರ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಕೂಡ ಮೂಡಿವೆ. ನಮಗೆ ಈ ವ್ಯಾಕ್ಸಿನ್ ಯಾವಾಗ ಸಿಗಲಿದೆ? ಎಂಬ ಪ್ರಶ್ನೆ ಕೋಟ್ಯಾಂತರ ಜನರ ಮನದಲ್ಲಿದೆ. ಅಷ್ಟೇ ಯಾಕೆ ಲಸಿಕೆಯ ಬೆಲೆ ಎಷ್ಟು? ವ್ಯಾಕ್ಸಿನ್ ಸುರಕ್ಷಿತವಾಗಿದೆಯೆ? ಲಸಿಕೆ ಹಾಕಿಸಿಕೊಂಡ ಬಳಿಕ ಮಹಾಮಾರಿಯ ಆತಂಕ ತಪ್ಪುತ್ತದೆಯೇ? ಎಂಬ ಪ್ರಶ್ನೆಗಳೂ ಕೂಡ ಜನರ ಮನಸ್ಸಿನಲ್ಲಿ ಮನೆಮಾಡಿವೆ. ನಿರೀಕ್ಷೆಯ ಈ ಸಂದರ್ಭದಲ್ಲಿ ಬ್ರಿಟನ್ ನಿಂದ ಒಂದು ಭರವಸೆಯ ಸುದ್ದಿ ಪ್ರಕಟಗೊಂಡಿದೆ. ಅಲ್ಲಿ ಈ ವಾರ ವ್ಯಾಕ್ಸಿನೆಶನ್ ಕೆಲಸ ಆರಂಭವಾಗಿದೆ. ಪ್ರಸ್ತುತ ಭಾರತೀಯರೂ ಕೂಡ ಸ್ವದೇಶದಲ್ಲಿ ನಿರ್ಮಾಣಗೊಂಡ ಲಸಿಕೆಗಾಗಿ ಕಾಯುತ್ತಿದ್ದಾರೆ. ಅಷ್ಟೇ ಯಾಕೆ ಪ್ರಧಾನಿ ಮೋದಿ ಕೂಡ ಇನ್ನೂ ಕೆಲವೇ ವಾರಗಳಲ್ಲಿ ಲಸಿಕೆ ಜನರಿಗೆ ಸಿಗಲಿದೆ ಎಂಬ ಭರವಸೆ ನೀಡಿದ್ದಾರೆ. ನಿರೀಕ್ಷೆಗಳ ನಡುವೆ ಈ ಎಲ್ಲಾ ಪ್ರಶ್ನೆಗಳ ವಾಸ್ತವಿಕತೆಯತ್ತ ತಲುಪುವ ಪ್ರಯತ್ನ ಝೀ ಹಿಂದುಸ್ತಾನ್ ಕನ್ನಡ ಮಾಡಲಿದೆ.

ದೇಶದ ನಾಗರಿಕರಿಗೆ ವ್ಯಾಕ್ಸಿನ್ ನೀಡಿದ ಮೊದಲ ದೇಶ ಬ್ರಿಟನ್ (Britain becomes first nation to start vaccination)
ಟ್ರಯಲ್ ಹೊರತುಪಡಿಸಿ ನಾಗರಿಕರಿಗೆ ಲಸಿಕೆ ಹಾಕುವ ಕಾರ್ಯಕ್ಕೆ ಬ್ರಿಟನ್ ಚಾಲನೆ ನೀಡಿದೆ. ಹೀಗಾಗಿ ವ್ಯಾಕ್ಸಿನೆಶನ್ ಆರಂಭಿಸಿದ ವಿಶ್ವದ ಮೊದಲ ದೇಶ ಎಂಬ ಹೆಗ್ಗಳಿಕೆಗೆ ಬ್ರಿಟನ್ ಪಾತ್ರವಾಗಿದೆ. ಬ್ರಿಟನ್ ನಲ್ಲಿ ನಾಗರಿಕರಿಗೆ ಅಮೇರಿಕಾ ಮೂಲದ ಕಂಪನಿ Pfizer ಹಾಗೂ BioNTech vaccine ಕಂಪನಿಗಳ ವ್ಯಾಕ್ಸಿನ್ ನ ಮೊದಲ ಡೋಸ್ ನೀಡಲಾಗುತ್ತಿದೆ. ವ್ಯಾಕ್ಸಿನ್ ನ ಮೊದಲ ಶಾಟ್ 50 ಗೊತ್ತುಪಡಿಸಲಾಗ ಆಸ್ಪತ್ರೆಗಳಲ್ಲಿ ನೀಡಲಾಗುತ್ತಿದೆ. ಆರಂಭದಲ್ಲಿ 80ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರಿಗೆ, ಆರೋಗ್ಯ ರಕ್ಷಕರಿಗೆ ಹಾಗೋ ನರ್ಸಿಂಗ್ ಹೋಮ್ ಸ್ಟಾಫ್ ಗಳಿಗೆ ವ್ಯಾಕಿನ್ ನ ಮೊದಲ ಡೋಸ್ ನೀಡಲಾಗುತ್ತಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಬ್ರಿಟನ್ ಗೆ Pfizer/BioNTech ವ್ಯಾಕ್ಸಿನ್ ನ 4 ಮಿಲಿಯನ್ ಡೋಸ್ ಗಳು ಸಿಗುವ ನಿರೀಕ್ಷೆ ಇದೆ.

ಪ್ರಕ್ರಿಯೆ ಹೇಗಿರಲಿದೆ? (Process Of Vaccination)
- Pfizer/BioNTech ಲಸಿಕೆಯನ್ನು RNA ತಂತ್ರಜ್ಞಾನದೊಂದಿಗೆ ಅಭಿವೃದ್ಧಿಪಡಿಸಲಾಗಿದೆ. ಇದರಲ್ಲಿ ಕರೋನಾ ವೈರಸ್‌ನ ಆನುವಂಶಿಕ - ಸಂಕೇತವನ್ನು (Genetic Code) ಬಳಕೆ ಮಾಡಲಾಗಿದೆ.ಈ - ಲಸಿಕೆಯನ್ನು ತೋಳಿನಲ್ಲಿ ಅನ್ವಯಿಸಲಾಗುತ್ತದೆ.
- ಲಸಿಕೆಯ ಎರಡು ಡೋಸ್ ನೀಡಲಾಗುವುದು.

ವ್ಯಾಕ್ಸಿನ್ ನ ಅಡ್ಡಪರಿಣಾಮಗಳು (Side Effects Of Corona Vaccine)
- ಫೈಜರ್ ನೀಡಿರುವ ಹೇಳಿಕೆ ಪ್ರಕಾರ, ಟ್ರಯಲ್ ಸಮಯದಲ್ಲಿ ಸ್ವಯಂಸೇವಕರಲ್ಲಿ ಸಣ್ಣ ಅಡ್ಡಪರಿಣಾಮಗಳು ಕಂಡುಬಂದವು, ಆದರೆ ಅವು ಶೀಘ್ರದಲ್ಲಿಯೇ ವಾಸಿಯಾಗಿವೆ ಎಂದಿದೆ.
- ಎರಡನೇ ಡೋಸ್ ನಂತರ ಅತ್ಯಂತ ಗಂಭೀರ ಅಡ್ಡಪರಿಣಾಮಗಳು ಕಂಡುಬಂದಿವೆ. ಶೇ.3.8 ರಷ್ಟು ಸ್ವಯಂಸೇವಕರು ವೀಕ್ ನೆಸ್ ಅನುಭವಿಸಿದ್ದರೆ, ಶೇ.2 ರಷ್ಟು ಜನರು ತಲೆನೋವು ವರದಿ ಮಾಡಿದ್ದರು.
- ವಯಸ್ಸಾದವರಿಗಿಂತ ಕಿರಿಯ ಸ್ವಯಂಸೇವಕರಿಂದ ದೂರುಗಳನ್ನು ಕಡಿಮೆ ಕೇಳಿಬಂದಿದ್ದವು.

ಇದನ್ನು ಓದಿ- Corona Vaccine ತುರ್ತು ಬಳಕೆಗಾಗಿ ಅನುಮತಿ ಕೋರಿದ ಮೊದಲ ಭಾರತೀಯ ಕಂಪನಿ

ವ್ಯಾಕ್ಸಿನ್ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆಯೇ? (how much vaccination is secured)
- ಎರಡನೇ ಡೋಸ್ ನೀಡಿದ 7 ದಿನಗಳ ಬಳಿಕ ಅದರ ಪ್ರಭಾವ ಕಂಡುಬಂದಿದೆ ಎಂದು ಹೇಳಲಾಗಿದೆ. ಎರಡನೇ ಶಾಟ್ ಅನ್ನು ಮೊದಲ ಶಾಟ್ ನೀಡಿದ ಒಂದು ತಿಂಗಳ ಬಳಿಕ ನೀಡಲಾಗಿತ್ತು.
- ರೋಗ ಪ್ರತಿರೋಧಕ ಕ್ಷಮತೆ ಸಾಧಿಸಿದ ವ್ಯಕ್ತಿ ಎರಡನೇ ವ್ಯಕ್ತಿಗೆ ಸೋಂಕು ಹರಡುತ್ತಾನೋ ಅಥವಾ ಇಲ್ಲ ಎಂಬುದು ಟ್ರಯಲ್ ನಲ್ಲಿ ತಿಳಿದುಬಂದಿಲ್ಲ.
- ಹೆಪೆಟೈಟಸ್ ಎ ಗಳಂತಹ ಕೆಲ ಲಸಿಕೆಗಳು ಈ ಸುರಕ್ಷತೆಯನ್ನು ನೀಡುತ್ತವೆ. ಇದಕ್ಕೆ ಸ್ಟೇರಲೈಸಿಂಗ್ ಇಮ್ಯೂನೋ ಸಿಸ್ಟಂ ರೂಪದಲ್ಲಿ ಗುರುತಿಸಲಾಗುತ್ತದೆ.
- ಕೊವಿಡ್ 19 ವ್ಯಾಕ್ಸಿನ್ ನಿರ್ಮಾಪಕ ಕಂಪನಿಗಳು ಪರೀಕ್ಷೆಯ ವೇಳೆ ಇದನ್ನು ಸುನಿಶ್ಚಿತಗೊಳಿಸಲು ಪ್ರಯತ್ನಿಸಿವೆ  ಎನ್ನಲಾಗಿದೆ.

ಯಾವುದೇ ಲಸಿಕೆ ಶೇ.100 ರಷ್ಟು ಪ್ರಭಾವಶಾಲಿಯಾಗಿಲ್ಲ (100 per cent corona free vaccination)
ಲಸಿಕಾಕರಣ ಪ್ರಕ್ತಿಯೆಯ ಬಳಿಕ ನಾವು ಸಾಮಾನ್ಯ ಜೀವನಶೈಲಿಗೆ ಮರಳಬಹುದು ಎಂಬುದು ಈ ಲಸಿಕಾಕಾರಣದ ಅರ್ಥವಲ್ಲ ಎಂಬುದು ಕೂಡ ಈಗಾಗಲೇ ಸ್ಪಷ್ಟವಾಗಿದೆ. ಹೀಗಾಗಿ ಯಾವುದೇ ವ್ಯಾಕ್ಸಿನ್ ಶೇ.100 ರಷ್ಟು ಪ್ರಭಾವಶಾಲಿಯಾಗಿಲ್ಲ. ಆದ್ದರಿಂದ ಮಾಸ್ಕ್ ಧಾರಣೆ, ಕೈತೊಳೆಯುವಿಕೆ ಹಾಗೂ ವ್ಯಕ್ತಿಗತ ಅಂತರ ಕಾಪಾಡುವುದು ನಿರಂತರ ಪ್ರಕ್ರಿಯೆ ಮುಂದುವರೆಸಬೇಕು ಎಂದು ವಿಜ್ಞಾನಿಗಳೂ ಕೂಡ ಮನವಿ ಮಾಡಿದ್ದಾರೆ.

ಲಸಿಕೆ ಹಾಕಿಸಿಕೊಂಡ ಬಳಿಕ ಆತಂಕ ತಪ್ಪುತ್ತದೆಯೇ? (Coronavirus vaccine FAQ)
ವ್ಯಾಕ್ಸಿನೇಷನ್ ನಂತರ ಕರೋನದ ಅಪಾಯ ತಪ್ಪುತ್ತದೆಯೇ? ಎಂಬುದು ದೇಶ ಎದುರಿಸುತ್ತಿರುವ ದೊಡ್ಡ ಪ್ರಶ್ನೆ ಮತ್ತು ಸವಾಲು. ವಿಜ್ಞಾನಿಗಳು ಈ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದಾರೆ. ತುರ್ತು ಅನುಮೋದನೆಗೆ ಇದು ಉತ್ತಮ ಎಂದು ವಿಜ್ಞಾನಿಗಳು ಈಗಾಗಲೇ ಹೇಳಿದ್ದಾರೆ, ಆದರೆ ಯಾರೂ ಶೇ.100ರಷ್ಟು ಜವಾಬ್ದಾರಿಯನ್ನು ಹೊತ್ತಿಲ್ಲ. ವಿಶೇಷವೆಂದರೆ, ಯಾವುದೇ ದೇಶದ ಆರೋಗ್ಯ ಸಚಿವಾಲಯ ಅಥವಾ ಯಾವುದೇ ದೇಶದ ಅನುಮೋದನೆ ಪ್ರಾಧಿಕಾರವು ಕರೋನಾ ಲಸಿಕೆಯ ನಂತರ ದೇಶ ಅಥವಾ ಪ್ರಪಂಚವು ಸಂಪೂರ್ಣವಾಗಿ ಕರೋನಾ ಮುಕ್ತವಾಗಿರುತ್ತದೆ ಎಂಬ ಸಂಗತಿಯನ್ನು ದೃಢಪಡಿಸಿಲ್ಲ.

ಭಾರತದಲ್ಲಿ ವ್ಯಾಕ್ಸಿನ್ ಸ್ಟೇಟಸ್ ಏನು? (India Vaccine status)
ಭಾರತದಲ್ಲಿ ಒಟ್ಟು 9 ಲಸಿಕೆಗಳಿದ್ದು, ಅವು ಪ್ರಯೋಗದ ವಿವಿಧ ಹಂತಗಳಲ್ಲಿವೆ. ಆದರೂ ಕೂಡ  ಮೂರು ಲಸಿಕೆಗಳು ತುರ್ತು ಅಧಿಕೃತ ಅನುಮೋದನೆಗಾಗಿ ಭಾರತದ ಔಷಧಿ ನಿಯಂತ್ರಣ ಪ್ರಾಧಿಕಾರದ ಅನುಮೋದನೆ ಕೋರಿವೆ. ಮುಂದಿನ ಕೆಲವು ವಾರಗಳಲ್ಲಿ, ನಿಯಂತ್ರಣ ಪ್ರಾಧಿಕಾರ ಒಂದು ಅಥವಾ ಹೆಚ್ಚಿನ ಲಸಿಕೆಗಳ ತುರುತು ಬಳಕೆಗೆ ಅನುಮೋದನೆ ನೀಡುವ ನಿರೀಕ್ಷೆ ಇದೆ. ಆರೋಗ್ಯ ಸಚಿವಾಲಯದ ಪ್ರಕಾರ, 6 ಲಸಿಕೆಗಳು ಪೂರ್ವ-ಪ್ರಾಯೋಗಿಕ ಪರೀಕ್ಷೆಯ ಸ್ಥಿತಿಯಲ್ಲಿವೆ. 3 ಕ್ಲಿನಿಕಲ್ ಪ್ರಯೋಗಗಳ ವಿಭಿನ್ನ ಹಂತಗಳಲ್ಲಿವೆ. ಓರ್ವ ವ್ಯಕ್ತಿ ಲಸಿಕೆಯ ಎರಡು ಡೋಸ್ ಪಡೆಯಬಹುದು.

ಗ್ರಾಮಗಳಿಗೂ ತಲುಪಲಿದೆಯೇ ವ್ಯಾಕ್ಸಿನ್? (Vaccination bule print)
ಏಪ್ರಿಲ್ 14 ರಂದು ಸರ್ಕಾರ ಲಸಿಕೆ ಕಾರ್ಯಪಡೆ ರಚಿಸಿದೆ. ಆಗಸ್ಟ್ 7 ರಂದು, ಕೇಂದ್ರ ಸರ್ಕಾರವು COVID-19 ಗಾಗಿ ಮತ್ತೊಂದು ತಂಡ ರಚಿಸಿದ್ದು ಅದಕ್ಕೆ  NEGVAC - NATIONAL Expert Group ಎಂದು ಹೆಸರಿಟ್ಟಿದೆ. ಮಲ್ಟಿಲೆವಲ್ ಕೋಆರ್ಡಿನೆಶನ್ ಮೆಕ್ಯಾನಿಜಂ ಈ ಎಲ್ಲ ಕೆಲಸಗಳನ್ನು ಈ ಗುಂಪು ನಿರ್ವಹಿಸಲಿದೆ.  ಉದಾಹರಣೆಗೆ, ಲಸಿಕೆ ಹೇಗೆ ನೀಡಲಾಗುವುದು, ಸರಕುಗಳು ಎಲ್ಲಿಂದ ಬರಲಿವೆ ಮತ್ತು ಅದನ್ನು ರಾಜ್ಯಗಳೊಂದಿಗೆ ಹೇಗೆ ಹೊಂದಿಸಲಾಗುತ್ತದೆ ಇತ್ಯಾದಿ.

1.5 ಲಕ್ಷಕ್ಕೂ ಅಧಿಕ ಜನರು ಲಸಿಕೆ ಹಾಕಲಿದ್ದಾರೆ
ಭಾರತದಲ್ಲಿ 2 ಲಕ್ಷ 40 ಸಾವಿರ ಟ್ರೆಂಡ್ ಲಸಿಕೆಗಳಿವೆ, ಇವು ಇಮ್ಯೂನೈಸೆಶನ್ ಕಾರ್ಯಕ್ರಮ ಮತ್ತು ಇತರ ಅಗತ್ಯ ಲಸಿಕೆ ಕಾರ್ಯಕ್ರಮ ನಿರ್ವಹಿಸಲಿವೆ. ಆದರೆ ಕರೋನಾ ವೈರಸ್‌ಗೆ ಲಸಿಕೆ ನೀಡಲು ಕೇವಲ 1 ಲಕ್ಷ 54 ಸಾವಿರ ತರಬೇತಿ ಪಡೆದ ವ್ಯಾಕ್ಸಿನೇಟರ್‌ಗಳನ್ನುಮಾತ್ರ ಬಳಸಲಾಗುತ್ತಿದೆ. ಉಳಿದ ಜನರು ದಿನನಿತ್ಯದ ರೋಗನಿರೋಧಕ ಪ್ರಕ್ರಿಯೆಯಲ್ಲಿ ಕೆಲಸ ಮಾಡುವುದನ್ನು ಮುಂದುವರೆಸಲಿದ್ದಾರೆ. ಈ ಎಲ್ಲ ಜನರನ್ನು ನಾವು ಎಎಂಎನ್ ಅಥವಾ ಮಿಡ್‌ವೈಫ್ ಹೆಸರಿನಿಂದಲೂ ಗುರುತಿಸಲಿದ್ದೇವೆ.

ಮೊದಲು ಯಾರಿಗೆ ಸಿಗಲಿದೆ ಲಸಿಕೆ? (First vaccination in India)
ಮಾಹಿತಿಯ ಪ್ರಕಾರ, 1 ಕೋಟಿ ಸರ್ಕಾರಿ ಮತ್ತು ಖಾಸಗಿ ಕರೋನಾ ವಾಲೆಂಟೀಯರ್ ಗಳಿಗೆ  ಭಾರತದಲ್ಲಿ ಮೊದಲು ಲಸಿಕೆಯ ಡೋಸ್  ನೀಡಲಾಗುವುದು. ಇದರ ನಂತರ ಪೊಲೀಸ್ ಪಡೆ, ಸೇನೆ, ಪುರಸಭೆ ಕಾರ್ಮಿಕರಿಗೆ ಲಸಿಕೆ ನೀಡಲಾಗುವುದು. ನಂತರ 50 ವರ್ಷಕ್ಕಿಂತ ಮೇಲ್ಪಟ್ಟ ಜನರಿಗೆ ಮತ್ತು ಯಾವುದೇ ಕಾಯಿಲೆ ಇರುವ 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಮೊದಲು ಕರೋನಾ ಲಸಿಕೆ ನೀಡಲಾಗುವುದು. ಆದಾಗ್ಯೂ, ಈ ಆದ್ಯತೆಯ ಪಟ್ಟಿಯನ್ನು ಇನ್ನೂ ಪರಿಗಣಿಸಲಾಗುತ್ತಿದೆ. ಇದು ಸಹ ಬದಲಾಗಬಹುದು. ತಜ್ಞರ ಪ್ರಕಾರ, ಲಸಿಕೆ ಅನ್ವಯಿಸುವ ಕೆಲಸವು 1 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರಲಿದೆ.

ಇದನ್ನು ಓದಿ- ಈ ಪ್ಲಾನ್ ಅಡಿ ಕುಟುಂಬದ 15 ಸದಸ್ಯರಿಗೆ ಸಿಗುತ್ತೆ Health Insurance Cover

ಕೊವಿನ್ ಆಪ್   (Government Covin App)
ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಮಾಹಿತಿ ಸಂಗ್ರಹಿಸಿ ಅದನ್ನು ಪರಿಶೀಲಿಸಲಾಗುತ್ತಿದೆ. ಇದೇ ವೇಳೆ  ಕೋವಿನ್ ಅಪ್ಲಿಕೇಶನ್‌ನಲ್ಲಿ ಈ ಡೇಟಾವನ್ನು ಭರ್ತಿ ಮಾಡುವ ಕೆಲಸವನ್ನು ಸಹ ಪ್ರಾರಂಭಿಸಲಾಗಿದೆ. ರಾಜ್ಯಮಟ್ಟದಲ್ಲೂ ಸಭೆ ನಡೆಯುತ್ತಿದೆ. ಡಿಸೆಂಬರ್ 12 ರೊಳಗೆ ಜಿಲ್ಲಾ ಮಟ್ಟಕ್ಕೆ ಬಂದು ಮಾಹಿತಿ ಸಂಗ್ರಹಿಸುವ ಗುರಿ ನಿಗದಿಪಡಿಸಲಾಗಿದೆ. ಡಿಸೆಂಬರ್ 15 ರೊಳಗೆ ಬ್ಲಾಕ್ ಮಟ್ಟದಲ್ಲಿ ಸಭೆ ನಡೆಯಲಿದೆ.

ಕೋಲ್ಡ್ ಚೈನ್ ಸಿಸ್ಟಂ (Cold chain system)
ದೇಶದಲ್ಲಿ 85,634 ಕೋಲ್ಡ್ ಚೈನ್ ಉಪಕರಣಗಳಿವೆ. ಅಲ್ಲದೆ, ಎಷ್ಟು ಡೀಪ್ ಫ್ರೀಜರ್ ವಾಕಿಂಗ್ ಕೂಲರ್‌ಗಳು ಬೇಕಾಗುತ್ತವೆ, ಇದನ್ನು ಸಹ ಪರಿಶೀಲಿಸಲಾಗುತ್ತಿದೆ.

More Stories

Trending News