ಚಿಕನ್ ಬಿರಿಯಾನಿ ತಿಂದು ಯುವತಿ ಸಾವು: ಮೊನ್ನೆ ಮೊಮೊಸ್ ತಿಂದು ಮಹಿಳೆ ಸಾವು, ಮಹಿಳೆ-ಯುವತಿಯರಿಗೆ ಹೀಗೇಕೆ?
ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ.
ಇಂದೊಂಥರಾ ಭಾರೀ ಆಘಾತಕಾರಿ ಸುದ್ದಿ. ವಿಚಿತ್ರ ಸುದ್ದಿ ಕೂಡ. ಏಕೆಂದರೆ ಇತ್ತೀಚಿಗೆ ಜನ ಹೊರಗಡೆ ತಿನ್ನೋದು ಜಾಸ್ತಿ. ಹೊರಗಡೆ ಹೋಟೆಲ್ ಗಳಲ್ಲಿ, ರೆಸ್ಟೋರೆಂಟ್ ಗಳಲ್ಲಿ, ಬೀದಿ ಬದಿಯ ಅಂಗಡಿಗಳಲ್ಲಿ ಅಡುಗೆಗೆ ಕೆಮಿಕಲ್ಸ್ ಮತ್ತು ಕಲರ್ಸ್ ಹಾಕೋದು ಜಾಸ್ತಿ. ಹಾಗಾಗಿ ಫುಡ್ ಪಾಯ್ಸನ್ ಆಗೋದು ಕೂಡ ಜಾಸ್ತಿಯೇ. ಆದರೆ ಯಾರೂ ಫುಡ್ ಪಾಯ್ಸನ್ ನಿಂದ ಸಾಯುತ್ತಿರಲಿಲ್ಲ. ಆದರೀಗ ಫುಡ್ ಪಾಯ್ಸನ್ ಪ್ರಾಣಕ್ಕೆ ಕುತ್ತು ತರುತ್ತಿದೆ. ಇನ್ನು ಮುಂದೆ ಫುಡ್ ಪಾಯ್ಸನ್ ಬಗ್ಗೆನೂ ತುಂಬಾ ಕೇರ್ ಫುಲ್ ಆಗಿ ಇರಬೇಕಾಗಿದೆ.
ಫುಡ್ ಪಾಯ್ಸನ್ ಬಗ್ಗೆ ಇಷ್ಟೊಂದು ತಲೆಕೆಡಿಸ್ಕೊಬೇಕಾ, ಎರಡು ದಿನ ಹೊಟ್ಟೆ ಸರಿ ಇರಲ್ಲ. ಆ ಟೈಮ್ನಲ್ಲಿ ಸ್ವಲ ಎಚ್ಚರಿಕೆಯಿಂದ ಇದ್ದರೆ ಎಲ್ಲವೂ ಸರಿ ಹೋಗುತ್ತೆ. ಇದು ಓವರ್ ಬಿಲ್ಡಪ್ ಸ್ಟೋರಿ ಅಂದ್ಕೋಬೇಡಿ. ಫುಡ್ ಪಾಯ್ಸನ್ ಬಗ್ಗೆ ಏಕೆ ತುಂಬಾ ಕೇರ್ ಫುಲ್ ಆಗಿ ಇರಬೇಕು ಎನ್ನುವುದಕ್ಕೆ ಈ ಎರಡು ಪ್ರಕರಣಗಳೇ ಉದಾಹರಣೆ.
ಉದಾಹರಣೆ 1:ಎರಡು ದಿನಗಳ ಹಿಂದೆ ಹೈದರಾಬಾದಿನ ಸೆಂಟ್ ಥಾಮಸ್ ಶಾಲೆಯ ಐವರು ಸಿಬ್ಬಂದಿ ಗ್ರಿಲ್ ನೈನ್ ಮಲ್ಟಿ ಕ್ಯುಸಿನ್ ಎಂಬ ರೆಸ್ಟೋರೆಂಟ್ ನಲ್ಲಿ ಚಿಕನ್ ಬಿರಿಯಾನಿ ತಿಂದು ಬಂದಿದ್ದದಾರೆ. ಆ ಐವರ ಪೈಕಿ 19 ವರ್ಷದ ಫುಲ್ ಕಲಿಬಾಯಿ ಎಂಬ ಯುವತಿಗೆ ಫುಡ್ ಪಾಯ್ಸನ್ ಆಗಿದೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಯುವತಿ ಕಡೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ. ಯುವತಿಯ ಪೋಷಕರು ಹೋಟೆಲ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ- ಉಪ್ಪು ನೀರನ್ನು ಹೀಗೆ ಬಳಸಿದ್ರೆ ರಾತ್ರಿ ಸುಖವಾದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತೆ!
ಇನ್ನೊಂದೆಡೆ ಉಳಿದ ನಾಲ್ವರು ಕೂಡ ಅಸ್ವಸ್ಥರಾಗಿದ್ದು ಅವರ ಸ್ಥಿತಿಯೂ ಚಿಂತಾಜನಕವಾಗಿದೆ. ಸದ್ಯ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಕಮ್ಮ ರೆಡ್ಡಿ ಆಸ್ಪತ್ರೆಗೆ ಸ್ಥಾಳಾಂತರ ಮಾಡಲಾಗಿದೆ. ಫುಲ್ ಕಲಿಬಾಯಿ ಎಂಬ ಯುವತಿಯ ಬಳಿಕ ಉಳಿದ ನಾಲ್ವರ ಪೋಷಕರು-ಸಂಬಂಧಿಕರಲ್ಲೂ ಆತಂಕ ಮನೆಮಾಡಿದೆ. ಇದೇ ಹಿನ್ನೆಲೆಯಲ್ಲಿ ಸೆಂಟ್ ಥಾಮಸ್ ಶಾಲೆಯ ಆಡಳಿತ ಮಂಡಳಿ ಗ್ರಿಲ್ ನೈನ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ವಿರುದ್ಧ ಪ್ರತ್ಯೇಕ ದೂರೊಂದನ್ನು ದಾಖಲಿಸಿದ್ದಾರೆ.
ಈ ಐವರ ಕತೆ ಮಾತ್ರವಲ್ಲ, ಇದೇ ಗ್ರಿಲ್ ನೈನ್ ಮಲ್ಟಿ ಕ್ಯುಸಿನ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಊಟ ಮಾಡಿದ್ದ ನಗರದ ಇನ್ನೂ 20ಕ್ಕೂ ಹೆಚ್ಚು ಜನರಿಗೆ ಫುಡ್ ಪಾಯ್ಸನ್ ಆಗಿದೆ. ಅವರೆಲ್ಲರೂ ಚಿಕಿತ್ಸೆ ಪಡೆಯುತ್ತಿದ್ದು, ಕೆಲವರ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದುಬಂದಿದೆ.
ಉದಾಹರಣೆ 2: ಅಕ್ಟೊಬರ್ 30ರಂದು ಮಹಿಳೆಯೊಬ್ಬರು ಬೀದಿ ಬದಿಯಲ್ಲಿ ಮಾರುವ ಮೋಮೋಸ್ ತಿಂದು ಮೃತಪಟ್ಟ ಘಟನೆ ಇದೇ ಹೈದರಾಬಾದ್ ನಗರದ ಬಂಜಾರಾ ಹಿಲ್ಸ್ ಪ್ರದೇಶದಲ್ಲಿ ನಡೆದಿತ್ತು. 33 ವರ್ಷದ ರೇಷ್ಮಾ ಬೇಗಂ ಎನ್ನುವವರೇ ಮೋಮೋಸ್ ತಿಂದು ಮೃತಪಟ್ಟ ನತದೃಷ್ಟ ಮಹಿಳೆ ಎನ್ನಲಾಗಿದೆ. ಅಂದು ರೇಷ್ಮಾ ಬೇಗಂ ಅವರೊಂದಿಗೆ ಅದೇ ಅಂಗಡಿಯಲ್ಲಿ ಮೋಮೋಸ್ ತಂದಿದ್ದ ಇನ್ನೂ 20 ಜನ ಅಸ್ವಸ್ಥಗೊಂಡಿದ್ದರು.
ಇಲ್ಲಿನ ಖೈರತಾಬಾದ್ ಎನ್ನುವ ಪ್ರದೇಶದಲ್ಲಿ ಬೀದಿ ಬದಿ ಮಾರುತ್ತಿದ್ದ ಅಕ್ಟೊಬರ್ 30ರಂದು ರೇಷ್ಮಾ ಬೇಗಂ ಅವರು ಮೋಮೋಸ್ ತಿಂದು ಮನೆಗೆ ಬಂದಿದ್ದಾರೆ. ಮನೆಗೆ ಬಂದ ಮೇಲೆ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿಯೂ ಆಗಿದೆ. ಸ್ವಲ್ಪ ಸಮಯದ ಬಳಿಕ ಅವರು ಸಾವನ್ನಪ್ಪಿದ್ದಾರೆ. ಬಳಿಕ ರೇಷ್ಮಾ ಬೇಗಂ ಜೊತೆ ಮೋಮೋಸ್ ತಿಂದಿದ್ದ ಅವರ ಪುತ್ರಿಯರೂ ಅಸ್ವಸ್ಥಳಾಗಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಇದನ್ನೂ ಓದಿ- ಹಲ್ಲುಗಳಲ್ಲಿ ಹುಳುಕು, ಅಸಹನೀಯ ನೋವು ನಿವಾರಣೆಗೆ ಸರಳ ಪರಿಣಾಮಕಾರಿ ಮನೆಮದ್ದುಗಳು
ಮೋಮೋಸ್ ತಿಂದು ಮಹಿಳೆ ಮೃತಪಟ್ಟ ಘಟನೆ ಬಗ್ಗೆ ಮಾತನಾಡಿರುವ ಬಂಜಾರಾ ಹಿಲ್ಸ್ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ರಾಮ್ ಬಾಬು ಅವರು ‘ಮೋಮೋಸ್ ತಿಂದು ಅಸ್ವಸ್ಥರಾಗಿರುವ ಬಗ್ಗೆ ಒಟ್ಟು 15 ಪ್ರಕರಣಗಳು ದಾಖಲಾಗಿವೆ. ಇದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ತಿಳಿಸಿದ್ದಾರೆ.
ಈ ಎರಡೂ ಪ್ರಕರಣಗಳೂ ಹೈದರಾಬಾದ್ ನಲ್ಲೇ ನಡೆದಿದ್ದು, ಪ್ರಾಥಮಿಕ ತನಿಖೆಯಿಂದ ಮಹಿಳೆಯರು ಮತ್ತು ಯುವತಿಯರು ಹೆಚ್ಚಿನ ಪ್ರಮಾಣದಲ್ಲಿ ಫುಡ್ ಪಾಯ್ಸನ್ ಗೆ ಒಳಗಾಗುತ್ತಿದ್ದಾರೆ. ಹೋಟೆಲ್, ರೆಸ್ಟೋರೆಂಟ್ ಗಳಲ್ಲಿ ಅಥವಾ ಬೀದಿ ಬದಿ ಮಾರಾಟ ಮಾಡುವ ಕಡೆ ಸ್ವಚ್ಛತೆ ಇಲ್ಲದಿರುವುದು, ಅಡುಗೆ ಮಾಡುವ ವಿಧಾನ, ಹೆಚ್ಚು ಹೊತ್ತು ರೇಫ್ರಿಜೆಟರ್ ಗಳಲ್ಲಿ ಅಡುಗೆ ಸಾಮಾನುಗಳನ್ನು ಇಡುವುದು ಸೇರಿದಂತೆ ಅನೇಕ ಅಂಶಗಳು ಫುಡ್ ಪಾಯ್ಸನ್ ಆಗಲು ಕಾರಣವಾಗುತ್ತವೆ ಎಂದು ಹೇಳಲಾಗಿದೆ. ಈ ಬಗ್ಗೆ ಅಪರೂಪಕ್ಕೆ ಹೊರಗೆ ತಿನ್ನುವ ಯುವತಿಯರು ಮತ್ತು ಮಹಿಳೆಯರು ಕೂಡ ಎಚ್ಚರದಿಂದ ಇರಬೇಕು ಎಂದು ತಿಳಿದುಬಂದಿದೆ. ಹಾಗಂತ ಪುರುಷರು ಮೈಮರೆಯುವಂತಿಲ್ಲ. ಅದೃಶವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಹೊರಗಡೆ ಹೆಚ್ಚು ತಿನ್ನುವುದರಿಂದ ಅವರಿಗೂ ಅಪಾಯ ಆಗುವ ಸಾಧ್ಯತೆಗಳು ಇದ್ದೇ ಇರುತ್ತವೆ. ಪುರುಷರೂ ಕೂಡ ಎಚ್ಚರದಿಂದ ಇರಬೇಕಾಗಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.