ಉಪ್ಪು ನೀರನ್ನು ಹೀಗೆ ಬಳಸಿದ್ರೆ ರಾತ್ರಿ ಸುಖವಾದ ನೆಮ್ಮದಿಯ ನಿದ್ರೆ ನಿಮ್ಮದಾಗುತ್ತೆ!

Written ByYashaswini V
Published: Oct 24, 2024, 08:53 PM IST|Updated: Oct 24, 2024, 08:53 PM IST

Deep Sleep Tips: ದಿನವಿಡೀ ಕೆಲಸ ಮಾಡಿ ಆಯಾಸ ಆಗಿದ್ಯಾ? ನಿದ್ರೆನೇ ಬರ್ತಾ ಇಲ್ವಾ..! 

Sleeping Tips: ಅತಿಯಾದ ಮೈಕೈ ನೋವು, ಒತ್ತಡದಿಂದಾಗಿ ರಾತ್ರಿ ಹೊತ್ತು ಸರಿಯಾಗಿ ನಿದ್ದೆಯೇ ಬರ್ತಾ ಇಲ್ಲ ಅಂತ ಕೆಲವರು ದೂರುತ್ತಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Sleeping Tips 1/8

ನಿದ್ರಾಹೀನತೆ

ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಉಪ್ಪು ನೀರು ಅತ್ಯುತ್ತಮ ಪರಿಹಾರವಾಗಿದೆ. 

Salt Water 2/8

ಉಪ್ಪು ನೀರು

ನಿತ್ಯ ರಾತ್ರಿ ಮಲಗುವ ಮೊದಲು ಬೆಚ್ಚಗಿನ ನೀರಿನಲ್ಲಿ ಉಪ್ಪು ಹಾಕಿ ಅದರಲ್ಲಿ ಕೆಲಹೊತ್ತು ಕಾಲು ನೆನೆಸುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 

Body relief3/8

ದೇಹಕ್ಕೆ ರಿಲೀಫ್

ಉಪ್ಪು ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಇದು ದೇಹಕ್ಕೆ ರಿಲೀಫ್ ನೀಡಿ ಶರೀರಕ್ಕೆ ಪುನರ್ಯೌವನವನ್ನು ನೀಡುತ್ತದೆ. 

Muscle swelling4/8

ಸ್ನಾಯುಗಳ ಊತ

ಉಪ್ಪು ನೀರು ದೇಹಕ್ಕೆ ಮೆಗ್ನೀಸಿಯಮ್ ಒದಗಿಸಿ ಸ್ನಾಯುಗಳ ಊತವನ್ನು ಕಡಿಮೆ ಮಾಡುತ್ತದೆ. ಇದು ಆರಾಮದಾಯಕ ನಿದ್ರೆಗೆ ಪ್ರೇರೇಪಿಸುತ್ತದೆ. 

Arthritis5/8

ಸಂಧಿವಾತ

ಕೆಲವರಿಗೆ ಸಂಧಿವಾತ ಸಮಸ್ಯೆಯಿಂದಾಗಿ ಸರಿಯಾಗಿ ನಿದ್ರೆ ಬರುವುದಿಲ್ಲ. ರಾತ್ರಿ ಬಿಸಿ ನೀರಿನಲ್ಲಿ ಉಪ್ಪು ಹಾಕಿ ಕಾಲನ್ನು ನೆನೆಸುವುದರಿಂದ ಸಂಧಿವಾತ ನೋವು ಕಡಿಮೆಯಾಗಿ ಸುಖವಾದ ನಿದ್ರೆ ಪಡೆಯಬಹುದು. 

Body pain 6/8

ಮೈ-ಕೈ ನೋವು ನಿವಾರಣೆ

ಬಿಸಿ ನೀರಿನಲ್ಲಿ ಉಪ್ಪು ಹಾಕಿ ಕಾಲು ನೆನೆಸುವುದರಿಂದ ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ಮೈ-ಕೈ ನೋವು ನಿವಾರಣೆಯಾಗಿ ಸುಲಭವಾಗಿ ನಿದ್ರೆಗೆ ಜಾರಬಹುದು. 

Leg pain 7/8

ಕಾಲು ನೋವು

ರಾತ್ರಿ ಮಲಗುವ ಮುನ್ನ ಉಪ್ಪು ಹಾಕಿದ ನೀರಿನಲ್ಲಿ ಪಾದಗಳನ್ನು ನೆನೆಸುವುದರಿಂದ ಕಾಲು ನೋವು ನಿವಾರಣೆಯಾಗಿ ಸುಖ ನಿದ್ರೆ ಪಡೆಯಲು ಸಹಕಾರಿ ಆಗುತ್ತದೆ. 

Simple Tips to Get Deep sleep 8/8

ಉತ್ತಮ ನಿದ್ರೆಗೆ ಉಪ್ಪು ನೀರಿನ ಪ್ರಯೋಜನ

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.