ಹಲ್ಲುಗಳಲ್ಲಿ ಹುಳುಕು, ಅಸಹನೀಯ ನೋವು ನಿವಾರಣೆಗೆ ಸರಳ ಪರಿಣಾಮಕಾರಿ ಮನೆಮದ್ದುಗಳು

Home Remedy: ನಿಮಗೂ ಹಲ್ಲುಗಳಲ್ಲಿ ಹುಳುಕು, ಅಸಹನೀಯ ನೋವು ಕಾಡುತ್ತಿದೆಯೇ? ಇಲ್ಲಿದೆ ಸರಳ ಮನೆಮದ್ದುಗಳು. 

Home Remedies For Tooth Decay and Pain: ಹಲ್ಲುಗಳಲ್ಲಿ ಹುಳುಕು ಮತ್ತು ಅತೀವವಾದ ಹಲ್ಲು ನೋವಿನಿಂದ ಬಳಲುತ್ತಿದ್ದರೆ ಇದರಿಂದ ಪರಿಹಾರ ಪಡೆಯಲು ಇಲ್ಲಿದೆ ಪರಿಣಾಮಕಾರಿ ಮನೆಮದ್ದುಗಳು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ನಿತ್ಯ ಎರಡು ಬಾರಿ ಬ್ರಶ್ ಮಾಡಿದರೂ ಹಲ್ಲುಗಳ ಹುಳುಕು ಹಾಗೂ ಅಸಹನೀಯ ಹಲ್ಲು ನೋವು ಕಾಡುತ್ತಿದ್ದರೆ ಇದರಿಂದ ಸುಲಭವಾಗಿ ಪರಿಹಾರ ಪಡೆಯಲು ಇಲ್ಲಿದೆ ಕೆಲವು ಪರಿಣಾಮಕಾರಿ ಮನೆಮದ್ದುಗಳು.

2 /8

ಉಪ್ಪಿನಿಂದ ಬ್ರಶ್ ಮಾಡುವುದರಿಂದ ಹಲ್ಲು ನೋವಿನಿಂದ ತಕ್ಷಣ ಉಪಶಮನ ಪಡೆಯಬಹುದು. 

3 /8

ಸಾಸಿವೆ ಎಣ್ಣೆಯಲ್ಲಿ ಉಪ್ಪು, ಅರಿಶಿನ ಬೆರೆಸಿ ಹುಳುಕಲ್ಲಿನ ಮೇಲೆ ಸವರಿ ಮಸಾಜ್ ಮಾಡಿದರೆ ಹಲ್ಲಿನ ಹುಳುಕನ್ನು ನಿವಾರಿಸಬಹುದು. 

4 /8

ಕಲ್ಲುಪ್ಪನ್ನು ಹರಳೆಣ್ಣೆಯಲ್ಲಿ ಬೆರೆಸಿ ಹತ್ತಿ ಉಂಡೆಯ ಸಹಾಯದಿಂದ ಹುಳುಕಲ್ಲಿನ ಜಾಗದಲ್ಲಿ ಇಡುವುದರಿಂದ ಹಲ್ಲಿನ ಹುಳುಕು ನೋವಿನಿಂದ ಪರಿಹಾರ ದೊರೆಯುತ್ತದೆ. 

5 /8

ಬೆಳ್ಳುಳ್ಳಿಯನ್ನು ಜಜ್ಜಿ ಇದರೊಂದಿಗೆ ಪುಡಿ ಉಪ್ಪನ್ನು ಬೆರೆಸಿ ಬ್ರಶ್ ಮಾಡಿದರೆ ಅಸಹನೀಯ ಹಲ್ಲು ನೋವು ಕೂಡಲೇ ಮಾಯವಾಗುತ್ತದೆ. 

6 /8

ಹಲ್ಲು ನೋವಿಗೆ ಲವಂಗದ ಎಣ್ಣೆ ಅತ್ಯುತ್ತಮ ಪರಿಹಾರವಾಗಿದೆ. ಹತ್ತಿ ಉಂಡೆಯಲ್ಲಿ ಲವಂಗದ ಎಣ್ಣೆಯನ್ನು ಅಡ್ಡಿ ಪೀಡಿತ ಜಾಗಕ್ಕೆ ಹಚ್ಚುವುದರಿಂದ ಹಲ್ಲು ನೋವು ಕಡಿಮೆಯಾಗುತ್ತದೆ. 

7 /8

ತುಳಸಿದಳದಲ್ಲಿ ಉಪ್ಪು ಬೆರೆಸಿ ಹಲ್ಲು ನೋವಿರುವ ಜಾಗದಲ್ಲಿ ಇಡುವುದರಿಂದ ತಕ್ಷಣವೇ ಹಲ್ಲು ನೋವು ಮಾಯವಾಗುವುದರ ಜೊತೆಗೆ ಹುಳುಕಲ್ಲಿನಿಂದಲೂ ಪರಿಹಾರ ದೊರೆಯುತ್ತದೆ. 

8 /8

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.