ನವದೆಹಲಿ: ಚೀನಾದ ಮೊಬೈಲ್ ಆ್ಯಪ್‌ಗಳನ್ನು ಮತ್ತೆ ಬಿಗಿಗೊಳಿಸಿದ ಭಾರತ ಸರ್ಕಾರವು ಭಾರತದಲ್ಲಿ 118 ಆ್ಯಪ್‌ಗಳ ಬಳಕೆಯನ್ನು ನಿಷೇಧಿಸಿದೆ. ಇದು ವಿಶ್ವಾದ್ಯಂತ ಜನಪ್ರಿಯ ಗೇಮಿಂಗ್ ಅಪ್ಲಿಕೇಶನ್ PUBG ಅನ್ನು ಸಹ ಒಳಗೊಂಡಿದೆ. ಈ ಹಿಂದೆ ಭಾರತ ಸರ್ಕಾರ ಸುಮಾರು 106 ಆ್ಯಪ್‌ಗಳನ್ನು ಈಗಾಗಲೇ ನಿಷೇಧಿಸಿದೆ. ಇದು ಟಿಕ್‌ಟಾಕ್ (Tiktok) ಎಂಬ ವಿಡಿಯೋ ಅಪ್ಲಿಕೇಶನ್ ಅನ್ನು ಸಹ ಒಳಗೊಂಡಿತ್ತು.


COMMERCIAL BREAK
SCROLL TO CONTINUE READING

ಲಡಾಖ್ (Ladakh) ಗಡಿಯಲ್ಲಿ ಚೀನಾದೊಂದಿಗಿನ ವಿವಾದದ ನಂತರ ಚೀನಾವನ್ನು ರಾಜತಾಂತ್ರಿಕ ಮಟ್ಟದಲ್ಲಿ ಬಿಗಿಗೊಳಿಸಲು ಭಾರತ ಸರ್ಕಾರ ಕೆಲಸ ಮಾಡುತ್ತಿದೆ. ಇದರ ಅಡಿಯಲ್ಲಿ ಚೀನಾವನ್ನು ಆರ್ಥಿಕ ಮಟ್ಟದಲ್ಲಿ ಸೋಲಿಸುವ ಪ್ರಯತ್ನಗಳು ನಡೆಯುತ್ತಿವೆ.


ಮಾಹಿತಿ ತಂತ್ರಜ್ಞಾನ ಸಚಿವಾಲಯದ ಆದೇಶದ ಪ್ರಕಾರ Baidu, APUS ಲಾಂಚರ್ ಪ್ರೊ ವಿತ್ PUBGಯಂತಹ ಆ್ಯಪ್‌ಗಳನ್ನು ನಿಷೇಧಿಸಲಾಗಿದೆ. ಈಗ ಸರ್ಕಾರ ನಿಷೇಧಿಸಿರುವ ಅಪ್ಲಿಕೇಶನ್‌ಗಳಲ್ಲಿ Baidu Express Edition, Tencent Watchlist, FaceU, WeChat Reading and Tencent Weiyun, awn of Isles, Chess Rush, Game of Sultans ಸೇರಿವೆ.



ಐಟಿ ಕಾಯ್ದೆಯ ಸೆಕ್ಷನ್ 69 ಎ ಅಡಿಯಲ್ಲಿ ಈ ಮೊಬೈಲ್ ಆ್ಯಪ್‌ಗಳನ್ನು ಸಚಿವಾಲಯ ನಿಷೇಧಿಸಿದೆ. ಸರ್ಕಾರದ ಪ್ರಕಾರ ಈ ಆ್ಯಪ್‌ಗಳು ಭಾರತದ ಭದ್ರತೆಗೆ ವಿರುದ್ಧವಾದ ಚಟುವಟಿಕೆಗಳಲ್ಲಿ ಭಾಗಿಯಾಗಿವೆ ಎಂದು ಹೇಳಲಾಗಿದೆ. ಜೊತೆಗೆ ಈ ಆ್ಯಪ್‌ಗಳ ಬಗ್ಗೆ ನಿರಂತರವಾಗಿ ದೂರುಗಳು ಬರುತ್ತಿವೆ ಎಂದು ಸಚಿವಾಲಯ ತಿಳಿಸಿದೆ.


ಜೂನ್ ಅಂತ್ಯದಲ್ಲಿ ಭಾರತವು ಟಿಕ್‌ಟಾಕ್ ಜೊತೆಗೆ ShareIt, UC Browser, Shein, Club Factory, Clash of Kings, Helo, Mi Community, CamScanner, ES File Explorer, VMate ಸೇರಿದಂತೆ 58 ಚೀನೀ ಅಪ್ಲಿಕೇಶನ್‌ಗಳನ್ನು ಭಾರತದಲ್ಲಿ ನಿಷೇಧಿಸಲಾಗಿದೆ ಎಂದು ಘೋಷಿಸಿತು.