ನವದೆಹಲಿ: ಭಾನುವಾರ ಸಂಜೆ ಗುಜರಾತ್‌ನ ಮೊರ್ಬಿ ಸೇತುವೆ ಕುಸಿತದ ದುರಂತದಲ್ಲಿ ಇಲ್ಲಿವರೆಗೆ 140ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ. ಈ ಪೈಕಿ ರಾಜ್‌ಕೋಟ್‌ನ ಬಿಜೆಪಿ ಸಂಸದ ಮೋಹನ್‌ಭಾಯ್ ಕಲ್ಯಾಣ್‌ಜಿ ಕುಂದರಿಯಾ ಅವರ 12 ಮಂದಿ ಕುಟುಂಬ ಸದಸ್ಯರು ಸಹ ಪ್ರಾಣ ಕಳೆದುಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿ ದುಃಖ ವ್ಯಕ್ತಪಡಿಸಿರುವ ಮೋಹನ್‌ಭಾಯ್ ಕಲ್ಯಾಣ್‌ಜಿ, ‘ನಾನು ಈ ದುರ್ಘಟನೆಯಲ್ಲಿ 5 ಮಕ್ಕಳು ಸೇರಿದಂತೆ ನನ್ನ ಕುಟುಂಬದ 12 ಸದಸ್ಯರನ್ನು ಕಳೆದುಕೊಂಡಿದ್ದೇನೆ. ನನ್ನ ಸಹೋದರಿಯ ಕುಟುಂಬದಿಂದ ಬಂದ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದೇನೆ’ ಅಂತಾ ಹೇಳಿದ್ದಾರೆ.


ಇದನ್ನೂ ಓದಿ: Shocking: ಮನೆಯಲ್ಲಿ ಒಂದೇ ಕುಟುಂಬದ ನಾಲ್ವರ ಕೊಳೆತ ಶವ ಪತ್ತೆ..!


ದುರಂತ ಸಂಭವಿಸಿದಾಗ ಮೋಹನ್‌ಭಾಯ್ ಕಲ್ಯಾಣ್‌ಜಿಯವರ ಕುಟುಂಬಸ್ಥರು ಭಾನುವಾರ ಪಿಕ್ನಿಕ್ ಸ್ಥಳಕ್ಕೆ ಭೇಟಿ ನೀಡಿದ್ದರು. ಸಾವನ್ನಪ್ಪಿದ 12 ಮಂದಿಯ ಪೈಕಿ ಐವರು ಮಕ್ಕಳು, ನಾಲ್ವರು ಮಹಿಳೆಯರು ಮತ್ತು ಮೂವರು ಪುರುಷರಿದ್ದಾರೆ. ಅವರ ಹಿರಿಯ ಸಹೋದರನ ಎಲ್ಲಾ ಹತ್ತಿರದ ಸಂಬಂಧಿಗಳು ಈ ದುರ್ಘಟನೆಯಲ್ಲಿ ಪ್ರಾಣಬಿಟ್ಟಿದ್ದಾರೆ. ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ಆಕ್ರೋಶ ಹೊರಹಾಕಿದ್ದಾರೆ.


‘ನನ್ನ ಅಣ್ಣನ ಸೋದರ ಮಾವನ ನಾಲ್ವರು ಹೆಣ್ಣುಮಕ್ಕಳು, ಅವರ ಮೂವರ ಗಂಡಂದಿರು ಮತ್ತು 5 ಮಕ್ಕಳು ಸಾವನ್ನಪ್ಪಿದ್ದಾರೆ. ಇವರು. ಟಂಕರ ತಾಲೂಕಿನ ವಿವಿಧ ಗ್ರಾಮಗಳಿಗೆ ಸೇರಿದ ಇವರು ಮೋರ್ಬಿಯಲ್ಲಿ ನೆಲೆಸಿದ್ದರು ಎಂದು ಕುಂದರಿಯಾ ತಿಳಿಸಿದ್ದಾರೆ.


ಇದನ್ನೂ ಓದಿ: Viral Dance: ನಡು ರಸ್ತೆಯಲ್ಲಿ ಈ ಸೂಪರ್ ಗರ್ಲ್ ಮಾಡುವ ಅಪಾಯಕಾರಿ ಡಾನ್ಸ್ ನೀವೂ ನೋಡಿ


‘ಭಾನುವಾರವಾದ್ದರಿಂದ ನನ್ನ ಸಂಬಂಧಿಕರು ದುರಂತ ಸಂಭವಿಸಿದ ಪಿಕ್ನಿಕ್ ಸ್ಥಳಕ್ಕೆ ಹೋಗಿದ್ದರು. ಘಟನೆ ನಡೆದ ಅರ್ಧ ಗಂಟೆಯ ನಂತರ ನಾನು ಅಲ್ಲಿಗೆ ತಲುಪಿದೆ ಮತ್ತು ನಿನ್ನೆಯಿಂದ ಸ್ಥಳದಲ್ಲಿದ್ದು, ರಕ್ಷಣಾ ಕಾರ್ಯದಲ್ಲಿ ಸಹಾಯ ಮಾಡುತ್ತಿದ್ದೇನೆ’ ಎಂದು ಸಂಸದರು ಹೇಳಿದ್ದಾರೆ.


ಘಟನಾ ಸ್ಥಳದಲ್ಲಿ NDRF, SDRF ಮತ್ತು ಸ್ಥಳೀಯ ಆಡಳಿತವು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಘಟನೆಯಲ್ಲಿ ಬದುಕುಳಿದ ಎಲ್ಲರನ್ನೂ ರಕ್ಷಿಸಲಾಗಿದೆ. ಇನ್ನೂ ಸಿಲುಕಿರುವ ಹಲವರನ್ನು ಹೊರತೆಗೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.