Viral Dance: ನಡು ರಸ್ತೆಯಲ್ಲಿ ಈ ಸೂಪರ್ ಗರ್ಲ್ ಮಾಡುವ ಅಪಾಯಕಾರಿ ಡಾನ್ಸ್ ನೀವೂ ನೋಡಿ

Dance Learning: ಸಾಮಾಜಿಕ ಮಾಧ್ಯಮದಲ್ಲಿ ಒಂದಕ್ಕಿಂತ ಒಂದು ವಿಶಿಷ್ಟ ವಿಡಿಯೋಗಳು ದಿನನಿತ್ಯ ಕಂಡುಬರುತ್ತಲೇ ಇರುತ್ತವೆ. ಆದರೆ, ನಡು ರಸ್ತೆಯಲ್ಲಿಯೇ ಸೈಕಲ್ ಓಡಿಸುತ್ತಾ ಈ ಯುವತಿ ಮಾಡುತ್ತಿರುವ ಡಾನ್ಸ್ ನೋಡಿದ ಜನರು ನಿಬ್ಬೇರಗಾಗಿದ್ದಾರೆ.

Written by - Nitin Tabib | Last Updated : Oct 31, 2022, 10:15 PM IST
  • ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ರಸ್ತೆಯಲ್ಲಿ ಸೈಕಲ್ ತುಳಿಯುವುದನ್ನು ನೋಡಬಹುದು.
  • ಆದರೆ ಅಚ್ಚರಿಯ ಸಂಗತಿ ಎಂದರೆ ಎರಡೂ ಕೈ ಬಿಟ್ಟು ಸೈಕಲ್ ತುಳಿಯುತ್ತಿದ್ದಾಳೆ.
  • ಅಷ್ಟೇ ಅಲ್ಲ ತನ್ನ ತಲೆಯ ಮೇಲೆ ಕಲಶವನ್ನೂ ಹೊತ್ತುಕೊಂಡಿದ್ದಾಳೆ.
Viral Dance: ನಡು ರಸ್ತೆಯಲ್ಲಿ ಈ ಸೂಪರ್ ಗರ್ಲ್ ಮಾಡುವ ಅಪಾಯಕಾರಿ ಡಾನ್ಸ್ ನೀವೂ ನೋಡಿ title=
Viral Video (Video Grab)

Dance Challenge: ಭಾರತದಲ್ಲಿ ಪ್ರತಿಭೆಗಳಿಗೆ ಕೊರತೆ ಇಲ್ಲ. ಇದೇ ವೇಳೆ, ಸಾಮಾಜಿಕ ಮಾಧ್ಯಮ ವೇದಿಕೆಗಳು ಅನೇಕ ಜನರಿಗೆ ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ನೀಡುತ್ತಿವೆ. ಕೆಲವರು ತಮ್ಮ ಕಲೆಯಿಂದ ಜನರ ಆಕರ್ಷಿಸಲು ಈ ಅವಕಾಶವನ್ನು ಬಳಸಿಕೊಳ್ಳುತ್ತಾರೆ. ಅಂತಹುದೇ ಒಂದು ವೀಡಿಯೊವನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದೆ, ಇದರಲ್ಲಿ ಹುಡುಗಿ ನಿಜವಾಗಿಯೂ ಅದ್ಭುತವನ್ನೇ ಮಾಡಿದ್ದಾಳೆ.

ಈ ವಿಡಿಯೋದಲ್ಲಿ ಹುಡುಗಿಯೊಬ್ಬಳು ರಸ್ತೆಯಲ್ಲಿ ಸೈಕಲ್ ತುಳಿಯುವುದನ್ನು ನೋಡಬಹುದು. ಆದರೆ ಅಚ್ಚರಿಯ ಸಂಗತಿ ಎಂದರೆ ಎರಡೂ ಕೈ ಬಿಟ್ಟು ಸೈಕಲ್ ತುಳಿಯುತ್ತಿದ್ದಾಳೆ. ಅಷ್ಟೇ ಅಲ್ಲ ತನ್ನ ತಲೆಯ ಮೇಲೆ ಕಲಶವನ್ನೂ ಹೊತ್ತುಕೊಂಡಿದ್ದಾಳೆ. ಮೊದಲು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ಅದ್ಭುತ ವಿಡಿಯೋವನ್ನು ನೀವೂ ನೋಡಲೇಬೇಕು.

ಇದನ್ನೂ ಓದಿ-Bride Video: ವಿವಾಹ ಬಿಳ್ಕೊಡುಗೆ ಬಳಿಕ ತಾಳ್ಮೆ ಕಳೆದುಕೊಂಡ ವಧು, ಕಾರಿನಲ್ಲಿಯೇ ವರನಿಗೆ...!

ಅದ್ಭುತ ಡಾನ್ಸ್
ಈ ಯುವತಿ ತನ್ನ ತಲೆಯ ಮೇಲೆ ಕಲಶವಿಟ್ಟುಕೊಂಡು ಸೈಕಲ್ ತುಳಿಯುವುದು ಮಾತ್ರವಲ್ಲದೆ ಶಾಸ್ತ್ರೀಯ ನೃತ್ಯವನ್ನೂ ಮಾಡುತ್ತಿದ್ದಾಳೆ. ಶಾಸ್ತ್ರೀಯ ನೃತ್ಯವನ್ನು ಕಲಿಯುವುದು ಅಷ್ಟೇ ಕಷ್ಟ, ಆದರೆ ಈ ಕಲೆಯ ಇಂತಹ ಪ್ರದರ್ಶನ ನಿಜವಾಗಿಯೂ ಅದ್ಭುತವಾಗಿದೆ. ಬಾಲಕಿ ಈ ರೀತಿ ಡ್ಯಾನ್ಸ್ ಮಾಡುವುದನ್ನು ಕಂಡು ಜನ ನಿಬ್ಬೇರಗಾಗಿದ್ದಾರೆ. ಆದಾಗ್ಯೂ, ನಡುರಸ್ತೆಯಲ್ಲಿಯೇ ಇಂತಹ ಸಾಹಸಗಳನ್ನು ಮಾಡುವುದು ತುಂಬಾ ಅಪಾಯಕಾರಿ ಎಂದು ಸಾಬೀತಾಗಬಹುದು, ಆದ್ದರಿಂದ ಹಾಗೆ ಮಾಡಲು ಪ್ರಯತ್ನಿಸಬೇಡಿ. ಟ್ರೆಂಡಿಂಗ್ ವಿಡಿಯೋ ನೋಡಿ ಹಲವರು ಯುವತಿಯ ಪ್ರತಿಭೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. 

ಇದನ್ನೂ ಓದಿ-Viral Video: ”ಕಲಿಯುಗದ ‘ಕೃಷ್ಣ’ನ ಸಂಗೀತ ಕೇಳಿ ನಿಂತಲ್ಲೇ ಕುಣಿದಾಡಿತು ಗೋವು: ವಿಡಿಯೋ ನೋಡಿ

ವಿಡಿಯೋ ನೋಡಿ ದಂಗಾದ ಜನರು
ಈ ವೀಡಿಯೋ ಸಾಕಷ್ಟು ಸಾಕಷ್ಟು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಕೇವಲ 21 ಸೆಕೆಂಡುಗಳ ಈ ವಿಡಿಯೋವನ್ನು ಸಾವಿರಾರು ಮಂದಿ ನೋಡಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋವನ್ನು ಹಲವರು ಲೈಕ್ ಮಾಡಿ, ರೀಟ್ವೀಟ್ ಮಾಡಿದ್ದಾರೆ. ಕಾಮೆಂಟ್ ವಿಭಾಗದಲ್ಲಿ, ಕೆಲವರು ಯುವತಿಯ ಮೇಲೆ ಗಟ್ಟಿ ಗುಂಡಿಗೆಯವಳು ಎಂದು ಕರೆದರೆ, ಇನ್ನೂ ಕೆಲವರು ಕಾನ್ಫಿಡೆಂಟ್ ಮತ್ತು ರಿಸ್ಕ್  ಟೆಕರ್ ಎಂದು ಕರೆಯುತ್ತಿದ್ದಾರೆ. 

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News