ಕೃಷ್ಣಾ ಸ್ಟೀಲ್ ಕಂಪೆನಿಯಲ್ಲಿ ಬಾಯ್ಲರ್ ಸ್ಫೋಟ; ಮೂವರು ಕಾರ್ಮಿಕರ ಸಾವು
ದಾದ್ರಾ-ನಗರ್‌ಹವೇಲಿಯಲ್ಲಿ ಘಟನೆ.
ದಾದ್ರಾ-ನಗರ್‌ಹವೇಲಿ: ದಾದ್ರಾ-ನಗರ್‌ಹವೇಲಿಯಲ್ಲಿ ಸಿಲ್‌ವಸ್ಸಾದಲ್ಲಿನ ನರೋಲಿ ಗ್ರಾಮದಲ್ಲಿ ಬಾಯ್ಲರ್ ಸ್ಫೋಟಗೊಂಡಿದ್ದು ಮೂವರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ನರೋಲಿ ಗ್ರಾಮದಲ್ಲಿರುವ ಕೃಷ್ಣಾ ಸ್ಟೀಲ್ ಕಂಪೆನಿಯಲ್ಲಿ ಗುರುವಾರ ಬೆಳಗ್ಗೆ ಬಾಯ್ಲರ್‌ವೊಂದು ಸ್ಫೋಟಗೊಂಡ ಪರಿಣಾಮ ಮೂವರು ಕಾರ್ಮಿಕರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಸಿಲ್‌ವಸ್ಸಾದ ವಿನೋಬಾ ಭಾವೆ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನೆಗೆ ಕಾರಣವೇನೆಂಬುದು ತಿಳಿದಿಲ್ಲ. ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿರುವ ಪೊಲೀಸರು ಘಟನೆ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.