ನವದೆಹಲಿ: ಕೂದಲು ಕಸಿ ಮಾಡಿಸಿಕೊಳ್ಳಲು ಹೋಗಿದ್ದ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಆಘಾತಕಾರಿ ಘಟನೆ ದೆಹಲಿಯಲ್ಲಿ ನಡೆದಿದೆ. ಕೂದಲು ಕಸಿ ಮಾಡಿಸಿಕೊಳ್ಳಬೇಕು ಅಂತಾ ದೆಹಲಿಯ ಕ್ಲಿನಿಕ್‍ಗೆ ಹೋಗಿದ್ದ 30 ವರ್ಷದ ಅಥರ್ ರಶೀದ್ ಸಾವನ್ನಪ್ಪಿದ ವ್ಯಕ್ತಿ.


COMMERCIAL BREAK
SCROLL TO CONTINUE READING

ಕೂದಲು ಉದುರುವಿಕೆ ತೊಂದರೆಯಿಂದ ಚಿಂತೆಗಿಡಾಗಿದ್ದ ರಶೀದ್ ಜಾಹೀರಾತು ನೋಡಿ ತಮ್ಮ ಕೂದಲು ಕಸಿ ಮಾಡಿಸಿಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಅವರು ದೆಹಲಿಯ ಕ್ಲಿನಿಕ್‍ಗೆ ತೆರಳಿ ಕೂದಲು ಕಸಿ ಮಾಡಿಸಿಕೊಂಡಿದ್ದರು. ಚಿಕಿತ್ಸೆ ಬಳಿಕ ಅವರು ಬಹು ಅಂಗಾಗಳ ವೈಫಲ್ಯದಿಂದ ಸಾವನ್ನಪ್ಪಿದ್ದಾರೆಂದು ಆರೋಪಿಸಲಾಗಿದೆ.


ವರದಿಗಳ ಪ್ರಕಾರ ಮೃತ ರಶೀದ್ ಕುಟುಂಬ ಸದಸ್ಯರು ಈ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ದೂರಿನ ಮೇರೆಗೆ ಶಸ್ತ್ರಚಿಕಿತ್ಸೆ ನಡೆಸಿದ ಇಬ್ಬರು ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ರಶೀದ್ ಅವರು ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾರೆ.


ಇದನ್ನೂ ಓದಿ: Viral Video : ತನ್ನಪಾಡಿಗೆ ನಿಂತಿದ್ದ ಎಮ್ಮೆಯನ್ನು ಕೆಣಕಿದವನ ಸ್ಥಿತಿ ಏನಾಯ್ತು ನೋಡಿ! ನಕ್ಕು ನಕ್ಕು ಸುಸ್ತಾಗ್ತೀರಾ


ತಮ್ಮ ಕುಟುಂಬಕ್ಕೆ ರಶೀದ್ ಅವರೇ ಏಕೈಕ ಆಧಾರವಾಗಿದ್ದರು. ಮಗನನ್ನು ಕಳೆದುಕೊಂಡ ತಾಯಿ ಮತ್ತು ಸಹೋದರಿಯರ ಆಕ್ರಂದನ ಮುಗಿಲು ಮುಟ್ಟಿತ್ತು. ‘ಕೂದಲು ಕಸಿ ಶಸ್ತ್ರಚಿಕಿತ್ಸೆ ಬಳಿಕ ತಮ್ಮ ಮಗ ಸಾಕಷ್ಟು ನೋವು ಅನುಭವಿಸಿ ಸಾವನ್ನಪ್ಪಿದ್ದಾನೆ’ ಅಂತಾ ರಶೀದ್ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ.  


ಕೂದಲು ಕಸಿ ಶಸ್ತ್ರಚಿಕಿತ್ಸೆ ಬಳಿ ರಶೀದ್ ಅವರ ದೇಹದ ತುಂಬಾ ದದ್ದುಗಳು ಎದ್ದಿದ್ದವು ಎಂದು ಹೇಳಲಾಗಿದೆ. ನೋವಿನಿಂದ ನರಳುತ್ತಿದ್ದ ರಶೀದ್‍ನನ್ನು ಕಂಡು ಹೌಹಾರಿದ ಕುಟುಂಬಸ್ಥರು ಆಸ್ಪತ್ರೆಗೆ ಸಾಗಿಸಲು ಪ್ರಯತ್ನಿಸಿದ್ದಾರೆ. ಆದರೆ ವಿಪರಿತ ನೋವಿನಿಂದ ಬಳಲುತ್ತಿದ್ದ ಅವರು ಪ್ರಾಣಬಿಟ್ಟಿದ್ದಾರೆ. ಈ ಬಗ್ಗೆ ದೂರು ನೀಡಿದ ಕೂಡಲೇ ಪೊಲೀಸರು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯಕೀಯ ಸಿಬ್ಬಂದಿಯನ್ನು ಬಂಧಿಸಿದ್ದಾರೆ.


ಕೂದಲು ಕಸಿ ಮಾಡಿಸಿಕೊಳ್ಳುವುದೇ ದೊಡ್ಡ ತಪ್ಪು, ಈ ರೀತಿ ಯಾರು ಪ್ರಾಣ ಕಳೆದುಕೊಳ್ಳಬಾರದು ಅಂತಾ ಜನರಿಗೆ ತಿಳಿಸಲು ಪೊಲೀಸರಿಗೆ ದೂರು ನೀಡಿದ್ದೇನೆಂದು ರಶೀದ್ ತಾಯಿ ಆಸಿಯಾ ಬೇಗಂ ಹೇಳಿದ್ದಾರೆ. ‘ತನ್ನಂತೆ ಬೇರೆ ಯಾವ ತಾಯಿಯೂ ತನ್ನ ಮಗನನ್ನು ಕಳೆದುಕೊಳ್ಳಬಾರದು. ದುಡ್ಡು ಮಾಡಲು ಕೂದಲು ಕಸಿ ಮಾಡುತ್ತೇವೆಂದು ಮೋಸ ಮಾಡುತ್ತಾರೆ. ಜನರ ಜೀವದ ಜೊತೆ ಚೆಲ್ಲಾಟವಾಡುವ ವಂಚಕರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು ಅಂತಾ ಅವರು ಸಲಹೆ ನೀಡಿದ್ದಾರೆ.  


ಇದನ್ನೂ ಓದಿ: Kissing In Car: ಕಾರಿನಲ್ಲಿ ಸಂಗಾತಿಗೆ ಕಿಸ್ ಮಾಡುವುದು ಕಾನೂನುಬಾಹಿರವೇ?


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.