Viral Video : ತನ್ನಪಾಡಿಗೆ ನಿಂತಿದ್ದ ಎಮ್ಮೆಯನ್ನು ಕೆಣಕಿದವನ ಸ್ಥಿತಿ ಏನಾಯ್ತು ನೋಡಿ! ನಕ್ಕು ನಕ್ಕು ಸುಸ್ತಾಗ್ತೀರಾ

Bike Rider Fell Down: ವಿನಾಕಾರಣ ಯಾರನ್ನಾದರೂ ಕೆಣಕುವುದು ಕೆಲವರಿಗೆ ಸ್ವಭಾವವಾಗಿ ಬಿಟ್ಟಿರುತ್ತದೆ. ಹೀಗೆ ಸುಖಾ ಸುಮ್ಮನೆ ಮಾಡಿದ ಕಿತಾಪತಿಗೆ ಭಾರೀ ದಂಡವನ್ನು ಸಹ ತೆರಬೇಕಾಗುತ್ತದೆ. ಇಲ್ಲೊಬ್ಬ ಹುಡುಗ ಎಮ್ಮೆಯನ್ನು ಚುಡಾಯಿಸಲು ಹೋಗಿ ತಾನೇ ಪಶ್ಚಾತಾಪ ಪಟ್ಟ ಘಟನೆಯ ವಿಡಿಯೋ ವೈರಲ್‌ ಆಗ್ತಿದೆ. 

Written by - Chetana Devarmani | Last Updated : Dec 6, 2022, 12:58 PM IST
  • ತನ್ನಪಾಡಿಗೆ ನಿಂತಿದ್ದ ಎಮ್ಮೆಯನ್ನು ಕೆಣಕಿದ ಯುವಕ
  • ಬಳಿಕ ಆತನ ಸ್ಥಿತಿ ಏನಾಯ್ತು ಎಂದು ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಾ
  • ಸಾಮಾಜಿಕ ಮಾಧ್ಯಮಗಳಲ್ಲಿ ಈ ವಿಡಿಯೋ ವೈರಲ್‌
Viral Video : ತನ್ನಪಾಡಿಗೆ ನಿಂತಿದ್ದ ಎಮ್ಮೆಯನ್ನು ಕೆಣಕಿದವನ ಸ್ಥಿತಿ ಏನಾಯ್ತು ನೋಡಿ! ನಕ್ಕು ನಕ್ಕು ಸುಸ್ತಾಗ್ತೀರಾ title=
ಎಮ್ಮೆಯನ್ನು ಕೆಣಕಿದ ಯುವಕ

Bike Rider Fell Down: ವಿನಾಕಾರಣ ಯಾರನ್ನಾದರೂ ಕೆಣಕುವುದು ಕೆಲವರಿಗೆ ಸ್ವಭಾವವಾಗಿ ಬಿಟ್ಟಿರುತ್ತದೆ. ಹೀಗೆ ಸುಖಾ ಸುಮ್ಮನೆ ಮಾಡಿದ ಕಿತಾಪತಿಗೆ ಭಾರೀ ದಂಡವನ್ನು ಸಹ ತೆರಬೇಕಾಗುತ್ತದೆ. ಇರಲಾರದೇ ಇರುವೆ ಬಿಟ್ಕೊಂಡ್ರು ಅನ್ನೋ ಹಾಗೆ ಇಲ್ಲೊಬ್ಬ ಹುಡುಗ ಎಮ್ಮೆಯನ್ನು ಚುಡಾಯಿಸಲು ಹೋಗಿ ತಾನೇ ಪಶ್ಚಾತಾಪ ಪಟ್ಟ ಘಟನೆಯ ವಿಡಿಯೋ ವೈರಲ್‌ ಆಗ್ತಿದೆ. ತನ್ನಪಾಡಿಗೆ ತಾನಿದ್ದ ಎಮ್ಮೆಯನ್ನು ಕೆಣಕಿದವನ ಸ್ಥಿತಿ ಮುಂದೇನಾಯ್ತು ಅಂತ ನೋಡಿದ್ರೆ ನಿಮಗೆ ನಗು ತಡಿಯೋಕೆ ಆಗಲ್ಲ. 

ಇದನ್ನೂ ಓದಿ : Viral Video : ಅಡುಗೆ ಮನೆಯ ಸಿಲೆಂಡರ್‌ ಬಳಿಯಿತ್ತು ದೈತ್ಯ ಕಾಳಿಂಗ ಸರ್ಪ!

 

ವಾಸ್ತವವಾಗಿ, ಘಟನೆಯ ವಿಡಿಯೋವನ್ನು ಆಡಳಿತ ಸೇವೆಯ ಅಧಿಕಾರಿಯೊಬ್ಬರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಖಂಡಿತವಾಗಿಯೂ ಕರ್ಮಕ್ಕೆ ತಕ್ಕ ಫಲವೇ ಸಿಗುತ್ತದೆ ಎಂಬುದಕ್ಕೆ ಈ ದೃಶ್ಯವೇ ಸಾಕ್ಷಿ ಎಂಬಂತಿದೆ. ಶೀರ್ಷಿಕೆಯಲ್ಲಿ ಸಹ ಇದನ್ನೇ ಬರೆಯಲಾಗಿದೆ. 

 

 

ಫುಟ್‌ಪಾತ್‌ನಲ್ಲಿ ಒಂದೆರಡು ಎಮ್ಮೆಗಳು ತಮ್ಮಪಾಡಿಗೆ ತಾವು ನಿಂತಿವೆ. ಈ ವೇಳೆ ರಸ್ತೆಯ ಮೇಲೆ ಇಬ್ಬರು ಯುವಕರು ಬೈಕ್‌ ಮೇಲೆ ಹೋಗುತ್ತಿರುತ್ತಾರೆ. ಅಷ್ಟರಲ್ಲಿ ಆತನಿಗೆ ದಾರಿಯಲ್ಲಿ ಎಮ್ಮೆ ಕಾಣಿಸುತ್ತದೆ. ಆಗ ಹಿಂಬದಿ ಸವಾರ ಸುಮ್ನಿರದೇ, ಪಕ್ಕದಲ್ಲಿ ನಿಂತಿದ್ದ ಎಮ್ಮೆಯೊಂದಕ್ಕೆ ಒದೆಯಲು ಹೋಗುತ್ತಾನೆ. ಹಿಂದಿನ ಸೀಟಿನಲ್ಲಿ ಕುಳಿತ ಯುವಕ ತನ್ನ ಒಂದು ಕಾಲನ್ನು ಮೇಲೆತ್ತಿ ಎಮ್ಮೆಯನ್ನು ಕೀಟಲೆ ಮಾಡುವ ರೀತಿಯಲ್ಲಿ ಮುಟ್ಟುತ್ತಾನೆ. ಇದರಿಂದ ಬೈಕ್‌ ಹೊಡೆಯುತ್ತಿದ್ದ ಯುವಕ ಬ್ಯಾಲೆನ್ಸ್ ತಪ್ಪಿ ಯುವಕರಿಬ್ಬರೂ ಬೀಳುತ್ತಾರೆ.

ಇದನ್ನೂ ಓದಿ : Trending Video : ದೈತ್ಯ ಹೆಬ್ಬಾವುಗಳನ್ನು ಹೆಗಲ ಮೇಲೆ ಹೊತ್ತು ಡ್ಯಾನ್ಸ್‌! ವಿಡಿಯೋ ವೈರಲ್

ಹಿಂದಿನ ಹುಡುಗ ಮಾಡಿದ ತಪ್ಪಿಗೆ ಇಬ್ಬರೂ ಬೀಳುತ್ತಿವ ದೃಶ್ಯ ವಿಡಿಯೋದಲ್ಲಿ ಕಂಡು ಬರುತ್ತದೆ. ಹಿಂದಿದ್ದ ಯುವಕ ಎಮ್ಮೆಯನ್ನು ಕಾಲಿನಿಂದ ಒದ್ದ ತಕ್ಷಣ ಇಬ್ಬರೂ ಕ್ಷಣಾರ್ಧದಲ್ಲಿ ಬೀಳುತ್ತಾರೆ. ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋ ಸಖತ್‌ ವೈರಲ್‌ ಆಗುತ್ತಿದೆ. ಕರ್ಮ ರಿಟರ್ನ್ಸ್‌ ಅಂದ್ರೆ ಇದೇ ಅಲ್ವೆ ಎಂದು ಅನೇಕರು ಕಾಮೆಂಟ್‌ ಮಾಡುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News