Viral video Rat : ಇತ್ತೀಚಿನ ದಿನಗಳಲ್ಲಿ ಎಲ್ಲಿ ಏನೇ ಘಟನೆ ಘಟಿಸಿದರೂ ಅದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ರಾರಾಜಿಸಿ ಬಿಡುತ್ತದೆ. ಅದೆಂಥಾ ದೊಡ್ಡ ಸಮಸ್ಯೆಯಲ್ಲಿ ಜನ ಸಿಕ್ಕಿ ಬಿದ್ದಾದಲೂ ನೆರೆದಿದ್ದ ಜನ ವಿಡಿಯೋ ಮಾಡುವುದರಲ್ಲಿ ನಿರತರಾಗುತ್ತಾರೆಯೇ ಹೊರತು ಸಹಾಯಕ್ಕೆ ಧಾವಿಸುವುದಿಲ್ಲ. ಜಗಳವಾಗುತ್ತಿದ್ದರೆ ವಿಡಿಯೋ, ಪ್ರೇಮಿಗಳ ಏಕಾಂತದಲ್ಲೂ ವಿಡಿಯೋ ಯಾರೋ ಎಲ್ಲಿಯೋ ಕುಳಿತು ತನ್ನ ಪಾಡಿಗೆ ಊಟ ಮಾಡುತ್ತಿದ್ದರೂ ವಿಡಿಯೋ, ಕುಳಿತರೂ ವಿಡಿಯೋ ನಿಂತರೂ ವಿಡಿಯೋ. ಹೀಗೆ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿ ಬಿಡುವುದೆಂದರೆ ಕೆಲವರಿಗೆ ಎಲ್ಲಿಲ್ಲದ ಆಸಕ್ತಿ .
ಇನ್ನು ಪ್ರಾಣಿ ಪಕ್ಷಿಗಳ ವಿಡಿಯೋಗಳನ್ನು ಕೂಡಾ ಸಾಮಾಜಿಕ ಮಾಧ್ಯಮದಲ್ಲಿ ನೋಡಬಹುದು. ಪ್ರಾಣಿಗಳ ವಿಡಿಯೋಗಳನ್ನು ಇಷ್ಟಪಡುವವರು ಕೂಡಾ ಬಹಳಷ್ಟು ಮಂದಿ ಇದ್ದಾರೆ. ಪ್ರಾಣಿಗಳ ವಿಡಿಯೋ ನೋಡಲು ಮುದ್ದಾಗಿರುತ್ತದೆ. ಕೆಲವು ಪ್ರಾಣಿಗಳು ಏನು ಮಾಡಿದರೂ ಮಜಾವಾಗಿ ಕಾಣಿಸುತ್ತದೆ. ಇದೀಗ ವೈರಲ್ ಆಗಿರುವ ಇಲಿರಾಯನ ವಿಡಿಯೋದಂತೆ.
ಇದನ್ನೂ ಓದಿ : Viral Video: ಅತ್ತಿಗೆಯ ಕೈ ಹಿಡಿದು ಡ್ಯಾನ್ಸ್ ಮಾಡಿದ ಮೈದುನ, ಮುಂದೇನಾಯ್ತು ಗೊತ್ತಾ?
ಇಲ್ಲೊಂದು ಇಲಿ ಅದೇನು ಮಾಡುತ್ತಿದೆಯೋ ದೇವರಿಗೆ ಗೊತ್ತು. ಕೀ ಕೊಟ್ಟ ಗೊಂಬೆಯ ರೀತಿ ಒಂದೇ ಸಮನೆ ಎರಡು ಕೈಗಳನ್ನು ಎತ್ತಿಕೊಂಡು ಆಟ ಆಡುವಂತೆ ಕಾಣಿಸುತ್ತಿದೆ. ಸುತ್ತ ಮುತ್ತ ಬಹಳಷ್ಟು ಜನ ನೆರೆದಿದ್ದರೂ ಈ ಇಲಿಗೆ ಮಾತ್ರ ಅದ್ಯಾವುದರ ಪರಿವೇ ಇದ್ದಂತಿಲ್ಲ. ಯಾವ ಶಬ್ದಕ್ಕೂ ಹೆದರುತ್ತಿಲ್ಲ. ತನ್ನ ಪಾಡಿಗೆ ಎರಡೂ ಕೈಗಳನ್ನು ಜೋಡಿಸಿ ಗಿರಗಿರನೆ ಸುತ್ತುತ್ತಿದೆ.
यह किसी को भी सुनने में अजीब लग सकता है …लेकिन मथुरा पुलिस ने कोर्ट में एक रिपोर्ट सौंपी है ,इस रिपोर्ट में कहा गया है ..कि चुहे 581 किलो गाँजा पी गए ..शायद उसी का असर है मुसकराज पर …😀@dgpup @CMOfficeUP pic.twitter.com/Cv7xkejNG4
— Arvind Chaturvedi .. (@AChaturvediUp) November 24, 2022
ಇದನ್ನೂ ಓದಿ : Viral Video: ಚಾಮರಾಜನಗರದ ಜಮೀನಿನಲ್ಲಿ ಜೋಡಿ ಹುಲಿ ಪ್ರತ್ಯಕ್ಷ- ಆತಂಕದಲ್ಲಿ ಗ್ರಾಮಸ್ಥರು
ಅರವಿಂದ ಚತುರ್ವೇದಿ ಎನ್ನುವವರು ಈ ಇಲಿಯ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಂದ ಹಾಗೆ ಇತ್ತೀಚೆಗಷ್ಟೇ ಇಲಿಯೊಂದು 581 ಕೆಜಿ ಗಾಂಜಾ ಕುಡಿದಿರುವ ಬಗ್ಗೆ ಮಥುರಾ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಈ ವಿಡಿಯೋವನ್ನು ನೋಡುತ್ತಿದ್ದರೆ ಇದು ಗಾಂಜಾ ನಶೆಯೇ ಇರಬೇಕು ಎಂದು ಅವರು ಬರೆದುಕೊಂಡಿದ್ದಾರೆ.
ನಶೆ ಏರಿಸಿಕೊಂಡರೆ ಮನುಷ್ಯ ಹೇಗೆ ತನ್ನ ಸ್ಥಿಮಿತ ಕಳೆದುಕೊಳ್ಳುತ್ತಾನೆಯೋ, ಈ ಇಲಿ ಕೂಡಾ ಅದೇ ರೀತಿ ತನ್ನ ಸ್ಥಿಮಿತ ಕಳೆದುಕೊಂಡಿರುವಂತೆ ಕಾಣುತ್ತಿದೆ.
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆಕ್ಲಿಕ್ ಮಾಡಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...