39 ವರ್ಷಗಳ ನಂತರ ಅಮೇಥಿಯಲ್ಲಿ `ಕಮಲ` ಅರಳಿಸಿದ ಸ್ಮೃತಿ ಇರಾನಿ, ರಾಹುಲ್ ಸೋಲಿಗೆ ಇದು ಪ್ರಮುಖ ಕಾರಣ!
ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು, 39 ವರ್ಷಗಳ ಬಳಿಕ ಅಮೇಥಿ ಜನತೆ ಗಾಂಧಿ ಕುಟುಂಬಕ್ಕೆ ಸೋಲಿನ ಕಹಿ ಉಣಿಸಿದ್ದಾರೆ. ಆದರೆ ಸತತ 39 ವರ್ಷಗಳ ಕಾಲ ಕಾಂಗ್ರೆಸ್ ಗೆ ಆಶೀರ್ವದಿಸಿದ್ದ ಅಮೇಥಿ ಜನತೆ ರಾಹುಲ್ ಗಾಂಧಿ ಕೈ ಹಿಡಿಯದೇ ಇರಲು ಕಾರಣ ಏನು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.
ಅಮೇಥಿ: ಈ ಬಾರಿಯ ಲೋಕಸಭಾ ಚುನಾವಣಾ ಫಲಿತಾಂಶ ಗುರುವಾರ ಹೊರಬಿದ್ದಿದ್ದು, 39 ವರ್ಷಗಳ ಬಳಿಕ ಅಮೇಥಿ ಜನತೆ ಗಾಂಧಿ ಕುಟುಂಬಕ್ಕೆ ಸೋಲಿನ ಕಹಿ ಉಣಿಸಿದ್ದಾರೆ. ಅಮೇಥಿಗೂ ಗಾಂಧಿ ಕುಟುಂಬಕ್ಕೂ ನಡುವೆ ಭಾವನಾತ್ಮಕ ಸಂಬಂಧವಾಗಿತ್ತು. ಆದರೆ ಸತತ 39 ವರ್ಷಗಳ ಕಾಲ ಕಾಂಗ್ರೆಸ್ ಗೆ ಆಶೀರ್ವದಿಸಿದ್ದ ಅಮೇಥಿ ಜನತೆ ಸ್ಮೃತಿ ಇರಾನಿ ಅವರನ್ನು ಗೆಲ್ಲಿಸಿ, ರಾಹುಲ್ ಗಾಂಧಿ ಕೈ ಬಿಟ್ಟಿದ್ದಾರೆ. ಉತ್ತರಪ್ರದೇಶದ ಪ್ರತಿಷ್ಠಿತ ಅಮೇಥಿ ಸ್ಥಾನದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ವಿರುದ್ಧ ಸ್ಪಧಿಸಿದ್ದ ಬಿಜೆಪಿ ಅಭ್ಯರ್ಥಿ ಸ್ಮೃತಿ ಇರಾನಿ 55,120 ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ. 39 ವರ್ಷಗಳಿಂದ ಕಾಂಗ್ರೆಸ್ ಭದ್ರಕೋಟೆ ಎನಿಸಿದ್ದ ಅಮೇಥಿಯಲ್ಲಿ ರಾಹುಲ್ ಗಾಂಧಿಯವರ ಈ ಸೋಲಿಗೆ ಕಾರಣ ಏನು ಎಂಬುದು ಇದೀಗ ದೊಡ್ಡ ಪ್ರಶ್ನೆಯಾಗಿದೆ.
ಸ್ಮೃತಿ ಇರಾನಿ 468514 ಮತಗಳನ್ನು ಪಡೆದರೆ, ಪ್ರತಿಸ್ಪರ್ಧಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ 413394 ಮತಗಳನ್ನು ಪಡೆದರು. ಜಿಲ್ಲೆಯ ಜಿಲ್ಲಾಧಿಕಾರಿ-ಜಿಲ್ಲಾ ಚುನಾವಣಾಧಿಕಾರಿ ರಾಮ್ ಮನೋಹರ್ ಮಿಶ್ರಾ ಅವರು ಕ್ಷೇತ್ರದಲ್ಲಿ ಸ್ಮೃತಿ ಇರಾನಿ ಗೆಲುವನ್ನು ಘೋಷಿಸಿದರು. ಗೆಲುವಿನ ಬಳಿಕ ಮಾತನಾಡಿದ ಸ್ಮೃತಿ ಇರಾನಿ, " ಗೆಲುವಿನ ಬಳಿಕ ಮಾತನಾಡಿದ್ದ "ರಾಹುಲ್ ಜಿ ಅವರು ಪ್ರಧಾನಿ ಮೋದಿಯ ನಾಯಕತ್ವವನ್ನು ನಂಬಿದ್ದಾರೆ ಎಂದು ನಾನು ಖುಷಿಯಿಂದಿದ್ದೇನೆ, ಅಮೇಥಿಯವರು ಮತದಾನದ ಮೂಲಕ ನಮ್ಮಲ್ಲಿ ತಮ್ಮ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2014ರಲ್ಲಿ ಅಮೇಥಿಯಲ್ಲಿನ ನನ್ನ ಸೋಲಿನ ನಂತರವೂ, ಕಳೆದ ಐದು ವರ್ಷಗಳಿಂದ ನಾನು ಅಮೇಥಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಮತ್ತು ಮುಂದೆಯೂ ನನ್ನ ಕೆಲಸ ಮುಂದುವರೆಸುತ್ತೇನೆ" ಎಂದು ಅವರು ಹೇಳಿದರು.
ಅಮೇಥಿ ಜನತೆ ಈ ಬಾರಿ ರಾಹುಲ್ ಗೆ ಮತ ಹಾಕದಿರಲು ಕಾರಣ ಏನು?
ಜಗದೀಶಪುರ್ ನಿವಾಸಿ ಬೆಚೂ ಖಾನ್ ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡುತ್ತಾ, "ಅಮೇಥಿಯಲ್ಲಿ ಒಂದು ತಲೆಮಾರಿನ ಬದಲಾವಣೆಯು ಹೊಸ ಪೀಳಿಗೆಯವರ ಭಾವನೆಗಳಿಗೆ ಕಡಿಮೆ ಪ್ರಾಮುಖ್ಯತೆ ನೀಡುತ್ತಾರೆ ಎಂದು ಅವರ ಭವಿಷ್ಯದ ಬಗ್ಗೆ ಒಂದು ರೀತಿಯ ಆತಂಕವಿದೆ. ಇದು ಸ್ಮೃತಿ ಇರಾನಿ ಮತ್ತು ಬಿಜೆಪಿಯನ್ನು ಕಂಡಿದೆ. ಈ ಹೊಸ ಪೀಳಿಗೆಯವರು ಸ್ಥಳೀಯ ಜನರೊಂದಿಗೆ ರಾಜೀವ್ ಗಾಂಧಿಯವರ ಸಂಬಂಧವನ್ನು ನೋಡಿಲ್ಲ ಮತ್ತು ಸಂಜಯ್ ಗಾಂಧಿಯವರು ಅಮೇಥಿಯನ್ನು ಹೇಗೆ ಮುಖ್ಯವಾಗಿ ಮಾಡಿದ್ದಾರೆಂಬುದನ್ನು ಅವರು ನೋಡಿಲ್ಲ, ಆದ್ದರಿಂದ ಅವರು ಗಾಂಧಿ ಕುಟುಂಬದೊಂದಿಗೆ ಯಾವುದೇ ಭಾವನಾತ್ಮಕ ಸಂಬಂಧವನ್ನೂ ಹೊಂದಿಲ್ಲ" ಎಂದು ಹೇಳಿದ್ದಾರೆ.
ಇರಾನಿ ಬಗ್ಗೆ ಭರವಸೆ ವ್ಯಕ್ತಪಡಿಸಿದ ಯುವ ಮತದಾರರು:
ಸ್ಮೃತಿ ಇರಾನಿಯನ್ನು ಆಯ್ಕೆಮಾಡುವಲ್ಲಿ ಯುವ ಮತದಾರರು ಪ್ರಮುಖ ಪಾತ್ರವಹಿಸಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಮುಸಾಫಿರ್ಖಾನಾದ ಕಾಂಗ್ರೆಸ್ ಕಾರ್ಯಕರ್ತ ರಾಮ್ ಸೇವಾಕ್ ಅವರು "ಇರಾನಿ ಅವರಲ್ಲಿಗೆ ಬಂದರು, ವಿದ್ಯಾರ್ಥಿವೇತನ, ಕೆಲಸ ಇತ್ಯಾದಿಗಳನ್ನು ಪಡೆಯಲು ಸಹಾಯ ಮಾಡಿದರು. ಯುವಜನರಿಗೆ ಭವಿಷ್ಯದ ಹೊಸ ಭರವಸೆ ತೋರಿಸಿದರು" ಎಂದು ಹೇಳಿದರೆ, ಸ್ಮೃತಿ ಇರಾನಿ ಮತ್ತು ಜನರ ನಡುವೆ ಸೇತುವೆಯೊಂದು ನಿರ್ಮಾಣಗೊಂಡಿದೆ. ಈ ಬಾರಿ ಅಮೇಥಿ ಜನತೆ ತನ್ನ ಹಿತಕ್ಕಾಗಿ ಮತ ಹಾಕಿದ್ದಾರೆ" ಸ್ಥಳೀಯ ಬಿಜೆಪಿ ನಾಯಕರು ತಿಳಿಸಿದ್ದಾರೆ.
ಇದಲ್ಲದೆ, 2014 ರಲ್ಲಿ, ಅಮೇಥಿಯಲ್ಲಿ ಸ್ಮೃತಿ ಇರಾನಿ ಒಂದು ಲಕ್ಷಕ್ಕೂ ಹೆಚ್ಚಿನ ಮತಗಳ ಅಂತರದಿಂದ ಸೋಲು ಅನುಭವಿಸಿದರೂ, ಅವರು ತಮ್ಮ ಕೆಲಸ ಮುಂದುವರೆಸಿದರು. ಆಗಾಗ್ಗೆ ಕ್ಷೇತ್ರಕ್ಕೆ ಭೇಟಿ ನೀಡುವುದು ಮತ್ತು ರಾಹುಲ್ ಗಾಂಧಿಯವರ ಅನುಪಸ್ಥಿತಿಯನ್ನು ಕಡೆಗಣಿಸುವುಡು. ಅಮೇಥಿ ಜನತೆಗೆ ದೆಹಲಿಯಲ್ಲಿ ಸುಲಭವಾಗಿ ಸ್ಮೃತಿ ಅವರನ್ನು ತಲುಪಲು ಅವಕಾಶ ನೀಡಲಾಗಿತ್ತು. ಇದೆಲ್ಲವೂ ಕೂಡ ಸ್ಮೃತಿ ಇರಾನಿ ಅವರ ಗೆಲುವಿಗೆ ಕಾರಣವಾಗಿದೆ.