ಪಾಲ್ಘರ್: ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ ಭೂಕಂಪ ಸಂಭವಿಸಿದೆ. ಬೆಳಗ್ಗೆ 5: 22 ರ ಸುಮಾರಿಗೆ ರಿಕ್ಟರ್ ಮಾಪಕದಲ್ಲಿ 4.8 ತೀವ್ರತೆಯ ಭೂಕಂಪ ದಾಖಲಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ. ಘಟನೆಯಲ್ಲಿ ಯಾವುದೇ ಸಾವು ನೋವು ಅಥವಾ ಆಸ್ತಿಗೆ ಹಾನಿಯಾಗಿಲ್ಲ ಎಂದು ಉಲ್ಲೇಖಿಸಲಾಗಿದೆ.


COMMERCIAL BREAK
SCROLL TO CONTINUE READING

ಇದಕ್ಕೂ ಮುನ್ನ ನವೆಂಬರ್ 20 ರಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ದಹನು ತಾಲ್ಲೂಕಿನ ಧುಂಡಲ್‌ವಾಡಿ ಗ್ರಾಮದಲ್ಲಿ 3.5 ತೀವ್ರತೆಯ ಭೂಕಂಪ(Earthquake) ದಾಖಲಾಗಿದೆ ಎಂದು ಥಾಣೆ ಮುನ್ಸಿಪಲ್ ಕಾರ್ಪೊರೇಶನ್‌ನ (ಟಿಎಂಸಿ) ಪ್ರಾದೇಶಿಕ ವಿಪತ್ತು ನಿರ್ವಹಣಾ ಕೋಶ (ಆರ್‌ಡಿಎಂಸಿ) ಮುಖ್ಯಸ್ಥ ಸಂತೋಷ್ ಕದಮ್ ಹೇಳಿದ್ದಾರೆ.


ಪಹಲ್ಗರ್‌ನ ಧುಂಡಲ್‌ವಾಡಿ 2018 ರ ನವೆಂಬರ್‌ನಿಂದ ಪದೇ ಪದೇ ಈ ರೀತಿಯ ಭೂಕಂಪದ ಅನುಭವವಾಗುತ್ತಿದೆ ಎಂದು ಹೇಳಲಾಗಿದೆ. ಅವುಗಳಲ್ಲಿ ಹೆಚ್ಚಿನವು ದುಧಲ್ವಾಡಿ ಗ್ರಾಮವನ್ನು ಕೇಂದ್ರೀಕರಿಸಿದೆ.


ಭೂಕಂಪದ ಸಂದರ್ಭದಲ್ಲಿ ಏನು ಮಾಡಬೇಕು?
ಭೂಕಂಪದಂತಹ ನೈಸರ್ಗಿಕ ವಿಪತ್ತಿನಿಂದ ತಪ್ಪಿಸಿಕೊಳ್ಳುವುದು ಕಷ್ಟ ಮತ್ತು ಅದನ್ನು ತಪ್ಪಿಸಲು ಸಾಧ್ಯವಿಲ್ಲ. ಆದರೆ ಕೆಲವು ತಾರ್ಕಿಕ ಕ್ರಿಯೆಗಳನ್ನು ಬಳಸಿಕೊಂಡು ಈ ಸ್ವಾಭಾವಿಕ ಹಾನಿಗಳ ಸಮಯದಲ್ಲಿ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬಹುದು.


- ಭೂಕಂಪದ ಸಮಯದಲ್ಲಿ ಎಲಿವೇಟರ್ ಅನ್ನು ಬಳಸಬಾರದು.
- ಹೊರಗೆ ಹೋಗಲು ಎಲಿವೇಟರ್ ಬದಲಿಗೆ ಮೆಟ್ಟಿಲುಗಳನ್ನು ಬಳಸಿ.
- ನೀವು ಎಲ್ಲೋ ಸಿಕ್ಕಿಹಾಕಿಕೊಂಡಿದ್ದರೆ ಓಡುವುದು ಸೂಕ್ತವಲ್ಲ. ಭೂಕಂಪದಿಂದಾಗಿ ಇದು ಬಹಳಷ್ಟು ಪ್ರಭಾವ ಬೀರುತ್ತದೆ.
- ನೀವು ಕಾರು ಅಥವಾ ಯಾವುದೇ ವಾಹನವನ್ನು ಚಾಲನೆ ಮಾಡುತ್ತಿದ್ದರೆ, ಅದನ್ನು ತಕ್ಷಣ ನಿಲ್ಲಿಸಿ.
- ನೀವು ಚಾಲನೆ ಮಾಡುತ್ತಿದ್ದರೆ, ಕಟ್ಟಡ, ಸ್ತಂಭಗಳು, ಫ್ಲೈಓವರ್, ರಸ್ತೆ ಸೇತುವೆಯಿಂದ ದೂರ ಸಾಗಿ ಬಳಿಕ ವಾಹನವನ್ನು ನಿಲ್ಲಿಸಿ.
- ಭೂಕಂಪದ ಅನುಭವವಾದ ತಕ್ಷಣವೇ ಸುರಕ್ಷಿತ ಮತ್ತು ತೆರೆದ ಮೈದಾನದ ಬಳಿ ಸೇರಲು ಪ್ರಯತ್ನಿಸಿ. 
- ದೊಡ್ಡ ಕಟ್ಟಡಗಳು, ಮರಗಳು, ವಿದ್ಯುತ್ ಸ್ತಂಭಗಳಿಂದ ದೂರವಿರಿ.