PM Modi statement on missile attack on Gaza hospital: ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧದ ನಡುವೆ, ಮಂಗಳವಾರ ರಾತ್ರಿ ಗಾಜಾದ ಆಸ್ಪತ್ರೆಯ ಮೇಲೆ ರಾಕೆಟ್ ದಾಳಿ ನಡೆದಿದ್ದು, 500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ. ಈ ದಾಳಿಗೆ ಸಂಬಂಧಿಸಿದಂತೆ ಎರಡೂ ಕಡೆಯಿಂದ ಆರೋಪ, ಪ್ರತ್ಯಾರೋಪಗಳು ನಡೆಯುತ್ತಿವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಈ ಭಾಗಗಳಲ್ಲಿ 2 ದಿನ ಗುಡುಗು-ಮಿಂಚು ಸಹಿತ ಕುಂಭದ್ರೋಣ ಮಳೆ ಭೀತಿ


ಈ ದಾಳಿಗೆ ಇಸ್ರೇಲ್ ಹಮಾಸ್ ಅನ್ನು ದೂಷಿಸಿದೆ. ಆದರೆ ಹಮಾಸ್ ಮತ್ತು ಪ್ಯಾಲೆಸ್ಟೀನಿಯಾದವರು ಇಸ್ರೇಲ್ ಅನ್ನು ದೂಷಿಸುತ್ತಿದ್ದಾರೆ. ಇದೇ ವಿಷಯದ ಸಂಬಂಧ ಪ್ರಪಂಚದಾದ್ಯಂತದ ನಾಯಕರು ಈ ದಾಳಿಯನ್ನು ಟೀಕಿಸುತ್ತಿದ್ದಾರೆ. ಈ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಅವರು ಗಾಜಾ ಆಸ್ಪತ್ರೆಯಲ್ಲಿ ಸಾವನ್ನಪ್ಪಿದವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.


ಇದನ್ನೂ ಓದಿ: ಬಾಂಗ್ಲಾ ಪಂದ್ಯಕ್ಕೆ ಭಾರತದ ಪ್ಲೇಯಿಂಗ್ 11 ಪ್ರಕಟಿಸಿದ ಕೋಚ್- ಈ ಮೂವರು ಆಟಗಾರರಿಗಿಲ್ಲ ಅವಕಾಶ


“ಗಾಜಾದ ಅಲ್ ಅಹ್ಲಿ ಆಸ್ಪತ್ರೆಯಲ್ಲಿ ನಡೆದ ದುರಂತದಿಂದ ನಾನು ತೀವ್ರ ಆಘಾತಕ್ಕೊಳಗಾಗಿದ್ದೇನೆ. ಸಂತ್ರಸ್ತರ ಕುಟುಂಬಗಳಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಶೀಘ್ರ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇವೆ. ಈ ಘರ್ಷಣೆಯಲ್ಲಿ ಜೀವ ಮತ್ತು ಆಸ್ತಿ ನಷ್ಟವು ಗಂಭೀರ ಮತ್ತು ನಿರಂತರ ಕಳವಳಕಾರಿ ವಿಷಯವಾಗಿದೆ. ಇದರಲ್ಲಿ ಭಾಗಿಯಾದವರು ಹೊಣೆ ಹೊರಬೇಕು” ಎಂದು ಪ್ರಧಾನಿ ಮೋದಿ ದಾಳಿಯನ್ನು ಖಂಡಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್