ನವದೆಹಲಿ : ಬಾಲಕಿಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಆರು ವರ್ಷದ ಪುಟ್ಟ ಬಾಲಕಿ ಮೋದಿ (PM Modi) ಅವರಿಗೆ ದೂರು ನೀಡುತ್ತಿದ್ದಾಳೆ. ಹೌದು, ಸಣ್ಣ ಮಕ್ಕಳಿಗೆ ಯಾಕೆ ಇಷ್ಟೊಂದು ಹೋಂ ವರ್ಕ್ (Home work) ಎನ್ನುವುದು ಬಾಲಕಿ ಅಳಲು. ಕಾಶ್ಮೀರ ನಿವಾಸಿಯಾಗಿರುವ ಮಗು, ಆನ್ ಲೈನ್ ಕ್ಲಾಸ್ ಮತ್ತು ಕ್ಲಾಸ್ ನಲ್ಲಿ ನೀಡುತ್ತಿರುವ ಹೋಂವರ್ಕ್ ಬಗ್ಗೆ ಬೇಸತ್ತಿರುವಂತೆ ಕಾಣುತ್ತಿದೆ.


COMMERCIAL BREAK
SCROLL TO CONTINUE READING

ಸುದೀರ್ಘ ಆನ್ ಲೈನ್ ತರಗತಿ ಬಗ್ಗೆ ಬೇಸರ :
ಈ ವಿಡಿಯೋದಲ್ಲಿ ಬಾಲಕಿ, ನನಗೆ ಆರು ವರ್ಷ. 6 ವರ್ಷದ ಮಕ್ಕಳಿಗೆ ಯಾಕೆ ಇಷ್ಟೋಂದು ಕೆಲಸ ನೀಡುವುದು. ಮೊದಲು ಇಂಗ್ಲೀಷ್, ಗಣಿತ, ಉರ್ದು, ಇತಿಹಾಸ ನಂತರ ಕಂಪ್ಯೂಟರ್ ಕ್ಲಾಸ್ ಇರುತ್ತದೆ. ನನಗೆ ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕ್ಲಾಸ್ ನಲ್ಲಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. 


Weather Update: ಉತ್ತರ ಭಾರತದಲ್ಲಿ ಗುಡುಗು ಸಹಿತ ಭಾರಿ ಮಳೆ, ದೆಹಲಿಯಲ್ಲಿ ಭೂಕಂಪ


ವೈರಲ್ ಆಗುತ್ತಿದೆ ವೀಡಿಯೊ :
ಚಿಕ್ಕ ಮಕ್ಕಳ ಮೇಲೆ ಯಾಕೆ ಇಷ್ಟು ಹೊರೆ ಎನ್ನುವುದು ಬಾಲಕಿಯ ದೂರು. ವಿಡಿಯೋದ ಕೊನೆಯಲ್ಲಿ ಕೂಡಾ ಬಾಲಕಿ, ಅವರು ಪ್ರಧಾನಿ (PM Modi) ಅವರನ್ನು ಮೋದಿ ಸಾಹೇಬ್ ಎಂದು ಸಂಬೋಧಿಸಿದ್ದಾಳೆ.  ಈ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ (Social media) ವೈರಲ್ ಆಗುತ್ತಿದೆ. ಕರೋನಾ ಹಿನ್ನೆಲೆಯಲ್ಲಿ ಶಾಲೆಗಳನ್ನು ಮುಚ್ಚಲಾಗಿದೆ. ಬದಲಾಗಿ ಆನ್ ಲೈನ್ ಕ್ಲಾಸ್ ಗಳನ್ನು (online class) ನಡೆಸಲಾಗುತ್ತಿದೆ. ಆನ್ ಲೈನ್ ಕ್ಲಾಸ್ ನಲ್ಲಿ ಮೊಬೈಲ್ ಮತ್ತು ಲಾಪ್ ಟಾಪ್ ಮುಂದೆ ಕುಳಿತು ಮಕ್ಕಳು ಬೇಸರಗೊಂಡಿರುವುದು ಈ ಬಾಲಕಿಯ ಮಾತಿನಲ್ಲಿ ಸ್ಪಷ್ಟವಾಗುತ್ತಿದೆ. 


ತಕ್ಷಣ ಕ್ರಮಕೈಗೊಂಡ ರಾಜ್ಯಪಾಲ:
ವಿಡಿಯೋ ವೈರಲ್ (Viral video) ಆಗುತ್ತಿದ್ದಂತೆ, ಜಮ್ಮು ಮತ್ತು ಕಾಶ್ಮೀರ ರಾಜ್ಯಪಾಲ ಮನೋಜ್ ಸಿನ್ಹಾ (Manoj Sinha) ಈ ಬಗ್ಗೆ ಕ್ರಮ ಕೈಗೊಂಡಿದ್ದಾರೆ. ಶಾಲಾ ಮಕ್ಕಳ ಮೇಲೆ ಹೋಮವರ್ಕ್ ಹೊರೆ ಕಡಿಮೆ ಮಾಡಲು, 48 ಗಂಟೆಗಳ ಒಳಗೆ ನೀತಿ ರೂಪಿಸಲು ಶಾಲಾ ಶಿಕ್ಷಣ ಇಲಾಖೆಗೆ ನಿರ್ದೇಶನ ನೀಡಲಾಗಿದೆ ಎಂದು ಹೇಳಿದ್ದಾರೆ. ಬಾಲ್ಯದ ಮುಗ್ಧತೆ ದೇವರ ಕೊಡುಗೆಯಾಗಿದೆ, ಬಾಲ್ಯ ಯಾವತ್ತೂ ಸಂತೊಷದಿಂದ ತುಂಬಿರುವಂತಿರಬೇಕು ಎಂದು ಹೇಳಿದ್ದಾರೆ.  


ಇದನ್ನೂ ಓದಿ : Coronavirus ಮೂರನೇ ಅಲೆ ಸಾಧ್ಯತೆ ಹೇಗೆ ಕಡಿಮೆಯಾಗಲಿದೆ? ಮುಖ್ಯ ಆರ್ಥಿಕ ಸಲಹೆಗಾರ ಹೇಳಿದ್ದೇನು?


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ