ನವದೆಹಲಿ: Balarampur Viral Video - ಉತ್ತರ ಪ್ರದೇಶದ ಬಲರಾಮ್ ಪುರ್ ಜಿಲ್ಲೆಯಲ್ಲಿ ಮಾನವೀಯತೆಗೆ ಕಳಂಕ ತರುವ ದೃಶ್ಯ ಹೊರಹೊಮ್ಮಿದೆ. ಇಲ್ಲಿ ಕೊರೊನಾ ಸೋಂಕಿತ ತನ್ನ ಚಿಕ್ಕಪ್ಪನ ಶವವನ್ನು ಆತನ ಸಹೋದರ ಮಗ ಮತ್ತೋರ್ವ ವ್ಯಕ್ತಿಯ ಸಹಾಯದಿಂದ ಶನಿವಾರ ಮದ್ಯಾಹ್ನ ರಾಪ್ತಿ ನದಿಗೆ ಎಸೆದಿದ್ದಾನೆ. ನದಿಯಲ್ಲಿ ಆತ ಶವ ಎಸೆಯುತ್ತಿರುವ ವಿಡಿಯೋ ಇದೀಗ ಭಾರಿ ವೈರಲ್ (Balarampur Viral Video) ಆಗಿದ್ದು, ಅಧಿಕಾರಿಗಳು ಪ್ರಕರಣದ ತನಿಖ್ಯೆ ಆರಂಭಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಅಲ್ಲಿನ ಎಲ್-ಟೂ ಆಸ್ಪತ್ರೆಯಲ್ಲಿ ದಾಖಲಾಗಿದ್ದ ವೃದ್ಧನೊಬ್ಬ ತಡ ಸಂಜೆ ಮೃತಪಟ್ಟಿದ್ದ. ಶನಿವಾರ ಮಧ್ಯಾಹ್ನ ಆತನ ಸಹೋದರ ಪುತ್ರನನ್ನು ಅಂತ್ಯ ಕ್ರಿಯೆಗೆ ಕರೆಯಿಸಲಾಗಿದೆ. CMO ಆಗ್ರಹದ ಮೇರೆಗೆ ಮೃತವ್ಯಕ್ತಿಯ ಸಹೋದರ ಮಗ ಹಾಗೂ ಮತ್ತೊಬ್ಬನ ಮೇಲೆ ಮಹಾಮಾರಿ ಕಾಯ್ದೆ ಹಾಗೂ ಇತರೆ ಸೆಕ್ಷನ್ ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆಯಲ್ಲಿ ತೊಡಗಿದ್ದಾರೆ.
ಬಲರಾಮ್ ಪುರ ನಿಂದ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ (Corona Positive Body In Rapti River) ಇಬ್ಬರು ವ್ಯಕ್ತಿಗಳು ರಾಪ್ತಿ ನದಿಯಲ್ಲಿ ಶವ ಎಸೆಯುತ್ತಿರುವುದು ಕಂಡುಬರುತ್ತಿದೆ. ಇವರಲ್ಲಿ ಓರ್ವ ವ್ಯಕ್ತಿ PPE ಕಿಟ್ ಧರಿಸಿದ್ದಾನೆ. ಅಖಿಲ್ ಭಾರತೀಯ ವಿದ್ಯಾರ್ಥಿ ಪರಿಷತ್ ನ ಪ್ರಾಂತ ಸಹ ಮಂತ್ರಿ ಅಭಿಷೇಕ್ ಸಿಂಗ್ ಈ ವೈರಲ್ ವಿಡಿಯೋವನ್ನು (Viral Video) ಅಧಿಕಾರಿಗಳಿಗೆ ಟ್ವೀಟ್ ಮಾಡಿದ್ದಾರೆ. ಬಳಿಕ CMO ಡಾ. ವಿಜಯ್ ಬಹದೂರ್ ಪ್ರಕರಣದ ತನಿಖೆ ಆರಂಭಿಸಲು ಸೂಚಿಸಿದ್ದಾರೆ. ತನಿಖೆಯಲ್ಲಿ ಶುಕ್ರವಾರ ಸಂಜೆ ಎಲ್-ಟೂ ಆಪ್ಸತ್ರೆಯಲ್ಲಿ ದಾಖಲಾಗಿದ್ದ ಮನಕೌರಾ ಕಾಶಿರಾಂ ಗ್ರಾಮದ ನಿವಾಸಿಯಾಗಿರುವ 68 ವರ್ಷದ ಕೋರೋನಾ (Corona Updates) ಸೋಂಕಿತ ಪ್ರೇಮನಾಥ್ ಮಿಶ್ರಾ ಮೃತಪಟ್ಟಿದ್ದರು. ವ್ಯಕ್ತಿಯ ಕುಟುಂಬ ಸದಸ್ಯರಿಗೆ ಈ ಕುರಿತು ಸೂಚಿಸಲು ಪ್ರಯತ್ನಿಸಲಾಗಿದೆ. ಆದರೆ, ಫೋನ್ ಬಂದ್ ಇರುವ ಕಾರಣ ಸಂಪರ್ಕ ಸಾಧ್ಯವಾಗಿಲ್ಲ.
In UP's Balrampur district, video of body of man being thrown in the river from a bridge has surfaced. The body was of a man who succumbed to Covid on May 28. pic.twitter.com/DEAAbQzHsL
— Piyush Rai (@Benarasiyaa) May 30, 2021
ಇದನ್ನೂ ಓದಿ- ESIC: ಕೊರೊನಾದಿಂದ ಪ್ರಭಾವಿತಗೊಂಡ ಕುಟುಂಬಗಳಿಗೆ ಸಿಗಲಿದೆ ಈ ಪೆನ್ಶನ್ ಯೋಜನೆ ಲಾಭ
ಶನಿವಾರ ಮಧ್ಯಾಹ್ನ ವಿಷಯ ತಿಳಿದ ಮನಕೌರ್ ಕಾಶಿರಾಮ್ ಗ್ರಾಮದ ನಿವಾಸಿಯಾಗಿರುವ ಸಂಜಯ್ ಶುಕ್ಲಾ ಅವರು ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಸಂಜಯ್ ತನ್ನನ್ನು ತಾನು ಪ್ರೇಮನಾಥ್ ನ ಸಹೋದರ ಮಗ ಎಂದು ಹೇಳಿಕೊಂಡಿದ್ದಾನೆ. ಎಲ್-ಟೂ ನೋಡಲ್ ಅಧಿಕಾರಿ ಡಾ. ಎ. ಪಿ ಮಿಶ್ರಾ ಪ್ರಕಾರ, ಸಂಜಯ್ ಅವರನ್ನು ಬೌಧ ಪರಿಪಥ್ ನಲ್ಲಿರುವ ಘಾಟ್ ವರೆಗೆ ಶವವನ್ನು ಕೊಂಡೊಯ್ಯಲು ಅಂಬುಲೆನ್ಸ್ ಗಾಗಿ ಸಂಪರ್ಕಿಸಿದ್ದ ಎಂದಿದ್ದಾರೆ. ಬಳಿಕ ಕೆಲ ಜನರು ಸ್ಕಾರ್ಪಿಯೋ ವಾಹನದಲ್ಲಿ ಶವವನ್ನು ಕೊಂಡೊಯ್ಯಲು ಬಂದಿದ್ದರು. ಬಳಿಕ ಅಂಬುಲೆನ್ಸ್ ಚಾಲಕನಿಗೆ ಶವವನ್ನು ರಾಪ್ತಿ ನದಿಯವರೆಗೆ (Rapti River) ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗಿತ್ತು ಎಂದಿದ್ದಾರೆ.
ಇದನ್ನೂ ಓದಿ-ಕೇಂದ್ರ ಸರ್ಕಾರದ ಈ Digital India Challange ಗೆದ್ದು, 5 ಲಕ್ಷ ರೂ. ನಿಮ್ಮದಾಗಿಸಿಕೊಳ್ಳಿ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಮಾನ್ಕೌರ್ ಕಾಶಿರಾಮ್ ನಿವಾಸಿ ಸಂಜಯ್ ಶುಕ್ಲಾ ಹಾಗೂ ಇನ್ನೋರ್ವ ವ್ಯಕ್ತಿಯ ವಿರುದ್ಧ ಶನಿವಾರ ತಡ ರಾತ್ರಿ ಮಹಾಮಾರಿ ಕಾಯ್ದೆ ಹಾಗೂ ವಿಪತ್ತು ನಿರ್ವಹಣಾ ಕಾಯ್ದೆಯ ಅಡಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಸಲಾಗುತ್ತಿದೆ ಠಾಣೆಯ ಇನ್ಚಾರ್ಜ್ ಅಧಿಕಾರಿ ವಿದ್ಯಾಸಾಗರ್ ತ್ರಿಪಾಠಿ ಹೇಳಿದ್ದಾರೆ.
#Balrampur- पीपीई किट पहने दो युवकों द्वारा राप्ती नदी पुल से नदी में शव फेंकते वायरल वीडियो के सम्बंध में सीएमओ डॉ वीबी सिंह की बाईट @Uppolice @AdgGkr @dgpup @AwasthiAwanishK @CMOfficeUP @InfoDeptUP @myogiadityanath @bstvlive @IndiaToday @News18UP @htTweets @hemantkutiyal pic.twitter.com/ZXGyBnAstm
— BALRAMPUR POLICE (@balrampurpolice) May 30, 2021
ಇದನ್ನೂ ಓದಿ- Emergency Credit Line Guarantee ಯೋಜನೆಯ ವ್ಯಾಪ್ತಿ ವಿಸ್ತರಿಸಿದ ಕೇಂದ್ರ ಸರ್ಕಾರ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ