ಪೋರ್ನ್ ನೋಡಲು ನಿರಾಕರಣೆ: 6 ವರ್ಷದ ಬಾಲಕಿಗೆ ಮೂವರು ಅಪ್ರಾಪ್ತರು ಮಾಡಿದ್ದೇನು ಗೊತ್ತಾ..?
ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಅಸ್ಸಾಂ ಕೋರ್ಟ್(Assam Court) ಗುರುವಾರ ಮೂವರು ಅಪ್ರಾಪ್ತರನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಿದೆ.
ಗುವಾಹಟಿ: ಅಸ್ಸಾಂನ ನಾಗಾಂವ್ ಜಿಲ್ಲೆ(Nagaon District)ಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಮೂವರು ಅಪ್ರಾಪ್ತ ವಯಸ್ಕರು 6 ವರ್ಷದ ಬಾಲಕಿಯನ್ನು ಅಶ್ಲೀಲ ವಿಡಿಯೋ ನೋಡಲು ನಿರಾಕರಿಸಿದ ಕಾರಣ ಕಲ್ಲುಗಳಿಂದ ಹೊಡೆದು ಹತ್ಯೆ ಮಾಡಿದ್ದಾರೆ. ಹೆಣ್ಣು ಮಗುವನ್ನು ಕೊಂದ ಆರೋಪದ ಮೇಲೆ ಅಸ್ಸಾಂ ಕೋರ್ಟ್(Assam Court) ಗುರುವಾರ ಮೂವರು ಅಪ್ರಾಪ್ತರನ್ನು ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಿದೆ.
ಆರೋಪಿಯ ತಂದೆ ಕೂಡ ಬಂಧನ
ಪೊಲೀಸರ ಮಾಹಿತಿಯ ಪ್ರಕಾರ, ನಾಗಾಂವ್‌ನ ಮೂವರು ಅಪ್ರಾಪ್ತರು ತಮ್ಮೊಂದಿಗೆ ಅಶ್ಲೀಲ ವಿಡಿಯೋ(Porn Video) ವೀಕ್ಷಿಸಲು ನಿರಾಕರಿಸಿದ್ದಕ್ಕಾಗಿ 6 ವರ್ಷದ ಬಾಲಕಿಯನ್ನು ಕೊಂದಿದ್ದಾರೆ. ನ್ಯಾಯಾಲಯ ಈ ಮೂವರನ್ನೂ ಬಾಲಾಪರಾಧಿಗಳ ಗೃಹಕ್ಕೆ ಕಳುಹಿಸಿದೆ. ಪ್ರಕರಣದಲ್ಲಿ ಬಂಧಿತನಾಗಿರುವ ಒಬ್ಬ ಆರೋಪಿಯ ತಂದೆಯನ್ನು ಕೂಡ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
ಇದನ್ನೂ ಓದಿ: ಕೋವಿಡ್ -19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ತುರ್ತು ಏಕಿಲ್ಲ..? ತಜ್ಞರು ಅಭಿಪ್ರಾಯ ಹೀಗಿದೆ ನೋಡಿ
ಕಲ್ಲಿನಿಂದ ಜಜ್ಜಿ ಬಾಲಕಿ ಹತ್ಯೆ
ಬುಧವಾರ ನಾಗಾಂವ್ ಪೊಲೀಸರು(Nagaon Police) ಬಾಲಕಿಯ ಕೊಲೆಗೆ ಸಂಬಂಧಿಸಿದಂತೆ 8 ರಿಂದ 11 ವರ್ಷ ವಯಸ್ಸಿನ ಮೂವರು ಅಪ್ರಾಪ್ತರನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಕೊಲೆಯಾಗಿರುವ ಬಾಲಕಿ ಮೊಬೈಲ್ ಫೋನ್‌ನಲ್ಲಿ ಅಶ್ಲೀಲ ತುಣುಕುಗಳನ್ನು ನೋಡುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಮಂಗಳವಾರ ಕಲಿಯಾಬೋರ್ ಪ್ರದೇಶದ ಕಲ್ಲು ಕ್ವಾರಿಯ ಶೌಚಾಲಯದಲ್ಲಿ ಬಾಲಕಿಯ ಶವ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಮಂಗಳವಾರ ಬಾಲಕಿಯ ಮನೆಯ ಸಮೀಪವೇ ವಾಸಿಸುತ್ತಿದ್ದ ಮೂವರು ಅಪ್ರಾಪ್ತರು ಸಂತ್ರಸ್ತೆಯನ್ನು ಹತ್ತಿರದ ಕಲ್ಲು ಕ್ವಾರಿಗೆ ಕರೆದೊಯ್ದಿದ್ದರು. ಅಲ್ಲಿ ಅವರು ಪೋರ್ನ್ ವಿಡಿಯೋ ನೋಡುವಂತೆ ಆಕೆಗೆ ಬಲವಂತ ಮಾಡಿದ್ದರು. ಆಕೆ ಅವರ ಪ್ರಸ್ತಾಪವನ್ನು ತಿರಸ್ಕರಿಸಿದಾಗ ಹುಡುಗರು ಅವಳನ್ನು ಕಲ್ಲಿನಿಂದ ಹೊಡೆದು ಸಾಯಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಶ್ಲೀಲ ವಿಡಿಯೋಗಳೇ ತುಂಬಿದ್ದ ಆರೋಪಿಯೊಬ್ಬರ ಮೊಬೈಲ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು(Nagaon Police) ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ: PM Narendra Modi : ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ : ಪಿಎಂ ಮೋದಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ