ಹರಿಯಾಣ: ತರಗತಿಯಲ್ಲಿ ಶಿಳ್ಳೆ(Whistle) ಹಾಕಿದರೆಂದು ಶಿಕ್ಷಕರು ದೊಣ್ಣೆಯಿಂದ ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಹೊಡೆದಿದ್ದಾರೆ. ಹರಿಯಾಣ(Haryana)ದ ಫತೇಹಾಬಾದ್ ಜಿಲ್ಲೆಯ ತೋಹಾನಾ ಪ್ರದೇಶದ ಸರ್ಕಾರಿ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ.
ಕನಿಷ್ಠ 40 ವಿದ್ಯಾರ್ಥಿಗಳಿಗೆ ಬಾಸುಂಡೆ ಬರುವಂತೆ ಶಿಕ್ಷಕರು ದೊಣ್ಣೆಯಿಂದ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಈ ಪೈಕಿ 10 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಶಾಲೆಯ ಅಧಿಕಾರಿಗಳ ವಿರುದ್ಧ ಪೊಲೀಸರಿಗೆ ದೂರು(Police complaint) ನೀಡಲಾಗಿದೆ.
ಇದನ್ನೂ ಓದಿ: Price Hike: ಜನ ಸಾಮಾನ್ಯರ ಮೇಲೆ ಬೆಲೆ ಏರಿಕೆ ಬಿಸಿ..! ಸಾಬೂನ್ , ಸರ್ಫ್ ಸೇರಿದಂತೆ ಈ ಎಲ್ಲಾ ವಸ್ತುಗಳ ದರದಲ್ಲಿ ಹೆಚ್ಚಳ
ವರದಿಗಳ ಪ್ರಕಾರ ಸೋಮವಾರ ಬೆಳಗ್ಗೆ 11 ಗಂಟೆಗೆ 11ನೇ ತರಗತಿಯ ವಿದ್ಯಾರ್ಥಿಯೊಬ್ಬ ತರಗತಿಯೊಳಗೆ ಶಿಳ್ಳೆ ಹಾಕಿದ್ದಾನೆ. ಶಿಳ್ಳೆ ಹೊಡೆದವರು ಯಾರು ಎಂದು ಶಿಕ್ಷಕರು ಪ್ರಶ್ನಿಸಿದಾಗ ವಿದ್ಯಾರ್ಥಿಗಳು ಮೌನವಾಗಿದ್ದರು. ಶಾಲೆಯಲ್ಲಿಯೇ ಸಿಳ್ಳೆ ಹೊಡೆಯುತ್ತೀರಾ ಎಂದು ಕೋಪಿಸಿಕೊಂಡ ಶಿಕ್ಷಕರು(Teachers) ತರಗತಿಯಲ್ಲಿದ್ದ ಎಲ್ಲಾ 40 ವಿದ್ಯಾರ್ಥಿಗಳನ್ನು ದೊಣ್ಣೆಯಿಂದ ಮನಬಂದಂತೆ ಹೊಡೆದಿದ್ದಾರೆ ಎಂದು ಆರೋಪಿಸಲಾಗಿದೆ.
ಕೆಲ ವಿದ್ಯಾರ್ಥಿಗಳ(Students) ಪೋಷಕರು ನೀಡಿದ ಜಂಟಿ ದೂರಿನ ಪ್ರಕಾರ, ಮಂಗೇ ರಾಮ್, ರಜನಿ ಮತ್ತು ಚರಣಜಿತ್ ಸಿಂಗ್ ಎಂಬ ಮೂವರು ಶಿಕ್ಷಕರು ವಿದ್ಯಾರ್ಥಿಗಳನ್ನು ಮನಬಂದಂತೆ ಥಳಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪೈಕಿ ಚರಣಜಿತ್ ಸಿಂಗ್ ಇಬ್ಬರು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ವಿರುದ್ಧ ಜಾತಿ ನಿಂದನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಇದನ್ನೂ ಓದಿ: ಇನ್ನು ಯಾರೂ ನಿಮ್ಮ Whatsapp ಖಾತೆಯನ್ನು ಸ್ಪೈ ಮಾಡಲು ಸಾಧ್ಯವಿಲ್ಲ, ಬಂದಿದೆ ಅದ್ಬುತ ವೈಶಿಷ್ಟ್ಯ
ಘಟನೆಯ ಬಗ್ಗೆ ಪೋಷಕರಿಗೆ ಏನಾದರೂ ಹೇಳಿದರೆ ನೆಟ್ಟಗಿರಲ್ಲವೆಂದು ವಿದ್ಯಾರ್ಥಿಗಳಿಗೆ ಚರಣಜಿತ್ ಸಿಂಗ್ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮಹಿಳಾ ಶಿಕ್ಷಕಿ ವಿರುದ್ಧದ ಕಿರುಕುಳ ಪ್ರಕರಣದಲ್ಲಿ ನಿಮ್ಮ ಭವಿಷ್ಯವನ್ನೇ ಹಾಳು ಮಾಡುತ್ತೇನೆ ಎಂದು ವಿದ್ಯಾರ್ಥಿಗಳಿಗೆ ಈ ಶಿಕ್ಷಕ ಬೆದರಿಕೆಯನ್ನೂ ಹಾಕಿದ್ದರು ಎನ್ನಲಾಗಿದೆ. ವಿದ್ಯಾರ್ಥಿಗಳಿಗೆ ಮನಬಂದಂತೆ ಥಳಿಸಿರುವ ಶಿಕ್ಷಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೋಷಕರು ಪೊಲೀಸರಿಗೆ(Police) ಮನವಿ ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.