ಕೋವಿಡ್ -19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ತುರ್ತು ಏಕಿಲ್ಲ..? ತಜ್ಞರು ಅಭಿಪ್ರಾಯ ಹೀಗಿದೆ ನೋಡಿ

ಆಗಸ್ಟ್‌ ನಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಹದಿಹರೆಯದವರಲ್ಲಿ ಬಳಸಲು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾಕ್(Zydus Cadillac) ಕಂಪನಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಝೈಕೋವ್-ಡಿ(Zycov-D)ಗೆ ಡಿಸಿಜಿಐ ತುರ್ತು ಅನುಮೋದನೆ ನೀಡಿತ್ತು.

Written by - Puttaraj K Alur | Last Updated : Oct 22, 2021, 11:59 AM IST
  • ಇನ್ನೂ ಕೆಲ ಪ್ರಯೋಗಗಳು ಬಾಕಿ ಇರುವುದರಿಂದ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲವೆಂದ ತಜ್ಞರು
  • ಲಸಿಕೆಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಇನ್ನೂ ಸಾಕಷ್ಟು ತಿಳಿದಿಲ್ಲವೆಂದು ಆರೋಗ್ಯ ತಜ್ಞರ ಅಭಿಪ್ರಾಯ
  • ಇಲ್ಲಿಯವರೆಗೆ 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ V ಮಾತ್ರ ನೀಡಲಾಗುತ್ತಿತ್ತು
ಕೋವಿಡ್ -19 ವಿರುದ್ಧ ಮಕ್ಕಳಿಗೆ ಲಸಿಕೆ ಹಾಕುವ ತುರ್ತು ಏಕಿಲ್ಲ..? ತಜ್ಞರು ಅಭಿಪ್ರಾಯ ಹೀಗಿದೆ ನೋಡಿ

ನವದೆಹಲಿ: ಪೋಷಕರು ತಮ್ಮ ಮಕ್ಕಳ ಸುರಕ್ಷತೆಗಾಗಿ ಕೋವಿಡ್ -19 ಲಸಿಕೆ(COVID-19 Vaccine) ಹಾಕಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ ಆರೋಗ್ಯ ತಜ್ಞರು ಮಾತ್ರ ಪ್ರಯೋಗಗಳು ಇನ್ನೂ ಬಾಕಿ ಇರುವುದರಿಂದ ಮಕ್ಕಳಿಗೆ ಲಸಿಕೆ ಹಾಕುವ ತುರ್ತು ಇಲ್ಲವೆಂದು ಹೇಳಿದ್ದಾರೆ. ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಭಾರತವು ತನ್ನ ಲಸಿಕೆ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲು ಸಾಧಿಸಿದೆ. ದೇಶದ ಜನರಿಗೆ 100 ಕೋಟಿಗೂ ಹೆಚ್ಚಿನ ಡೋಸ್ ಗಳನ್ನು ನೀಡಲಾಗಿದೆ. ಇದೇ ಜನವರಿ 16ರಂದು ಲಸಿಕೆ ಅಭಿಯಾನವು ಆರಂಭಗೊಂಡಿತ್ತು. 9 ತಿಂಗಳು ದಾಟಿದ ಬಳಿಕ ಲಸಿಕೆ ನೀಡಿಕೆಯು 100 ಕೋಟಿ ಡೋಸ್ ಗಳನ್ನು ದಾಟಿದೆ.     

ವೆಲ್ಕಂ ಟ್ರಸ್ಟ್ ಸಂಶೋಧನಾ ಪ್ರಯೋಗಾಲಯದ ಲಸಿಕೆ ತಜ್ಞ ಮತ್ತು ಪ್ರಾಧ್ಯಾಪಕರಾದ ಡಾ.ಗಗನ್ ದೀಪ್ ಕಾಂಗ್ ಅವರು 12 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಲಸಿಕೆ(Children Corona Vaccine) ನೀಡುವ ಮೊದಲು ಭಾರತವು ಉತ್ತರವಿಲ್ಲದ ಅನೇಕ ಪ್ರಶ್ನೆಗಳಿಗೆ ಉದ್ದೇಶಪೂರ್ವಕವಾಗಿ ಯೋಚಿಸಬೇಕಾಗಿದೆ ಎಂದು ಪ್ರತಿಪಾದಿಸಿದ್ದಾರೆ.

‘ನಾವು ನಿಷ್ಕ್ರಿಯಗೊಳಿಸಿದ ವೈರಸ್(CoronaVirus) ಲಸಿಕೆಗಳನ್ನು ಬಳಸಬೇಕೇ ಅಥವಾ ನಾವು mRNA ಲಸಿಕೆಗಳಿಗಾಗಿ ಕಾಯಬೇಕೇ? ನಾವು ಉದ್ದೇಶಪೂರ್ವಕವಾಗಿ ಮತ್ತು ಸೂಕ್ತವಾಗಿ ಉತ್ತರಿಸಬೇಕಾದ ಹಲವು ಪ್ರಶ್ನೆಗಳಿವೆ. ಈ ಲಸಿಕೆಗಳ ಕಾರ್ಯಕ್ಷಮತೆಯ ಬಗ್ಗೆ ನಮಗೆ ಇನ್ನೂ ಸಾಕಷ್ಟು ತಿಳಿದಿಲ್ಲ. ಇದೀಗ ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳಲು ನಮ್ಮಲ್ಲಿ ಸಾಕಷ್ಟು ಮಾಹಿತಿ ಇಲ್ಲ’ವೆಂದು ಅವರು ಮಾಧ್ಯಮಗಳಿಗೆ ನೀಡಿದ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ.

ಇದನ್ನೂ ಓದಿ: PM Narendra Modi : ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್ ಮತ್ತು ಸಬ್ ಕಾ ಪ್ರಯಾಸ್ : ಪಿಎಂ ಮೋದಿ

ಇದೇ ರೀತಿಯ ಟೀಕೆಗಳನ್ನು ಪ್ರತಿಧ್ವನಿಸುತ್ತಾ ಪಬ್ಲಿಕ್ ಹೆಲ್ತ್ ಫೌಂಡೇಶನ್ ಆಫ್ ಇಂಡಿಯಾ (PHFI) ಅಧ್ಯಕ್ಷ ಡಾ.ಕೆ.ಶ್ರೀನಾಥ್ ರೆಡ್ಡಿ ಅವರು ಇಮ್ಯೂನೊಕೊಂಪ್ರೊಮೈಸ್(Immunocompromised) ಆಗದ ಹೊರತು ಚಿಕ್ಕ ಮಕ್ಕಳಿಗೆ ಲಸಿಕೆ ಹಾಕುವ ಅಗತ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ. ಅಕ್ಟೋಬರ್ 12ರಂದು ತಜ್ಞರ ಸಮಿತಿಯು 2 ಮತ್ತು 18 ವರ್ಷದೊಳಗಿನ ಮಕ್ಕಳಿಗೆ ಕೋವ್ಯಾಕ್ಸಿನ್-ಭಾರತ್ ಬಯೋಟೆಕ್‌ನ ಕೋವಿಡ್ -19 ಲಸಿಕೆಗಾಗಿ ತುರ್ತು ಬಳಕೆಯ ಅನುಮೋದನೆಯನ್ನು (EUA)) ನೀಡಿತ್ತು.

‘ಲಸಿಕೆ ನೀಡುವ ಬಗ್ಗೆ ವಿವರವಾದ ಚರ್ಚೆಯ ನಂತರ ಕೆಲವು ಪರಿಸ್ಥಿತಿಗಳಿಗೆ ಒಳಪಟ್ಟು ತುರ್ತು ಸಂದರ್ಭಗಳಲ್ಲಿ ನಿರ್ಬಂಧಿತ ಬಳಕೆಗಾಗಿ 2 ರಿಂದ 18 ವರ್ಷ ವಯಸ್ಸಿನವರಿಗೆ ಲಸಿಕೆ(Vaccination Drive)ಯ ಮಾರುಕಟ್ಟೆ ಅನುಮತಿಯನ್ನು ನೀಡಲು ಸಮಿತಿಯು ಶಿಫಾರಸು ಮಾಡಿದೆ’ ಎಂದು ವಿಷಯ ತಜ್ಞರ ಸಮಿತಿ (ಎಸ್‌ಇಸಿ) ತನ್ನ ಶಿಫಾರಸುಗಳಲ್ಲಿ ತಿಳಿಸಿದೆ. ಆದಾಗ್ಯೂ ಅಂತಿಮ ಅನುಮೋದನೆಯನ್ನು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ನೀಡುತ್ತದೆ. ಅನುಮೋದನೆ ಪಡೆದ ನಂತರ ಕೋವಾಕ್ಸಿನ್ ಮಕ್ಕಳ ಬಳಕೆಗೆ ತೆರವುಗೊಳಿಸಿದ 2ನೇ ಲಸಿಕೆಯಾಗಿದೆ.

ಇದನ್ನೂ ಓದಿ: 16 ರೈಲುಗಳ ಕಾರ್ಯಾಚರಣೆಯನ್ನು ರದ್ದುಗೊಳಿಸಿದ ಭಾರತೀಯ ರೈಲ್ವೆ

ಆಗಸ್ಟ್‌ ನಲ್ಲಿ 12 ವರ್ಷ ಮತ್ತು ಮೇಲ್ಪಟ್ಟ ಹದಿಹರೆಯದವರಲ್ಲಿ ಬಳಸಲು ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾಕ್(Zydus Cadillac) ಕಂಪನಿ ಅಭಿವೃದ್ಧಿಪಡಿಸಿದ ಕೋವಿಡ್ -19 ಲಸಿಕೆ ಝೈಕೋವ್-ಡಿ(Zycov-D)ಗೆ ಡಿಸಿಜಿಐ ತುರ್ತು ಅನುಮೋದನೆ ನೀಡಿತ್ತು.ಇಲ್ಲಿಯವರೆಗೆ ಕೋವಿಶೀಲ್ಡ್, ಕೋವಾಕ್ಸಿನ್ ಮತ್ತು ಸ್ಪುಟ್ನಿಕ್ ವಿ ಅನ್ನು 18 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ನೀಡಲಾಗುತ್ತಿತ್ತು.   

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

More Stories

Trending News