ನವದೆಹಲಿ: ಮೋದಿ ಸರ್ಕಾರದ ಅತಿದೊಡ್ಡ ಯೋಜನೆಗಳಲ್ಲಿ ಒಂದಾದ ಪ್ರಧಾನಿ ಜನ ಧನ್ (Jan Dhan) ಯೋಜನೆ (ಪಿಎಂಜೆಡಿವೈ) ಇಂದು 6 ವರ್ಷಗಳನ್ನು ಪೂರೈಸಿದೆ. 2014ರಲ್ಲಿ ಪ್ರಧಾನಿಯಾದ ನಂತರ ಪ್ರಧಾನಿ ನರೇಂದ್ರ ಮೋದಿ 2014 ರ ಆಗಸ್ಟ್ 15 ರಂದು ಜನ-ಧನ್ ಯೋಜನೆಯನ್ನು ಪ್ರಾರಂಭಿಸಿದರು. ಜನರ ಬ್ಯಾಂಕ್ ಖಾತೆಗಳನ್ನು ತೆರೆಯುವುದು ಇದರ ಉದ್ದೇಶವಾಗಿತ್ತು. ಇಂದು ಈ ಮಹತ್ವದ ಯೋಜನೆಯು ಆರು ವರ್ಷಗಳನ್ನು ಪೂರೈಸಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಟ್ವೀಟ್ ಮಾಡುವ ಮೂಲಕ ಈ ಯೋಜನೆ ಯಶಸ್ಸಿಗೆ ಕಾರಣರಾದ ಜನತೆಯನ್ನು ಅಭಿನಂದಿಸಿದ್ದಾರೆ. ಜೊತೆಗೆ ಈ ಯೋಜನೆಗೆ ಸಂಬಂಧಿಸಿದ ಕೆಲವು ಸಂಗತಿಗಳನ್ನು ಎಲ್ಲರ ಮುಂದೆ ಇಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಪ್ರಧಾನಿ ನರೇಂದ್ರ ಮೋದಿ ತಮ್ಮ ಟ್ವೀಟ್‌ನಲ್ಲಿ, 'ಪ್ರಧಾನ್ ಮಂತ್ರಿ ಜನ ಧನ್ ಯೋಜನೆಯನ್ನು 6 ವರ್ಷಗಳ ಹಿಂದೆ ಪ್ರಾರಂಭಿಸಲಾಯಿತು, ಜನರನ್ನು ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಸಂಪರ್ಕಿಸುವ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಯಿತು. ಕೊನೆಗೂ ಇದು 'ಗೇಮ್ ಚೇಂಜರ್'  ಎಂದು ಸಾಬೀತಾಯಿತು, ಇದು ಬಡತನದಲ್ಲಿ ಸಿಲುಕಿರುವವರಿಗೆ ಅನುಕೂಲವಾಗುವಂತೆ ಕೆಲಸ ಮಾಡಿತು. ಅದರಲ್ಲಿ ಹೆಚ್ಚಿನ ಜನರು ಗ್ರಾಮೀಣ ಪ್ರದೇಶದವರು ಮತ್ತು ಮಹಿಳೆಯರು. ಈ ಯೋಜನೆಗಾಗಿ ಕೆಲಸ ಮಾಡಿದವರಿಗೆ ಧನ್ಯವಾದಗಳು ' ಎಂದು ಬರೆದಿದ್ದಾರೆ.



'ಜನ ಧನ್ ಯೋಜನೆ' 'ಗೇಮ್ ಚೇಂಜರ್'  ಹೇಗೆ?
1. ಆಗಸ್ಟ್ 2020 ರವರೆಗೆ ಈ ಯೋಜನೆಯಡಿ 40.35 ಕೋಟಿ ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದೆ.
2. ಒಟ್ಟು ಬ್ಯಾಂಕ್ ಖಾತೆಗಳಲ್ಲಿ 55. 2 ಪ್ರತಿಶತ ಖಾತೆಗಳು ಮಹಿಳೆಯರ ಹೆಸರಿನಲ್ಲಿವೆ.
3. ಜನ ಧನ್ ಯೋಜನೆ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿ 64 ಪ್ರತಿಶತ ಗ್ರಾಮೀಣ ಪ್ರದೇಶಗಳಲ್ಲಿದ್ದರೆ, ಉಳಿದ 36 ಪ್ರತಿಶತ ನಗರಗಳಲ್ಲಿವೆ.
4. ಇದರಲ್ಲಿ ಶೂನ್ಯ ಬ್ಯಾಲೆನ್ಸ್ ಮೂಲಕ ಖಾತೆಯನ್ನು ತೆರೆಯಬಹುದು.
5. ಈ ಯೋಜನೆಯಡಿ 2 ಲಕ್ಷ ಅಪಘಾತ ವಿಮೆ ಲಭ್ಯವಿದೆ, ಇದು ಸಂಪೂರ್ಣವಾಗಿ ಉಚಿತವಾಗಿದೆ.
6. ಜನ ಧನ್ ಖಾತೆಗಳಲ್ಲಿ ಡೆಬಿಟ್ ಕಾರ್ಡ್‌ಗಳನ್ನು ಪಡೆಯುವ ಸೌಲಭ್ಯವೂ ಇದೆ.


ಪಿಎಂ ಗರಿಬ್ ಕಲ್ಯಾಣ್ ಯೋಜನೆ ಅಡಿಯಲ್ಲಿ ಸರ್ಕಾರವು 2020ರ ಏಪ್ರಿಲ್-ಜೂನ್ ಅವಧಿಯಲ್ಲಿ ಮಹಿಳೆಯರ ಖಾತೆಗಳಲ್ಲಿ 30,705 ಕೋಟಿ ರೂ. ಜಮಾ ಮಾಡಿದೆ. ಕರೋನಾ ಬಿಕ್ಕಟ್ಟಿನಿಂದಾಗಿ ಇಡೀ ದೇಶವು ಲಾಕ್ಡೌನ್ ಆಗಿದ್ದ ಸಮಯ ಇದು. ಜನ ಧನ್ ಯೋಜನೆ ಅಡಿಯಲ್ಲಿ 8 ಕೋಟಿ ಜನರಿಗೆ ಮೋದಿ ಸರ್ಕಾರ ಅನೇಕ ಯೋಜನೆಗಳ ಹಣವನ್ನು ನೇರ ಲಾಭ ವರ್ಗಾವಣೆಯ ಮೂಲಕ ವರ್ಗಾಯಿಸಿದೆ.