ಲುಧಿಯಾನ: ಗುಡಿಸಿಲಿಗೆ ಬೆಂಕಿ ಬಿದ್ದು ಐವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ 7 ಮಂದಿ ಸಜೀವ ದಹನವಾಗಿರುವ ಘಟನೆ ಪಂಜಾಬ್‍ ರಾಜ್ಯದಲ್ಲಿ ನಡೆದಿದೆ. ಮೃತರನ್ನು ಸುರೇಶ್ (54), ರೌರ್ ದೇವಿ (50), ಅವರ ಪುತ್ರಿಯರಾದ ರಾಖಿ (15), ಮನಿಶಾ (10), ಚಂದಾ (8), ಗೀತಾ (6) ಮತ್ತು ಪುತ್ರ ಸನ್ನಿ (2) ಎಂದು ಗುರುತಿಸಲಾಗಿದೆ.


COMMERCIAL BREAK
SCROLL TO CONTINUE READING

ಗುಡಿಸಿನಲ್ಲಿ ವಾಸಿಸುತ್ತಿದ್ದ ಐವರು ಮಕ್ಕಳು ಸೇರಿ ಒಂದೇ ಕುಟುಂಬದ 7 ಮಂದಿ ಬುಧವಾರ ಬೆಳಗ್ಗೆ ಸಂಭವಿಸಿರುವ ಅಗ್ನಿ ದುರಂತದಲ್ಲಿ ಸುಟ್ಟು ಕರಕಲಾಗಿದ್ದಾರೆ. ಮೃತಪಟ್ಟವರೆಲ್ಲರೂ ಬಿಹಾರ ಮೂಲದವರು ಎಂದು ವರದಿಯಾಗಿದೆ. ಈ ಕುಟುಂಬ ತಮ್ಮ ಜೀವನೋಪಾಯವನ್ನು ಚಿಂದಿ ಆರಿಸುವ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.  


ಇದನ್ನೂ ಓದಿ: Delhi High Court: "ದೈಹಿಕ ಸಂಬಂಧವಿಲ್ಲ ಎಂದಮಾತ್ರಕ್ಕೆ ಡೈವೋರ್ಸ್​ ಪರಿಗಣಿಸಲು ಸಾಧ್ಯವಿಲ್ಲ"


ಪಂಜಾಬ್‍ನ ಲುಧಿಯಾನ ನಗರದ ಕೈಗಾರಿಕಾ ನಗರದಲ್ಲಿರುವ ಕೊಳೆಗೇರಿಯ ಗುಡಿಸಿನಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ವೇಳೆ ಹೊರಗಿದ್ದ ಕುಟುಂಬದ ಒಬ್ಬ ಸದಸ್ಯ ಮಾತ್ರ ಬದುಕುಳಿದಿದ್ದಾನೆ.


ವಲಸೆ ಕಾರ್ಮಿಕರು ಟಿಬ್ಬಾ ರಸ್ತೆಯಲ್ಲಿರುವ ಮುನ್ಸಿಪಲ್ ಕಸದ ಡಂಪ್ ಯಾರ್ಡ್ ಬಳಿಯ ತಮ್ಮ ಗುಡಿಸಲಿನಲ್ಲಿ ಮಲಗಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಇಡೀ ಗುಡಿಸಲಿಗೆ ವ್ಯಾಪಿಸಿದೆ. ಮಲಗಿದ್ದ ಕಾರಣ ಬೆಂಕಿ ಕಾಣಿಸಿಕೊಂಡ ತಕ್ಷಣ ಯಾರಿಗೂ ಎಚ್ಚರವಾಗಿಲ್ಲ. ಹೀಗಾಗಿ ಎಲ್ಲರೂ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಮಲಗಿದ್ದಲ್ಲಿಯೇ ಸುಟ್ಟು ಕರಕಲಾಗಿದ್ದಾರೆಂದು ಲುಧಿಯಾನದ ಸಹಾಯಕ ಪೊಲೀಸ್ ಕಮಿಷನರ್ (ಪೂರ್ವ) ಸುರೀಂದರ್ ಸಿಂಗ್ ಹೇಳಿದ್ದಾರೆ.


ಇದನ್ನೂ ಓದಿ: ಭೀಕರ ಅಪಘಾತ: ಆರು ಮಂದಿ ಸಾವು, ಹಲವರಿಗೆ ಗಾಯ


ಗುಡಿಸಲಿನೊಳಗೆ ಅಪಾರ ಪ್ರಮಾಣದ ಚಿಂದಿ, ಪ್ಲಾಸ್ಟಿಕ್ ಮತ್ತು ಜಂಕ್ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದರಿಂದ ಬೆಂಕಿ ವೇಗವಾಗಿ ಹರಡಿದೆ. ಕಳೆದ ಕೆಲ ದಿನಗಳಿಂದ ಸಮೀಪದ ಕಸದ ತೊಟ್ಟಿಯಲ್ಲಿ ಬೆಂಕಿ ಹೊತ್ತಿ ಉರಿಯುತ್ತಿತ್ತು. ಆ ಬೆಂಕಿಯೇ ಗುಡಿಸಿಲಿಗೆ ತಗುಲಿರಬಹುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.