ನವದೆಹಲಿ: ಕೇವಲ ಜನಸಾಮಾನ್ಯರೇ ಮಾತ್ರವಲ್ಲ ಕೇಂದ್ರ ಸರ್ಕಾರದ ಲಕ್ಷಾಂತರ ನೌಕರರು ಬಜೆಟ್ 2020ರಿಂದ ಭಾರೀ ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಆದರೆ ಬಜೆಟ್ ನಲ್ಲಿ ನೌಕರರಿಗೆ ಯಾವುದೇ ವಿಶೇಷ ಭರವಸೆಗಳು ಹೊರಬೀಳುವ ಸಾಧ್ಯತೆ ಇಲ್ಲ. ಆದರೆ, ಬಜೆಟ್ ಮಂಡನೆಗೂ ಮೊದಲು ಮತ್ತು ಬಜೆಟ್ ಮಂಡನೆಯಾದ ನಂತರ ಕೇಂದ್ರ ಸರ್ಕಾರದ ನೌಕರರಿಗೆ ಎರೆಡೆರಡು ಸಂತಸದ ಸುದ್ದಿಗಳು ಹೊರಬೀಳುವ ಸಾಧ್ಯತೆ ಇದೆ. ಈ ಎರಡೂ ಸಿಹಿ ಸುದ್ದಿಗಳು ಕೇಂದ್ರ ಸರ್ಕಾರಿ ನೌಕರರ ಮೇಲೆ ಪ್ರಭಾವ ಬೀರಲಿದ್ದು, ನೌಕರರ ಮಾಸಿಕ ಸಂಬಳದಲ್ಲಿ ವೃದ್ಧಿಯಾಗಲಿದೆ. ಒಂದೆಡೆ ರೈಲು ನೌಕರರ ಕನಿಷ್ಠ ವೇತನ ಹೆಚ್ಚಾಗುವ ಸಾಧ್ಯತೆ ಇದ್ದರೆ, ಇನ್ನೊಂದೆಡೆ ತುಟ್ಟಿ ಭತ್ಯೆಯಲ್ಲಿಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಸಾಮಾನ್ಯ ನಾಗರಿಕರು ಸೇರಿದಂತೆ ಕೇಂದ್ರ ಸರ್ಕಾರಿ ನೌಕರರು ಕೂಡ ಫೆಬ್ರವರಿ 1ಕ್ಕಾಗಿ ಕಾಯುವಂತಾಗಿದೆ.


COMMERCIAL BREAK
SCROLL TO CONTINUE READING

ನೌಕರರ ಕನಿಷ್ಠ ವೇತನ ವೃದ್ಧಿಯಾಗುವ ಸಾಧ್ಯತೆ
ಕೇಂದ್ರ ವಿತ್ತ ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ, ಫೆ.1ನೇ ತಾರೀಖಿನ ಬಜೆಟ್ ಮಂಡನೆಗೂ ಮೊದಲೇ ನರೇಂದ್ರ ಮೋದಿ ಸರ್ಕಾರ, ನೌಕರರ DA ಅನ್ನು ಹೆಚ್ಚಿಸುವ ಸಾಧ್ಯತೆ ಇದೆ. ಜೊತೆಗೆ 7ನೇ ವೇತನ ಆಯೋಗದ ಶಿಫಾರಸ್ಸಿನಂತೆ ನೌಕರರ ಸಂಬಳದಲ್ಲಿಯೂ ಕೂಡ ಬಜೆಟ್ ಮಂಡನೆಯ ನಂತರ ಏರಿಕೆ ಮಾಡಿ ಘೋಶಿಸುವ ಸಾಧ್ಯತೆ ಇದೆ. ಈ ಹೆಚ್ಚಳದ ನಂತರ ಕೇಂದ್ರ ಸರ್ಕಾರಿ ನೌಕರರ ಕನಿಷ್ಠ ವೇತನ 21,000ವರೆಗೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ, ಇದು ಕೇವಲ ಭಾರತೀಯ ರೇಲ್ವೆ ಇಲಾಖೆಯ ನೌಕರರಿಗೆ ಮಾತ್ರ ಸೀಮಿತವಾಗಿರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ.


ಬಜೆಟ್ ಗೂ ಮುನ್ನ ತುಟ್ಟಿಭತ್ಯೆ ಏರಿಕೆಯಾಗುವ ಸಾಧ್ಯತೆ
ಕೇಂದ್ರ ಹಣಕಾಸು ಸಚಿವಾಲಯದ ಮೂಲಗಳು ನೀಡಿರುವ ಮಾಹಿತಿ ಪ್ರಕಾರ ಕೇಂದ್ರ ಸರ್ಕಾರ ಬಜೆಟ್ 2020 ಬಳಿಕ ಕೇಂದ್ರ ಸರ್ಕಾರದ ನೌಕರರ ಕನಿಷ್ಠ ವೇತನವನ್ನು ರೂ.21,000ಕ್ಕೆ ನಿಗದಿಪಡಿಸಲಿದೆ ಎನ್ನಲಾಗಿದೆ. ಈ ಸಂಬಳ ಏರಿಕೆ 7ನೇ ವೇತನ ಆಯೋಗದ ಶಿಫಾರಸ್ಸುಗಳ ಅಡಿ ಮಾಡಲಾಗುತ್ತಿದೆ. ಇನ್ನೊಂದೆಡೆ 2020ರ ಬಜೆಟ್ ಮಂಡನೆಗೂ ಮುನ್ನ ಸರ್ಕಾರ ಕೇಂದ್ರ ಸರ್ಕಾರಿ ನೌಕರರ DA ಅನ್ನು ಸಹ ಹೆಚ್ಚಿಸಿ ಘೋಷಣೆ ಮಾಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. 


10,000ರೂ ಸಂಬಳ ಹೆಚ್ಚಾಗುವ ಸಾಧ್ಯತೆ
ಮೂಲಗಳು ನೀಡಿರುವ ಮಾಹಿತಿಯನ್ನು ಒಂದು ವೇಳೆ ನಂಬುವುದೇ ಆದಲ್ಲಿ ಲೆವೆಲ್ 1 ನೌಕರರ ಸಂಬಳ ರೂ.720ರಷ್ಟು ಹೆಚ್ಚಾಗಲಿದೆ. ಅತ್ತ ಕ್ಯಾಬಿನೆಟ್ ಸಚಿವರ ಸಂಬಳದಲ್ಲಿ ರೂ.10,000 ರಷ್ಟು ವೃದ್ಧಿಯಾಗಲಿದೆ.