7th Pay commission : ಡಿಎ ಸೇರಿಸಿದರೆ ಸರ್ಕಾರಿ ನೌಕರರಿಗೆ ಸಂಬಳ ಎಷ್ಟಾಗುತ್ತೆ, ಗೊತ್ತಾ.?
ಕೇಂದ್ರ ಮುಂಗಡಪತ್ರ ಮಂಡನೆಯಾಗಿದೆ. ದಿನದಿಂದ ದಿನಕ್ಕೆ ದೈನಂದಿನ ಖರ್ಚು ಜಾಸ್ತಿಯಾಗುತ್ತಿದೆ. ಕರೋನಾ ಬಳಿಕ ಆರ್ಥಿಕ ಸ್ಥಿತಿ ಹಳಿಗೆ ಬರುತ್ತಿದೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರು ಆಶಾಭಾವನೆಯಿಂದ 7ನೇ ವೇತನ ಆಯೋಗದ ಮೇಲೆ ಕಣ್ಣು ಇಟ್ಟಿದ್ದಾರೆ.
ನವದೆಹಲಿ : ಕೇಂದ್ರ ಮುಂಗಡಪತ್ರ (Budget) ಮಂಡನೆಯಾಗಿದೆ. ದಿನದಿಂದ ದಿನಕ್ಕೆ ದೈನಂದಿನ ಖರ್ಚು ಜಾಸ್ತಿಯಾಗುತ್ತಿದೆ. ಕರೋನಾ (Covid 19) ಬಳಿಕ ಆರ್ಥಿಕ ಸ್ಥಿತಿ ಹಳಿಗೆ ಬರುತ್ತಿದೆ. ಈ ನಡುವೆ ಕೇಂದ್ರ ಸರ್ಕಾರಿ ನೌಕರರು ಆಶಾಭಾವನೆಯಿಂದ 7ನೇ ವೇತನ ಆಯೋಗದ (7th Pay commission) ಮೇಲೆ ಕಣ್ಣು ಇಟ್ಟಿದ್ದಾರೆ. ಕರೋನಾ ಕಾಲದ ಹಿನ್ನೆಲೆಯಲ್ಲಿ ಕಡಿತಗೊಂಡಿದ್ದ ತುಟ್ಟಿಭತ್ಯೆ(DA) ಮತ್ತು ಇತರ ಸೌಲಭ್ಯಗಳನ್ನು ಮರಳಿ ಪಡೆಯುವ ಬಗ್ಗೆ ಆಸಕ್ತರಾಗಿದ್ದಾರೆ.
ಏರಿಕೆಯಾಗಲಿದೆ ವೇತನ ಮತ್ತು ಪಿಂಚಣಿ :
ಕೇಂದ್ರ ಸರ್ಕಾರ ತನ್ನ ನೌಕರರ ಹಿತಕ್ಕೆ ಸಂಬಂಧಿಸಿದಂತೆ ಸದ್ಯದಲ್ಲೇ ದೊಡ್ಡ ನಿರ್ಣಯವೊಂದನ್ನು ತೆಗೆದುಕೊಳ್ಳಲಿದೆ. 50 ಲಕ್ಷ ಕೇಂದ್ರ ನೌಕರರು ಮತ್ತು 65 ಲಕ್ಷ ಪಿಂಚಣಿದಾರರಿಗೆ (Pensioner’s) ಇದರಿಂದ ಪ್ರಯೋಜನವಾಗಲಿದೆ. ಇಲ್ಲಿಯ ತನಕ ಶೇ. 17ರಷ್ಟು ಡಿಎ ಹೈಕ್ (DA hike) ಆಗಲಿದೆ ಎನ್ನಲಾಗಿತ್ತು. ಈಗ ಡಿಎಯಲ್ಲಿ ಇನ್ನಷ್ಟು ಹೈಕ್ ಆಗಲಿದೆ ಅನ್ನೋ ಸುದ್ದಿ ಹರಿದಾಡಿದೆ. ಈ ಖುಷಿಯ ಸಂಗತಿ ಕೂಡಾ ಸದ್ಯದಲ್ಲೇ ಸರ್ಕಾರಿ ನೌಕರರಿಗೆ (Government employees) ಸಿಗಲಿದೆ.
ಇದನ್ನೂ ಓದಿ : EPFO Latest News: PFಗೆ ಸಂಬಂಧಿಸಿದ ಈ ದೊಡ್ಡ ಅಡಚಣೆ ಇದೀಗ ನಿವಾರಣೆಯಾಗಿದೆ
ಸಿಗುತ್ತಾ ಶೇ. 21ರಷ್ಟು ಡಿಎ..?:
ಕೇಂದ್ರ ಸರ್ಕಾರ ಪ್ರತಿ ಆರು ತಿಂಗಳಿಗೆ ತುಟ್ಟಿಭತ್ಯೆಯನ್ನು (DA) ಪರಿಷ್ಕರಿಸುತ್ತದೆ. ಮೂಲ ವೇತನದ ಮೇಲೆ ತುಟ್ಟಿಭತ್ಯೆ ಲೆಕ್ಕಾಚಾರ ಹಾಕಲಾಗುತ್ತದೆ. 7ನೇ ವೇತನ ಆಯೋಗದ ಶಿಫಾರಸಿನಂತೆ ಡಿಎಯಲ್ಲಿ ಹೈಕ್ ಸಿಗಲಿದೆ. ಕೇಂದ್ರ ಸರ್ಕಾರ ಡಿಎಯಲ್ಲಿ ಶೇ. 4ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ. ಪರಿಷ್ಕೃತಗೊಂಡಾಗ ನೌಕರರಿಗೆ ಶೇ. 21 ರಷ್ಟು ಡಿಎ ಸಿಗುವ ಸಾಧ್ಯತೆ ಇದೆ. ಸರ್ಕಾರ ಸದ್ಯದಲ್ಲೇ ಈ ಘೋಷಣೆ ಮಾಡುವ ಸಾಧ್ಯತೆಗಳಿವೆ.
ಬೊಕ್ಕಸಕ್ಕೆ 2 ಸಾವಿರ ಕೋಟಿ ಮೊತ್ತದ ಹೊರೆ :
ಕೇಂದ್ರ ನೌಕರರು ಮತ್ತು ಪಿಂಚಣಿದಾರರಿಗೆ ಜೂನ್ ಬಳಿಕ ಪರಿಷ್ಕೃತ ವೇತನ ಮತ್ತು ಡಿಎ ಸಿಗಲಿದೆ. ಕರೋನಾ (Coronavirus) ಕಾರಣದಿಂದ ಕಳೆದ ಸಲ ತುಟ್ಟಿಭತ್ಯೆಯಲ್ಲಿ ಕಡಿತ ಮಾಡಲಾಗಿತ್ತು. ಈ ಕಡಿತಕ್ಕೆ ಪೂರಕವಾಗಿ ಪರಿಹಾರ ನೀಡುವ ಸಾಧ್ಯತೆ ಕೂಡಾ ಇದೆ.
ಇದನ್ನೂ ಓದಿ : Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ
ಕೇಂದ್ರ ಸರ್ಕಾರ ಈಗಾಗಲೇ ತುಟ್ಟಿ ಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರ (DA Relief) ಹೆಚ್ಚಿಸುವ ಮುನ್ಸೂಚನೆ ನೀಡಿದೆ. ಸರ್ಕಾರದ ಈ ನಿರ್ಧಾರದಿಂದ ಬೊಕ್ಕಸಕ್ಕೆ ಎರಡು ಸಾವಿರ ಕೋಟಿ ಹೆಚ್ಚುವರಿ ಹೊರೆ ಬೀಳಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.