Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ

Latest FD Interest Rate - ಒಂದು ವೇಳೆ ಹೂಡಿಕೆಗಾಗಿ (Investment)ನೀವೂ ಕೂಡ ಸ್ಥಿರ ಹೂಡಿಕೆ (Fixed Deposit) ಮಾಡಲು ಮನಸ್ಸು  ಮಾಡಿದ್ದರೆ, ಈ ಸುದ್ದಿ ನಿಮಗೆ ಸಹಾಯಕಾರಿ ಸಾಬೀತಾಗಲಿದೆ. ಇಂದಿನಿಂದ FD ಹೂಡಿಕೆಯ ಮೇಲೆ ಹೆಚ್ಚುವರಿ ಲಾಭ ನೀಡುವುದಾಗಿ ಕೆನರಾ ಬ್ಯಾಂಕ್ ಘೋಷಿಸಿದೆ.

Written by - Nitin Tabib | Last Updated : Feb 8, 2021, 01:21 PM IST
  • ಇಂದಿನಿಂದ FD ಹೂಡಿಕೆಯ ಮೇಲೆ ಹೆಚ್ಚುವರಿ ಲಾಭ.
  • ಕೆನರಾ ಬ್ಯಾಂಕ್ ನಿಂದ ನೂತನ ಬಡ್ಡಿದರಪಟ್ಟಿ ಘೋಷಣೆ.
  • ಇಂದಿನಿಂದಲೇ ಹೆಚುವರಿ ಲಾಭ ಸಿಗಲಿದೆ
Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ title=
Latest FD Rates (File Photo)

ನವದೆಹಲಿ: Latest FD Interest Rate - ಸಾಮಾನ್ಯವಾಗಿ ಜನರು ಹೂಡಿಕೆಗಾಗಿ ಎಫ್‌ಡಿ ಆಯ್ಕೆ ಮಾಡುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ನೀವು ಯಾವ ಬ್ಯಾಂಕಿನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು ಎಂಬುದನ್ನು ನಾವು ನಿಮಗೆ ಹೇಳಿಕೊಡಲಿದ್ದೇವೆ. ಕೆನರಾ ಬ್ಯಾಂಕ್ ಇಂದಿನಿಂದ ಹೊಸ ಬಡ್ಡಿದರಗಳನ್ನು (Latest FD Interest Rates) ಪರಿಚಯಿಸಲು ನಿರ್ಧರಿಸಿದೆ, ಈ ಕಾರಣದಿಂದಾಗಿ ಎಫ್‌ಡಿ ಲಾಭ ಕೂಡ ಹೆಚ್ಚಾಗಲಿದೆ.

ಯಾವ ಗ್ರಾಹಕರಿಗೆ ಸಿಗಲಿದೆ ಲಾಭ
Canara Bank 5 ಬೇಸಿಸ್ ಪಾಯಿಂಟ್(BPS)ಗಳ ಕಡಿತ ಘೋಷಿಸಿದೆ. ಇದಲ್ಲದೆ 2 ಕೋಟಿಗಿಂತ ಕಡಿಮೆ ಮೊತ್ತದ ಡಿಪಾಸಿಟ್ ಗಳ ಮೇಲೆ ಸಿಗುವ ಬಡ್ಡಿದರದಲ್ಲಿಯೂ ಕೂಡ ಬದಲಾವಣೆ ಮಾಡಿದೆ. 2 ರಿಂದ 10 ವರ್ಷಗಳ FD ಹೂಡಿಕೆಗಾಗಿ ಬ್ಯಾಂಕ್ ತನ್ನ ಬಡ್ಡಿದರವನ್ನು ಹೆಚ್ಚಿಸಿದೆ. ಇದರಿಂದ FD ಮ್ಯಾಚುರಿಟಿ ಅವಧಿ ಶೀಘ್ರದಲ್ಲಿಯೇ ಪೂರ್ಣಗೊಳ್ಳಲಿದೆ.

ಬಡ್ಡಿದರಗಳ ಹೊಸ ಪಟ್ಟಿ ಇಂತಿದೆ

>7-45 ದಿನಗಳ ಹೂಡಿಕೆಗೆ - 2.95%

>46- 90 ದಿನಗಳ ಹೂಡಿಕೆಗೆ - 3.90%

>91-179 ದಿನಗಳ ಹೂಡಿಕೆಗೆ - 4%

>180 ದಿನಗಳಿಂದ -1 ಒಂದು ವರ್ಷದ ಒಳಗಿನ ಹೂಡಿಕೆಯ ಮೇಲೆ - 4.45%

>ಸಂಪೂರ್ಣ 1 ವರ್ಷದ ಅವಧಿಯ ಹೂಡಿಕೆಗೆ - 5.20%

>1 ವರ್ಷಕ್ಕಿಂತ ಹೆಚ್ಚು ಮತ್ತು 2 ವರ್ಷಕ್ಕಿಂತ ಕಡಿಮೆ - 5.20%

>2 ವರ್ಷಗಳು ಅಥವಾ ಹೆಚ್ಚು ಮತ್ತು 3 ವರ್ಷಗಳಿಗಿಂತ ಕಡಿಮೆ - 5.40%

>3 ವರ್ಷಗಳು ಅಥವಾ ಹೆಚ್ಚು ಮತ್ತು 5 ವರ್ಷಗಳಿಗಿಂತ ಕಡಿಮೆ - 5.50%

>5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಮತ್ತು 10 ವರ್ಷಗಳವರೆಗೆ - 5.50%

ಇದನ್ನು ಓದಿ- ವಾಟ್ಸಾಪ್‌ನಲ್ಲಿಯೇ ತೆರೆಯಿರಿ Fixed Deposit, ಇಲ್ಲಿದೆ ಅದನ್ನು ಬಳಸುವ ಸುಲಭ ವಿಧಾನ

ಹಿರಿಯ ನಾಗರಿಕರಿಗೆ ಬಡ್ಡಿದರ
ಈ ನೂತನ ಬಡ್ಡಿದರ ಪರಿಷ್ಕರಣೆಯ ನಂತರ ಹಿರಿಯ ನಾಗರಿಕರು 7 ದಿನಗಳಿಂದ ಹಿಡಿದು 10 ವರ್ಷಗಳ ಅವಧಿಗೆ ಎಫ್‌ಡಿ ಯಲ್ಲಿ ಶೇ .2.95 ರಿಂದ ಶೇ.6 ರವರೆಗೆ ಬಡ್ಡಿ (FD Interest Rate) ಪಡೆಯಲಿದ್ದಾರೆ. ಕೆನರಾ ಬ್ಯಾಂಕ್ ಹಿರಿಯ ನಾಗರಿಕರಿಗೆ 180 ದಿನಗಳಿಂದ 10 ವರ್ಷಗಳವರೆಗಿನ ಫಿಕ್ಸಡ್ ಡಿಪಾಸಿಟ್ ಮೇಲೆ 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚುವರಿ ಬಡ್ಡಿ ನೀಡುತ್ತದೆ. ಈ ಮೊದಲು 2020 ರ ನವೆಂಬರ್ 16 ರಂದು ಕೆನರಾ ಬ್ಯಾಂಕ್ ಎಫ್‌ಡಿ ಮೇಲಿನ ಬಡ್ಡಿದರಗಳನ್ನು ಪರಿಷ್ಕರಿಸಿರುವುದು ಇಲ್ಲಿ ಉಲ್ಲೇಖನೀಯ.

ಇದನ್ನು ಓದಿ- FDಗಳ ಮೇಲಿನ ಬಡ್ಡಿ ದರ ಇಳಿಕೆ ಮಾಡಿದ SBI

Fixed Deposit ಸಂಕ್ಷಿಪ್ತ ಮಾಹಿತಿ ಇಲ್ಲಿದೆ
ಯಾವುದೇ ಒಂದು ಬ್ಯಾಂಕಿನಲ್ಲಿ ನಿರ್ದಿಷ್ಟಸಮಯದವರೆಗೆ ಮಾಡಲಾಗುವ ಠೇವಣಿಯನ್ನು ಸ್ಥಿರ ಠೇವಣಿ ಎಂದು ಕರೆಯುತ್ತಾರೆ ಬ್ಯಾಂಕಿಂಗ್ ಭಾಷೆಯಲ್ಲಿ, ಜನರು ಇದನ್ನು ಸಾಮಾನ್ಯವಾಗಿ ಎಫ್‌ಡಿ ಎಂದು ಕರೆಯುತ್ತಾರೆ. ಎಫ್‌ಡಿ ಅತ್ಯಂತ ಸುರಕ್ಷಿತ ಮತ್ತು ಹೂಡಿಕೆಗೆ ಹೆಚ್ಚಿನ ಲಾಭ ನೀಡುವ ಯೋಜನೆ ಎಂದು ಪರಿಗಣಿಸಲಾಗಿದೆ. ನೀವು ಸಹ ಅಲ್ಪಾವಧಿಗೆ ಹೂಡಿಕೆ ಮಾಡಲು ಬಯಸಿದರೆ ಕೆನರಾ ಬ್ಯಾಂಕಿನ ಎಫ್‌ಡಿ ಯಲ್ಲಿ ಹೂಡಿಕೆ ಮಾಡುವುದು ಬಹಳ ಪ್ರಯೋಜನಕಾರಿ ಸಾಬೀತಾಗಬಹುದು.

ಇದನ್ನು ಓದಿ - ಕೇವಲ 6 ತಿಂಗಳವರೆಗೆ ಎಫ್‌ಡಿ ಮಾಡಿದರೂ ಈ ಬ್ಯಾಂಕುಗಳಲ್ಲಿ ಸಿಗುತ್ತಿದೆ ಉತ್ತಮ ಲಾಭ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News