EPFO Latest News: PFಗೆ ಸಂಬಂಧಿಸಿದ ಈ ದೊಡ್ಡ ಅಡಚಣೆ ಇದೀಗ ನಿವಾರಣೆಯಾಗಿದೆ

EPFO Latest News - ಉದ್ಯೋಗಿಗಳು ನೌಕರಿಯನ್ನು ತೋರೆದಾಗ ಅವರ ಮುಂದೆ ಒಂದು ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಏಕೆಂದರೆ ನೌಕರಿ ತೊರೆದ ಬಳಿಕ EPF ಖಾತೆಯ ಮಾಹಿತಿ ಹೇಗೆ ನವೀಕರಿಸುವುದು ಎಂಬುದು ಅವರ ಮುಂದಿನ ಸಮಸ್ಯೆ.

Written by - Nitin Tabib | Last Updated : Feb 8, 2021, 03:29 PM IST
  • ನೌಕರಿ ತೊರೆದ ಬಳಿಕ ಉದ್ಯೋಗಿಗಳ ಮುಂದೆ ಒಂದು ದೊಡ್ಡ ಸಮಸ್ಯೆ ಎದುರಾಗುತ್ತದೆ.
  • ಈ ಮಾಹಿತಿಯನ್ನು EPFO ಕಚೇರಿಯಲ್ಲಿ ಹೇಗೆ ನವೀಕರಿಸಬೇಕು.
  • ಈ ಕೆಲಸವನ್ನು ನೀವು ಮನೆಯಿಂದಲೇ ಹೇಗೆ ಮಾಡಬೇಕು ತಿಳಿಯೋಣ ಬನ್ನಿ.
EPFO Latest News: PFಗೆ ಸಂಬಂಧಿಸಿದ ಈ ದೊಡ್ಡ ಅಡಚಣೆ ಇದೀಗ ನಿವಾರಣೆಯಾಗಿದೆ  title=
EPFO Latest News (File Photo)

ನವದೆಹಲಿ :  EPFO Latest News - ಉದ್ಯೋಗಿಗಳು ನೌಕರಿಯನ್ನು ತೋರೆದಾಗ ಅವರ ಮುಂದೆ ಒಂದು ದೊಡ್ಡ ಸಮಸ್ಯೆಯೇ ಎದುರಾಗುತ್ತದೆ. ಏಕೆಂದರೆ ನೌಕರಿ ತೊರೆದ ಬಳಿಕ EPF ಖಾತೆಯ ಮಾಹಿತಿ ಹೇಗೆ ನವೀಕರಿಸುವುದು ಎಂಬುದು ಅವರ ಮುಂದಿನ ಸಮಸ್ಯೆ. ಆದರೆ, ಇದೀಗ ಅವರ ಈ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದ್ದು, ಇದಕ್ಕಾಗಿ ನೌಕರರು ಎಲ್ಲಿಯೂ ಹೋಗಬೇಕಾದ ಅವಶ್ಯಕತೆ ಇಲ್ಲ.

ಒಂದು ವೇಳೆ ನೀವೂ ಕೂಡ ಇದ್ದಕ್ಕಿದ್ದಂತೆ ಕೆಲಸ ಅಥವಾ ಉದ್ಯೋಗ ತೊರೆದಿದ್ದರೆ, ನಿಮ್ಮ ಹಿಂದಿನ ಉದ್ಯೋಗದಿಂದ ನೀವು ನಿರ್ಗಮಿಸುವ ದಿನಾಂಕ ಅಥವಾ ಕೆಲಸವನ್ನು ಆನ್‌ಲೈನ್‌ನಲ್ಲಿ ತೊರೆದ ದಿನಾಂಕವನ್ನು ನವೀಕರಿಸಬಹುದು. ಭವಿಷ್ಯ ನಿಧಿಯನ್ನು (Provident Fund) ನಿರ್ವಹಿಸುವ ಸಂಸ್ಥೆ ಇಪಿಎಫ್‌ಒ ಈ ಮಾಹಿತಿಯನ್ನು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದೆ. ಇದರಲ್ಲಿ ಆನ್ಲೈನ್ ಆನ್‌ಲೈನ್ ಮಾರ್ಗಗಳನ್ನು ಸೂಚಿಸಲಾಗಿದೆ.

ಈ ರೀತಿ ಆನ್ಲೈನ್ ನಲ್ಲಿ ಅಪ್ಡೇಟ್ ಮಾಡಿ
1. ಎಲ್ಲಕ್ಕಿಂತ ಮೊದಲು https://unifiedportal-mem.epfindia.gov.in/memberinterface/ ಪೋರ್ಟಲ್‌ನಲ್ಲಿ ಯುಎಎನ್ ಮತ್ತು ಪಾಸ್‌ವರ್ಡ್‌ನೊಂದಿಗೆ ಮೊದಲು ಲಾಗಿನ್ ಮಾಡಿ.

2. ಲಾಗಿನ್ ಆದ ನಂತರ, Manageಗೆ ಹೋಗಿ Mark Exit ಕ್ಲಿಕ್ ಮಾಡಿ. ಡ್ರಾಪ್ ಡೌನ್ ಅಡಿಯಲ್ಲಿ, select employmentದಿಂದ PF Account Number ಆಯ್ಕೆ ಮಾಡಿ

3. ಇದರ ನಂತರ,  Date of Exit ಹಾಗೂ  Reason of exit ಕ್ಲಿಕ್ ಮಾಡಿ. ನಂತರ Request OTP ಕ್ಲಿಕ್ ಮಾಡಿ ಮತ್ತು ಒನ್ ಟೈಮ್ ಪಾಸ್ವರ್ಡ್ ಅನ್ನು ನಮೂದಿಸಿ, ಅಂದರೆ ಆಧಾರ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆಯಲ್ಲಿ ಒಟಿಪಿ ಬರಲಿದೆ. ಈಗ ಚೆಕ್ ಬಾಕ್ಸ್ ಆಯ್ಕೆಮಾಡಿ.

4. ಇದರ ನಂತರ, update ಮೇಲೆ ಕ್ಲಿಕ್ ಮಾಡಿ ಮತ್ತು OK ಕ್ಲಿಕ್ ಮಾಡಿ. ಇದನ್ನು ಮಾಡಿದ ತಕ್ಷಣ, ನಿಮ್ಮ Date of Exit ನವೀಕರಿಸಲಾಗುತ್ತದೆ.

ಇದನ್ನು ಓದಿ- Investment In Gold - ಚಿನ್ನದಲ್ಲಿ ಹೂಡಿಕೆ ಮಾಡಲು ಇದೆ ಸರಿಯಾದ ಸಮಯ, ಯಾವ ಆಪ್ಶನ್ ನಲ್ಲಿನ ಹೂಡಿಕೆ ಹೆಚ್ಚು ಲಾಭದಾಯಕ

ಮನೆಯಿಂದಲೇ ಲೈಫ್ ಸರ್ಟಿಫಿಕೆಟ್ ಸಲ್ಲಿಸಿ
ನೀವು ಪಿಂಚಣಿದಾರರಾಗಿದ್ದರೆ, ನಿಮ್ಮ ಹತ್ತಿರದ ಅಂಚೆ ಕಚೇರಿ ಅಥವಾ ಪೋಸ್ಟ್‌ಮ್ಯಾನ್ ಪೋಸ್ಟ್ ಸೇವಕರಿಂದ ನೀವು ಜೀವನ ಪ್ರಮಾಣಪತ್ರವನ್ನು ಸಲ್ಲಿಸಬಹುದು. ಈ ಸೌಲಭ್ಯದ ಲಾಭ ಪಡೆಯಲು, http://ccc.cept.gov.in/covid/request.aspx ವೆಬ್‌ಸೈಟ್‌ಗೆ ಭೇಟಿ ನೀಡಿ.

ಇದನ್ನು ಓದಿ- Cheapest Recharge Plans - ರೂ.200ಕ್ಕೂ ಕಮ್ಮಿ ಬೆಲೆಗೆ ಉಚಿತ ಕರೆ, 42 GB ಡೇಟಾ

ಇಲ್ಲಿ ಸೇವೆಗಳ ಟ್ಯಾಬ್ ಅಡಿಯಲ್ಲಿ IPPB ಆಯ್ಕೆ ಮಾಡಿ ಮತ್ತು ನಂತರ IPPB Service type ಟ್ಯಾಬ್ ಅಡಿಯಲ್ಲಿ ಜೀವನ್ ಪ್ರಮಾಣೀಕರಣಕ್ಕಾಗಿ  ಜನರೇಶನ್ ಆರಿಸಿ. ಇದು ನಿಮ್ಮನ್ನು ಸರದಿಯಿಂದ ಹೊರಗುಳಿಯಲು ನಿಮಗೆ ಸಹಕರಿಸುತ್ತದೆ ಹಾಗೂ ನಿಮ್ಮ ಅಮೂಲ್ಯ ಸಮಯವನ್ನು ಸಹ ಉಳಿಸುತ್ತದೆ. ವರ್ಷಪೂರ್ತಿ ಪಿಂಚಣಿದಾರರು ತಮ್ಮ ಜೀವನ ಪ್ರಮಾಣಪತ್ರವನ್ನು ನೀಡಬಹುದು.

ಇದನ್ನು ಓದಿ- Latest FD Interest Rate - FD ಮೇಲೆ ಇಂದಿನಿಂದ ಸಿಗುತ್ತಿದೆ ಹೆಚ್ಚುವರಿ ಬಡ್ಡಿ, 1 ವರ್ಷಕ್ಕಿಂತ ಕಡಿಮೆ ಅವಧಿಯ ಹೂಡಿಕೆ ಲಾಭದಾಯಕ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News