ನವದೆಹಲಿ: 7th Pay Commission Latest News Today - ದೀರ್ಘಕಾಲದಿಂದ ನಿರೀಕ್ಷೆಯಲ್ಲಿದ್ದ ಸರ್ಕಾರಿ ನೌಕರರು ಹಾಗೂ ಪಿಂಚಣಿದಾರರಿಗೆ ಅವರ ಹೆಚ್ಚಿನ ತುಟ್ಟಿ ಭತ್ಯೆ ಲಭಿಸಿದೆ. ಆದರೆ, ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ವೇದಿಕೆಯಲ್ಲಿ ನಿರಾಶೆ ಲಭಿಸಿದಂತಾಗಿದೆ. ಹೌದು, ಕೇಂದ್ರ ಸರ್ಕಾರ ನೌಕರರ ಮೂಲ ಮಾಸಿಕ ವೇತನ ಹೆಚ್ಚಿಸುವುದಕ್ಕೆ ನಿರಾಕರಿಸಿದೆ. ಅಂದರೆ, ಇದೀಗ ಕೇಂದ್ರ ಸರ್ಕಾರಿ ನೌಕರರ ಮಂಥಲಿ ಬೇಸಿಕ್ ಸ್ಯಾಲರಿಯಲ್ಲಿ ಯಾವುದೇ ವೃದ್ಧಿಯಾಗುವುದಿಲ್ಲ.


COMMERCIAL BREAK
SCROLL TO CONTINUE READING

Basic Pay ವೃದ್ಧಿಯ ಮೇಲೆ ಯಾವುದೇ ಯೋಚನೆ ಇಲ್ಲ
ಈ ಕುರಿತು ಕೇಳಲಾಗಿರುವ ಲಿಖಿತ ಉತ್ತರ ನೀಡಿರುವ ಕೇಂದ್ರ ಹಣಕಾಸು ರಾಜ್ಯ ಸಚಿವ ಪಂಕಜ್ ಚೌಧರಿ, ಕೇಂದ್ರ ಸರ್ಕಾರ ಇಂತಹ ಯಾವುದೇ ಯೋಜನೆಯ ಮೇಲೆ ಚಿಂತನೆ ನಡೆಸುತ್ತಿಲ್ಲ ಎಂದಿದ್ದಾರೆ. 7 ನೇ ಕೇಂದ್ರೀಯ ವೇತನ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಪರಿಷ್ಕೃತ ವೇತನ ರಚನೆಯಲ್ಲಿ ವೇತನವನ್ನು ನಿಗದಿಪಡಿಸುವ ಉದ್ದೇಶದಿಂದ ಮಾತ್ರ 2.57 ರ ಫಿಟ್ಮೆಂಟ್ ಅಂಶವನ್ನು ಎಲ್ಲಾ ವರ್ಗದ ಉದ್ಯೋಗಿಗಳಿಗೆ ಏಕರೂಪವಾಗಿ ಜಾರಿಗೊಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.


7 ನೆ ವೇತನ ಆಯೋಗ ಶಿಫಾರಸುಗಳ ಆಧಾರದ ಮೇಲೆ ಫಿಟ್ಮೆಂಟ್ ಅಂಶದ ಪ್ರಕಾರ ಡಿಯರ್ನೆಸ್ ಭತ್ಯೆ ಮತ್ತು ಡಿಯರ್ನೆಸ್ ಪರಿಹಾರವನ್ನು ಮರುಸ್ಥಾಪಿಸಿದ ನಂತರ ಕೇಂದ್ರ ಸರ್ಕಾರವು ಈಗ ನೌಕರರ ಮಾಸಿಕ ಮೂಲ ವೇತನವನ್ನು ಹೆಚ್ಚಿಸಲು ಸಕ್ರಿಯವಾಗಿ ಪರಿಗಣಿಸುತ್ತಿದೆಯೇ ಎಂದು ರಾಜ್ಯ ಹಣಕಾಸು ಸಚಿವರಿಗೆ ಪ್ರಶ್ನೆಯನ್ನು ಕೇಳಲಾಗಿತ್ತು.


ಇನ್ಮುಂದೆ DA ಶೇ.31 ರಷ್ಟು ಆಗಲಿದೆ
ಈ ಮೊದಲು ಕೇಂದ್ರ ಉದ್ಯೋಗಿಗಳು 17% ಡಿಎ ಪಡೆಯುತ್ತಿದ್ದರು. ಜುಲೈ 1, 2021 ರಿಂದ ಇದನ್ನು 28%ಕ್ಕೆ ಹೆಚ್ಚಿಸಲಾಗಿದೆ. ಜನವರಿ 2020 ರಲ್ಲಿ ಡಿಎ ಅನ್ನು ಶೇ.4, ನಂತರ ಜೂನ್ 2020 ರಲ್ಲಿ ಶೇ.3 ಮತ್ತು ಜನವರಿ 2021 ರಲ್ಲಿ ಶೇ. 4 ರಷ್ಟು ಹೆಚ್ಚಿಸಲಾಗಿದೆ. ಇದೀಗ ಈ ಮೂರು ಕಂತುಗಳನ್ನು ಪಾವತಿಸಲಾಗಿದೆ. ಆದರೆ, ಉದ್ಯೋಗಿಗಳು ಇನ್ನೂ 2021 ರ ಜೂನ್ ಭತ್ಯೆಯ ದತ್ತಾಂಶಕ್ಕಾಗಿ ಕಾಯುತ್ತಿದ್ದಾರೆ.


ಇದನ್ನೂ ಓದಿ-New Wage Code: ಉದ್ಯೋಗಿಗಳಿಗೆ ವಾರದಲ್ಲಿ 3 ದಿನ ರಜೆ ಮತ್ತು ಗರಿಷ್ಠ 12 ಗಂಟೆ ಕೆಲಸ


ಈ ಡೇಟಾವನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಮೂಲಗಳು ಹೇಳಿವೆ. ಎಐಸಿಪಿಐನ ಮಾಹಿತಿಯ ಪ್ರಕಾರ, 7 ನೇ ವೇತನ ಆಯೋಗದ ಅಡಿಯಲ್ಲಿ 2021 ರ ಜೂನ್‌ನಲ್ಲಿ ಬಡ್ಡಿ ಭತ್ಯೆಯಲ್ಲಿ ಶೇಕಡಾ 3 ರಷ್ಟು ಹೆಚ್ಚಳವಾಗಲಿದೆ. ಇದು ಸಂಭವಿಸಿದಲ್ಲಿ, ಒಟ್ಟು DA ಶೇ.31 ರಷ್ಟು ಹೆಚ್ಚಾಗಲಿದೆ. 31% ಅನ್ನು ಸೆಪ್ಟೆಂಬರ್ ಸಂಬಳದೊಂದಿಗೆ ಪಾವತಿಸಲಾಗುತ್ತಿದೆ. 


ಇದನ್ನೂ ಓದಿ-Panchajanya On Amazon: Infosys ಬಳಿಕ ಇದೀಗ Amazon ಅನ್ನು East India Company 2.0' ಎಂದ RSS ಪತ್ರಿಕೆ


DA ಜೊತೆಗೆ HRA ಕೂಡ ಹೆಚ್ಚಿಸಲಾಗುವುದು
ಅಷ್ಟೇ ಅಲ್ಲ ಭತ್ಯೆಯನ್ನು ಹೆಚ್ಚಿಸುವುದರ ಜೊತೆಗೆ, ಕೇಂದ್ರ ನೌಕರರ ಮನೆ ಬಾಡಿಗೆ ಭತ್ಯೆಯನ್ನು (HRA) ಹೆಚ್ಚಿಸಲು ಸರ್ಕಾರ ಆದೇಶಿಸಿದೆ. ನಿಯಮಗಳ ಪ್ರಕಾರ, HRA ಅನ್ನು ಹೆಚ್ಚಿಸಲಾಗಿದೆ. ಏಕೆಂದರೆ, ಭತ್ಯೆ 25%ಮೀರಿದೆ. ಆದ್ದರಿಂದ, ಕೇಂದ್ರ ಸರ್ಕಾರವು ಮನೆ ಬಾಡಿಗೆ ಭತ್ಯೆಯನ್ನು 27%ಕ್ಕೆ ಹೆಚ್ಚಿಸಿದೆ.


ಇದನ್ನೂ ಓದಿ-Aadhaar-Ration Link:ಮನೆಯಲ್ಲಿಯೇ ಕುಳಿತು ಕೆಲವೇ ನಿಮಿಷಗಳಲ್ಲಿ Aadhaar-Ration Card Link ಮಾಡಿ, ಸಿಗಲಿವೆ ಈ ಲಾಭಗಳು


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.