PM Kisan ಯೋಜನೆ ಮೂಲಕ 8.89 ಕೋಟಿ ಜನರ ಖಾತೆಗೆ ಹಣ
ಕರೋನವೈರಸ್ ಸೋಂಕನ್ನು ತಡೆಗಟ್ಟುವ ದೃಷ್ಟಿಯಿಂದ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ ಇದೆ. ಆದರೆ ಕೃಷಿಗೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
ನವದೆಹಲಿ: ಕರೋನವೈರಸ್‌ನಿಂದಾಗಿ ದೇಶಾದ್ಯಂತ ಜಾರಿಯಲ್ಲಿರುವ ಲಾಕ್‌ಡೌನ್ ಮಧ್ಯೆ ಕೇಂದ್ರ ಸರ್ಕಾರದ ವಿಶೇಷ ಯೋಜನೆಯಾದ ಪಿಎಂ-ಕಿಸಾನ್ ಯೋಜನೆ (PM Kisan Yojana) ಯಿಂದ ಸುಮಾರು 8.89 ಕೋಟಿ ರೈತ ಕುಟುಂಬಗಳ ಬ್ಯಾಂಕ್ ಖಾತೆಗಳಿಗೆ ಇದುವರೆಗೆ 17,793 ಕೋಟಿ ರೂ. ಹಣ ಜಮಾ ಮಾಡಲಾಗಿದೆ. ಐಎಎನ್‌ಎಸ್ ಸುದ್ದಿಯ ಪ್ರಕಾರ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವಾಲಯದ ಅಧೀನದಲ್ಲಿರುವ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆ ಈ ಮಾಹಿತಿಯನ್ನು ನೀಡಿದೆ.
ಕೃಷಿ ಸಂಬಂಧಿತ ಯೋಜನೆಗಳ ಪ್ರಯೋಜನಗಳನ್ನು ರೈತರಿಗೆ (Farmers) ವಿಸ್ತರಿಸುತ್ತಿರುವ ಸರ್ಕಾರ ಇದರ ಅಡಿಯಲ್ಲಿ ಮಾರ್ಚ್ 24 ರಿಂದ ಪಿಎಂ ಕಿಸಾನ್ ಯೋಜನೆಯ 8.89 ಕೋಟಿ ಫಲಾನುಭವಿಗಳ ಖಾತೆಗಳಿಗೆ 17,793 ಕೋಟಿ ರೂ. ಹಣ ವರ್ಗಾವಣೆ ಮಾಡಿದೆ. ಇದಲ್ಲದೆ ರೈತರಿಗಾಗಿ ಅನುಕೂಲತೆಗಳನ್ನು ಕಲ್ಪಿಸಲು ಇನ್ನೂ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದೆ.
* ಕೃಷಿಗೆ ಸಂಬಂಧಿಸಿದ ಕೆಲಸಕ್ಕೆ ವಿನಾಯಿತಿ:
ಕರೋನವೈರಸ್ ಸೋಂಕನ್ನು ತಡೆಗಟ್ಟುವ ದೃಷ್ಟಿಯಿಂದ ದೇಶದಲ್ಲಿ ಸಂಪೂರ್ಣ ಲಾಕ್‌ಡೌನ್ (Lockdown) ಇದೆ. ಆದರೆ ಕೃಷಿಗೆ ಸಂಬಂಧಿಸಿದ ಕೆಲಸವನ್ನು ಮುಂದುವರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.
* ರಾಜ್ಯಗಳಿಗೆ ದ್ವಿದಳ ಧಾನ್ಯ ಸರಬರಾಜು:
ಪಿಎಂ ಗರಿಬ್ ಕಲ್ಯಾಣ್ ಯೋಜನೆ ಕಲ್ಯಾಣ ಯೋಜನೆ ಅಡಿಯಲ್ಲಿ ಘೋಷಿಸಲಾದ ದ್ವಿದಳ ಧಾನ್ಯಗಳ ವಿತರಣೆಗಾಗಿ ಸುಮಾರು 1,07,077.85 ಟನ್ ದ್ವಿದಳ ಧಾನ್ಯಗಳನ್ನು ರಾಜ್ಯಗಳಿಗೆ ಕಳುಹಿಸಲಾಗಿದೆ ಎಂದು ಇಲಾಖೆ ಮಾಹಿತಿ ನೀಡಿದೆ. ಕೇಂದ್ರ ಸರ್ಕಾರದ ಸಂಸ್ಥೆ ಕೃಷಿ ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಬರುವ ನಾಫ್ಡ್ ಮಸೂರವನ್ನು ಸಂಗ್ರಹಿಸುತ್ತದೆ.
* 19.50 ಕೋಟಿ ಕುಟುಂಬಗಳಿಗೆ ಸಿಗಲಿದೆ ದ್ವಿದಳ ಧಾನ್ಯ :
ಈ ಯೋಜನೆಯಡಿ ದೇಶಾದ್ಯಂತ 19.50 ಕೋಟಿ ಕುಟುಂಬಗಳಿಗೆ ದ್ವಿದಳ ಧಾನ್ಯಗಳನ್ನು ವಿತರಿಸಲಾಗುವುದು. ಕೊರೊನಾವೈರಸ್ (Coronavirus) ಸೋಂಕನ್ನು ನಿಗ್ರಹಿಸಲು ರಾಷ್ಟ್ರವ್ಯಾಪಿ ಬಂದ್ ಜಾರಿಗೆ ತಂದ ನಂತರ ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಎದುರಿಸಲು ಸರ್ಕಾರವು 1.70 ಲಕ್ಷ ಕೋಟಿ ರೂ.ಗಳ ಪ್ರಧಾನ ಮಂತ್ರಿಗಳ ಗರೀಬ್ ಕಲ್ಯಾಣ ಪ್ಯಾಕೇಜ್ ಘೋಷಿಸಿತು.
ಇದರ ಅಡಿಯಲ್ಲಿ ಪ್ರಧಾನ್ ಮಂತ್ರಿ ಗರಿಬ್ ಕಲ್ಯಾಣ್ ಯೋಜನೆ (Pradhan Mantri Garib Kalyan Yojana)ಯ ಮೂಲಕ ದೇಶದ ಪ್ರತಿ ಪಡಿತರ ಚೀಟಿ ಹೊಂದಿರುವ ಕುಟುಂಬವು ಮುಂದಿನ ಮೂರು ತಿಂಗಳವರೆಗೆ ಪಿಡಿಎಸ್‌ನ ಪ್ರತಿ ಫಲಾನುಭವಿಗಳಿಗೆ ಪ್ರತಿ ತಿಂಗಳು ಒಂದು ಕೆಜಿ ದ್ವಿದಳ ಧಾನ್ಯ ಮತ್ತು ಐದು ಕೆಜಿ ಆಹಾರ ಧಾನ್ಯಗಳನ್ನು ನೀಡುವುದಾಗಿ ಘೋಷಿಸಿದೆ.