ಸಿದ್ಧಾರ್ಥ್-ಕಿಯಾರ ಮದುವೆಯಾದ ಅರಮನೆಯ ಬಳಿಯೇ ಇತ್ತು ದೆವ್ವದ ಗ್ರಾಮ: ಬೆಚ್ಚಿಬೀಳಿಸುವಂತಿದೆ ಇಲ್ಲಿನ ಕಥೆ!
Kuldhara haunted Village: ಮರುಭೂಮಿಯ ಭವ್ಯವಾದ ನೋಟವನ್ನು ನೀಡುವ ಫೋರ್ಟ್ರೆಸ್ ಹೋಟೆಲ್ ಆಧುನಿಕತೆಯ ಜೊತೆಗೆ ಪ್ರಾಚೀನತೆಯ ಸ್ಪರ್ಶವನ್ನು ಕಾಪಾಡಿಕೊಂಡು ಇಂದಿಗೂ ಬಂದಿದೆ. ಇವೆಲ್ಲದರ ಅನೇಕರ ಗಮನವನ್ನು ಸೆಳೆದದ್ದು ಮಾತ್ರ ಅರಮನೆಯ ಪಕ್ಕದಲ್ಲಿರುವ ಕುಲಧಾರ ಗ್ರಾಮ.
Kuldhara haunted Village: ಬಾಲಿವುಡ್ ಸ್ಟಾರ್ ಜೋಡಿ ಕಿಯಾರಾ ಅಡ್ವಾಣಿ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಜೈಸಲ್ಮೇರ್‌ನ ಸೂರ್ಯಗಢ ಅರಮನೆಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ರಾಜಸ್ಥಾನದ ಥಾರ್ ಮರುಭೂಮಿಯ ಹೃದಯಭಾಗದಲ್ಲಿರುವ ಸೂರ್ಯಗಢವು ಪ್ರಾಚೀನ ಆಕರ್ಷಣೆ ಮತ್ತು ಶುದ್ಧ ಐಷಾರಾಮಿಗಳ ಸಮ್ಮಿಲನವಾಗಿದೆ.
ಇದನ್ನೂ ಓದಿ: Funny Video: ಆಂಟಿಗೆ ಪ್ರೊಪೋಸ್ ಮಾಡಿದ ಪೋರ! ಕನಸಲ್ಲೂ ಊಹಿಸದ ಉತ್ತರ ಕೊಟ್ಟ ಮಹಿಳೆ
ಮರುಭೂಮಿಯ ಭವ್ಯವಾದ ನೋಟವನ್ನು ನೀಡುವ ಫೋರ್ಟ್ರೆಸ್ ಹೋಟೆಲ್ ಆಧುನಿಕತೆಯ ಜೊತೆಗೆ ಪ್ರಾಚೀನತೆಯ ಸ್ಪರ್ಶವನ್ನು ಕಾಪಾಡಿಕೊಂಡು ಇಂದಿಗೂ ಬಂದಿದೆ. ಇವೆಲ್ಲದರ ಅನೇಕರ ಗಮನವನ್ನು ಸೆಳೆದದ್ದು ಮಾತ್ರ ಅರಮನೆಯ ಪಕ್ಕದಲ್ಲಿರುವ ಕುಲಧಾರ ಗ್ರಾಮ.
ಜೈಸಲ್ಮೇರ್‌ನ ಪಶ್ಚಿಮಕ್ಕೆ 17 ಕಿಮೀ ದೂರದಲ್ಲಿರುವ ಕುಲಧಾರಾ ಒಂದು ಭೂತ ಗ್ರಾಮವಾಗಿದೆ. ಒಂದು ಕಾಲದಲ್ಲಿ ಇದು ಪಲಿವಾಲ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಸಮೃದ್ಧ ಗ್ರಾಮವಾಗಿತ್ತು ಎಂದು ಈ ಸ್ಥಳಕ್ಕೆ ಸಂಬಂಧಿಸಿದ ಜಾನಪದ ಕಥೆಗಳು ಹೇಳುತ್ತವೆ.
ದುರದೃಷ್ಟವಶಾತ್, ರಾಜ್ಯದ ಅಂದಿನ ಪ್ರಧಾನ ಮಂತ್ರಿ ಸಲೀಂ ಸಿಂಗ್ ಎಂಬಾತ ಗ್ರಾಮದ ಮುಖ್ಯಸ್ಥನ ಮಗಳನ್ನು ಬಲವಂತವಾಗಿ ಮದುವೆಯಾಗುವ ಬಯಕೆಯನ್ನು ವ್ಯಕ್ತಪಡಿಸಿದಾಗ ಗ್ರಾಮದ ಭವಿಷ್ಯವು ವಿಭಿನ್ನ ತಿರುವು ಪಡೆದುಕೊಂಡಿತು. ಗ್ರಾಮ ಮತ್ತು ಅಲ್ಲಿನ ಜನರ ಮೇಲೆ ಸಲೀಂ ಸಿಂಗ್ ಒಡ್ಡಿದ ಭೀಕರ ಬೆದರಿಕೆಗಳಿಗೆ ಹೆದರುವ ಬದಲು, ಗ್ರಾಮಸ್ಥರು ಸಭೆಗಾಗಿ ಒಟ್ಟುಗೂಡಿದರು. ಈ ವೇಳೆ ತಮ್ಮ ಪೂರ್ವಜರ ಮನೆಗಳನ್ನು ಬಿಟ್ಟು ಓಡಿಹೋಗಲು ನಿರ್ಧರಿಸಿದರು. ಹಳ್ಳಿಯಿಂದ ಸಂಪೂರ್ಣವಾಗಿ ಕಣ್ಮರೆಯಾಗುವ ಮೊದಲು, ಪಲಿವಾಲ್ ಬ್ರಾಹ್ಮಣರು ಕುಲಧಾರ ಗ್ರಾಮಕ್ಕೆ ಶಾಪವನ್ನು ನೀಡಿದರು. ಆ ಶಾಪವೇನೆಂದರೆ, “ತಮ್ಮ ಭೂಮಿಯಲ್ಲಿ ಯಾರೂ ಕೂಡ ನೆಲೆಸುವಂತಾಗಬಾರದು” ಎಂದು.
ಅಂದಿನಿಂದ 300 ವರ್ಷಗಳ ಕಾಲ ಈ ಭೂಮಿ ಬಂಜರು ಮತ್ತು ಜನವಸತಿಯಿಲ್ಲದೆ ಉಳಿದಿದೆ. ಇನ್ನೊಂದೆಡೆ ಆ ಪ್ರದೇಶದಲ್ಲಿನ ಅಧಿಸಾಮಾನ್ಯ ವಿಚಾರಗಳು ಮುನ್ನೆಲೆಗೆ ಬರುತ್ತಿದ್ದಂತೆ, ಗ್ರಾಮದಲ್ಲಿ ಉಳಿಯಲು ಪ್ರಯತ್ನಿಸಿದವರು ತಕ್ಷಣವೇ ಖಾಲಿ ಮಾಡಲು ಮುಂದಾದರು.
ಇದನ್ನೂ ಓದಿ: ಫೆಬ್ರುವರಿ 14 ರ ಗೋವು ಅಪ್ಪುಗೆ ನಿರ್ಧಾರ ವಾಪಸ್ ಪಡೆದ ಕೇಂದ್ರ
ಪಲಿವಾಲ್ ಬ್ರಾಹ್ಮಣರು ಗ್ರಾಮದಿಂದ ಕಣ್ಮರೆಯಾಗಲು ಇತರ ಕಥೆಗಳು ಇವೆ. ಆದರೆ ಭೂತದ ಕಥೆಯು ಹೆಚ್ಚಿನ ಜನರನ್ನು ಆಕರ್ಷಿಸಿವೆ. ಇನ್ನೊಂದೆಡೆ ಬಾಲಿವುಡ್ ಜೋಡಿಗಳು ಸೂರ್ಯಗಢ ಅರಮನೆಯಲ್ಲಿ ಮದುವೆಯಾಗುತ್ತಿದ್ದಾರೆ ಎಂದೊಡನೆ, ಅನೇಕರ ಗಮನ, ಕುಲಧಾರಾ ಗ್ರಾಮದ ಕಡೆ ಹರಿದಿದೆ ಎನ್ನಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.