ನವದೆಹಲಿ: ಪ್ರೇಮಿಗಳ ದಿನದಂದು ಜನರು ಹಸುವನ್ನು ತಬ್ಬಿಕೊಳ್ಳಬೇಕು ಎಂಬ ಸರ್ಕಾರಿ ಸಂಸ್ಥೆಯ ಮನವಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ವ್ಯಕ್ತವಾದ ಹಿನ್ನೆಲೆಯಲ್ಲಿ ಈಗ ಈ ನಿರ್ಧಾರವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ.
ಇದನ್ನೂ ಓದಿ: KKRTC : ಕೆಕೆಆರ್‌ಟಿಸಿ ಕಂಡಕ್ಟರ್ ಆಗಲು ಅಭ್ಯರ್ಥಿಗಳ ಖತರ್ನಾಕ್ ಐಡಿಯಾ!
ಬುಧವಾರದ ಮನವಿಯಲ್ಲಿ, ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಪ್ರೇಮಿಗಳ ದಿನದಂದು ಹಸುವನ್ನು ತಬ್ಬಿಕೊಳ್ಳುವುದರ ಕುರಿತು ತನ್ನ ಸಲಹೆಯನ್ನು ಬೆಂಬಲಿಸುತ್ತದೆ, ಅದು ಭಾವನಾತ್ಮಕ ಶ್ರೀಮಂತಿಕೆ ಮತ್ತು ವೈಯಕ್ತಿಕ ಮತ್ತು ಸಾಮೂಹಿಕ ಸಂತೋಷ ಅನ್ನು ಹೆಚ್ಚಿಸುತ್ತದೆ ಎಂದು ಹೇಳಿತ್ತು.ಪ್ರಾಣಿ ಕಲ್ಯಾಣ ಮಂಡಳಿಯು ಬಿಜೆಪಿಯ ಪರಶೋತ್ತಮ್ ರೂಪಲಾ ಅವರ ನೇತೃತ್ವದ ಪಶುಸಂಗೋಪನೆ ಸಚಿವಾಲಯದ ಅಡಿಯಲ್ಲಿ ಬರುತ್ತದೆ.
The appeal issued by the Animal Welfare Board of India for celebration of Cow Hug Day on 14th February 2023 stands withdrawn. pic.twitter.com/5MvEbHPdBZ
— ANI (@ANI) February 10, 2023
ಇದನ್ನೂ ಓದಿ: ಬಿಜೆಪಿ ಜಾತಿ ಆಧಾರದ ಮೇಲೆ ಸಿಎಂ ಆಯ್ಕೆ ಮಾಡಲ್ಲ: ಶಾಸಕ ರಘುಪತಿ ಭಟ್
ಈಗ ತನ್ನ ನಿರ್ಧಾರವನ್ನು ಹಿಂಪಡೆದಿರುವ ಸರ್ಕಾರ "ಸಕ್ಷಮ ಪ್ರಾಧಿಕಾರ ಮತ್ತು ಮೀನುಗಾರಿಕೆ, ಪಶುಸಂಗೋಪನೆ ಮತ್ತು ಹೈನುಗಾರಿಕೆ ಸಚಿವಾಲಯದ ನಿರ್ದೇಶನದಂತೆ, ಫೆಬ್ರವರಿ 14 ರಂದು ಹಸು ನರ್ತನ ದಿನವನ್ನು ಆಚರಿಸಲು ಭಾರತೀಯ ಪ್ರಾಣಿ ಕಲ್ಯಾಣ ಮಂಡಳಿಯು ಹೊರಡಿಸಿದ ಮನವಿಯನ್ನು ಹಿಂಪಡೆಯಲಾಗಿದೆ" ಎಂದು ಮಂಡಳಿಯ ಕಾರ್ಯದರ್ಶಿ ಎಸ್‌ಕೆ ದತ್ತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.