college boy love proposal to a woman: ಪ್ರೀತಿಗೆ ಯಾವುದೇ ಲಿಂಗ, ವಯಸ್ಸು, ಜಾತಿ, ಜನಾಂಗ ಮತ್ತು ಧರ್ಮದ ಭೇದ ಭಾವ ಇಲ್. ಮನಸ್ಸು ಇಚ್ಛಿಸಿದ ತಕ್ಷಣ ಪ್ರೇಮದಲ್ಲಿ ಬೀಳುವ ಕಾಲವಿದು. ಇನ್ನು ಯಾವುದೇ ವ್ಯಕ್ತಿ ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಅಪರಾಧವಲ್ಲ. ಆದರೆ ಹಾಗೆ ಮಾಡುವ ಮೊದಲು ಅದರ ಪರಿಣಾಮಗಳನ್ನು ಕೊಂಚ ಪರಿಗಣಿಸಿದರೆ ಒಳಿತು.
ಇದನ್ನೂ ಓದಿ: Cow hug day : ಕೇಳಿ ಪ್ರೇಮಿಗಳೇ.. ʼವ್ಯಾಲೆಂಟೈನ್ಸ್ ಡೇʼ ಬಿಟ್ಟು ʼಹಸು ಅಪ್ಪುಗೆ ದಿನʼ ಆಚರಿಸಿ..!
ಕಾಲೇಜು ಹುಡುಗನೊಬ್ಬ ಮಹಿಳೆಯ ಮೇಲಿರುವ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾನೆ. ಆದರೆ ಆ ಬಳಿಕ ಆತ ಎದುರಿಸಿದ ಪರಿಣಾಮ ಯಾವುದೇ ಹುಡುಗ ಲವ್ ಪ್ರಪೋಸ್ ಮಾಡುವ ಮುನ್ನ ಸಾವಿರ ಬಾರಿ ಆಲೋಚನೆ ಮಾಡುವಂತಾಗಿದೆ. ಇನ್ನು ಈ ಘಟನೆ ರಸ್ತೆ ಮಧ್ಯೆ ನಡೆದಿದ್ದು, ಹುಡುಗನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.
"ಅವನು ಕೊಳಕು ಮಾತನಾಡುತ್ತಿದ್ದಾನೆ. ಅದನ್ನು ಪುನರಾವರ್ತಿಸಲು ನನಗೆ ನಾಚಿಕೆಯಾಗುತ್ತಿದೆ. ಅವನ ವಯಸ್ಸು ಎಷ್ಟು ಮತ್ತು ನನ್ನದೆಷ್ಟು? ಅವನು ನನ್ನ ವಯಸ್ಸಿನವನಲ್ಲ ನನ್ನ ಮಗನ ವಯಸ್ಸಿನವನು” ಎಂದು ಮಾರ್ಗ ಮಧ್ಯೆ ಮಹಿಳೆ ಕಿರುಚಾಡುತ್ತಿದ್ದಾಳೆ.
Kalesh Over Proposing Aunty 🗿 pic.twitter.com/PRcrwaTCYB
— Gharkekaleshh (@gharkekaleshh) February 7, 2023
“ಈಗ ಅಂಕಲ್ ಜಿ ಅಂಕಲ್ ಜೀ ಎಂದು ಹೇಳುತ್ತಿದ್ದೀಯ. ಈ ಜನರ ಮುಂದೆ ಹೇಳಲು ಸಾಧ್ಯವಾಗದ ಕೊಳಕು ವಿಷಯಗಳನ್ನು ನನ್ನೊಂದಿಗೆ ಹೇಳಲು ನಿನಗೆ ನಾಚಿಕೆಯಾಗುವುದಿಲ್ಲವೇ?” ಎಂದು ಆ ಬಾಲಕಿನಿಗೆ ಮಹಿಳೆ ಚಪ್ಪಲಿ ಸೇವೆ ಮಾಡಿದ್ದಾಳೆ.
ಇದ್ದಕ್ಕಿದ್ದಂತೆ ಒಬ್ಬ ಹಿರಿಯ ವ್ಯಕ್ತಿ ಹುಡುಗನಿಗೆ ಕಪಾಳಮೋಕ್ಷ ಮಾಡುತ್ತಾನೆ. ಪುರುಷನು ಹುಡುಗನನ್ನು ಹೊಡೆಯುವುದನ್ನು ಮುಂದುವರಿಸಿದಾಗ, ಮಹಿಳೆ ಕೂಡ ತನ್ನ ಚಪ್ಪಲಿಯನ್ನು ಎತ್ತಿಕೊಂಡು ಅವನನ್ನು ಥಳಿಸಲು ಪ್ರಾರಂಭಿಸುತ್ತಾಳೆ. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: Video : ಸಂಸತ್ತಿನಲ್ಲಿ ಅವಾಚ್ಯ ಶಬ್ದ ಬಳಿಸಿ ಟೀಕೆಗೆ ಗುರಿಯಾದ ಟಿಎಂಸಿ ಸಂಸದೆ!
‘ಘರ್ ಕೆ ಕಾಲೇಶ್’ ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೊವನ್ನು 47 ಸಾವಿರ ಮಂದಿ ವೀಕ್ಷಿಸಿದ್ದಾರೆ. ಜೊತೆಗೆ ವಿಭಿನ್ನ ಕಮೆಂಟ್ ಗಳನ್ನು ಸಹ ನೆಟ್ಟಿಗರು ಮಾಡಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.