ನವದೆಹಲಿ: ಕಾಂಗ್ರೆಸ್ ಬಂಡುಕೋರರ ಗುಂಪು ಈ ಹಿಂದೆ ಪಕ್ಷದ ನಾಯಕತ್ವದ ವಿಚಾರವಾಗಿ ಅಸಮಾಧಾನವನ್ನು ವ್ಯಕ್ತಪಡಿಸಿ ಈ ಹಿಂದೆ ಪತ್ರವನ್ನು ಬರೆದಿತ್ತು, ಈಗ ಅಂತಿಮವಾಗಿ ಪಕ್ಷದ ನಾಯಕಿ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲು ಈ ಬಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿದೆ.ಈ ಸಭೆಯನ್ನು ಏರ್ಪಡಿಸಲು ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಎನ್ನಲಾಗಿದೆ.


COMMERCIAL BREAK
SCROLL TO CONTINUE READING

2014 ರಲ್ಲಿ ಕಾಂಗ್ರೆಸ್ ಸೋಲಿಗೆ ಡಾ.ಮನಮೋಹನ್ ಸಿಂಗ್, ಸೋನಿಯಾ ಗಾಂಧಿ ಕಾರಣ


ಈ ಹಿಂದೆ ಬರೆದ ಪತ್ರಕ್ಕೆ ಇಪ್ಪತ್ಮೂರು ನಾಯಕರು ಸಹಿ ಹಾಕಿದ್ದರು, ಆದರೆ ಎಲ್ಲರೂ ಸಭೆಯಲ್ಲಿ ಇರುವುದಿಲ್ಲ. ಐದು ಅಥವಾ ಆರು ನಾಯಕರ ಒಂದು ಪ್ರಮುಖ ಗುಂಪು ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದೆ ಎನ್ನಲಾಗಿದೆ.ಈ ಸಭೆ ಶನಿವಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹಾಜರಾಗುತ್ತಾರೆಯೇ ಎಂಬುದು ಸ್ಪಷ್ಟವಾಗಿಲ್ಲ.ಆದರೆ ಇದು ಕೇವಲ ಸೋನಿಯಾ ಗಾಂಧಿ ಮತ್ತು ಬಂಡುಕೋರರ ನಡುವಿನ ಸಭೆ ಅಲ್ಲ ಎಂದು ಕಾಂಗ್ರೆಸ್ ಹೇಳಿಕೊಂಡಿದೆ; ಪತ್ರಕ್ಕೆ ಸಹಿ ಮಾಡದ ಇತರರು ಸಹ ಇರುತ್ತಾರೆ ಎನ್ನಲಾಗಿದೆ.


ಕಾಂಗ್ರೆಸ್ ಪಕ್ಷದಲ್ಲಿ ಮೇಜರ್ ಸರ್ಜರಿ: ಯುವಕರಿಗೆ ಆಧ್ಯತೆ


ಜ್ಯೋತಿರಾದಿತ್ಯ ಸಿಂಧಿಯಾ ಅವರು ಬಿಜೆಪಿಗೆ ಪಕ್ಷಾಂತರಗೊಂಡ ನಂತರ ಮಾರ್ಚ್ನಲ್ಲಿ ಮಧ್ಯಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡ ಕಮಲ್ ನಾಥ್ ಅವರು ಈಗ ಬಂಡಾಯ ನಾಯಕರ ಜೊತೆ ಸಭೆ ನಡೆಸಲು ಸೋನಿಯಾ ಗಾಂಧಿಯರನ್ನು ಮನವೊಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇಲ್ಲಿಯವರೆಗೆ, ಅವರು ಭಿನ್ನಮತೀಯರಿಂದ ದೂರ ಕಾಯ್ದುಕೊಂಡಿದ್ದರು.


ಸೋನಿಯಾ ಗಾಂಧಿ ಅವರ ಪುತ್ರ ರಾಹುಲ್ ಗಾಂಧಿ ಕಳೆದ ವರ್ಷ ಕಾಂಗ್ರೆಸ್ ಪಕ್ಷದ ಸೋಲಿನಿಂದಾಗಿ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು, ಇದಾದ ನಂತರ ಸೋನಿಯಾ ಗಾಂಧಿ ಹಂಗಾಮಿ ಅಧ್ಯಕ್ಷರಾಗಿ ನೇಮಕಗೊಂಡಿದ್ದರು.ಅಂದಿನಿಂದ, ಪಕ್ಷವು ಕರ್ನಾಟಕ ಮತ್ತು ಮಧ್ಯಪ್ರದೇಶ ರಾಜ್ಯಗಳನ್ನು ಕಳೆದುಕೊಂಡಿದೆ.


ರಾಜ್ಯಗಳಿಗೆ ಜಿಎಸ್‌ಟಿ ಪರಿಹಾರದ ಪಾಲು ಹೆಚ್ಚಳಕ್ಕೆ ಆಗ್ರಹಿಸಿ ಇಂದು ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಿಎಂಗಳ ಸಭೆ


ಕಳೆದ ತಿಂಗಳು ಬಿಹಾರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ನೀಡಿದ ಕಳಪೆ ಪ್ರದರ್ಶನದ ಹಿನ್ನಲೆಯಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ನಾಯಕರಾದ ಕಪಿಲ್ ಸಿಬಲ್ ಅವರು ಈಗ ಪಕ್ಷದ ನಾಯಕತ್ವದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಈಗ ಆತ್ಮಾವಲೋಕನ ಮಾಡುವ ಸಮಯ ಮುಗಿದಿದೆ ಎಂದು ಹೇಳಿದ್ದರು.ಅವರ ನಂತರ, ಪಿ ಚಿದಂಬರಂ ಅವರಂತಹ ಇತರ ಪಕ್ಷದ ನಾಯಕರು ಸಹ ಪಕ್ಷವು ತನ್ನ ಮೂಲವನ್ನು ಬಲಪಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು