ನವದೆಹಲಿ: ಅನೇಕ ಚುನಾವಣಾ ಸೋಲುಗಳ ನಂತರ ಕಾಂಗ್ರೆಸ್ ತನ್ನ ಉನ್ನತ ನಾಯಕತ್ವದ ವಿಚಾರವಾಗಿ ಟೀಕೆಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ದಿವಂಗತ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಆತ್ಮಚರಿತ್ರೆ ಇನ್ನೂ ಹಲವು ಸಂಗತಿಗಳನ್ನು ಬಹಿರಂಗಪಡಿಸಿದೆ.
ಆಗಸ್ಟ್ ತಿಂಗಳಲ್ಲಿ ನಿಧನರಾದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು 2014 ರಲ್ಲಿ ಕಾಂಗ್ರೆಸ್ ಪಕ್ಷದ ಸೋಲಿಗೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ದೂಷಿಸುತ್ತಿದ್ದಾರೆ. ಕಾಂಗ್ರೆಸ್ಸಿನ ಕೆಲವು ಸದಸ್ಯರು ಅವರು ಪ್ರಧಾನಿಯಾಗಿದ್ದರೆ ಪಕ್ಷವು ಅಧಿಕಾರವನ್ನು ಕಳೆದುಕೊಳ್ಳುತ್ತಿರಲಿಲ್ಲ ಎಂದು ಅವರು ನಂಬಿದ್ದರು ಎನ್ನುವುದನ್ನು ಉಲ್ಲೇಖಿಸಿದ್ದಾರೆ.
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಸೇರಿ ಮೂವರಿಗೆ ಭಾರತ ರತ್ನ
'ಕಾಂಗ್ರೆಸ್ಸಿನ ಕೆಲವು ಸದಸ್ಯರು 2004 ರಲ್ಲಿ ನಾನು ಪ್ರಧಾನಿಯಾಗಿದ್ದರೆ, ಪಕ್ಷವು 2014 ರ ಲೋಕಸಭಾ ಸೋಲನ್ನು ತಪ್ಪಿಸುವ ಸಾಧ್ಯತೆ ಇತ್ತು ಎನ್ನುವ ಅಭಿಪ್ರಾಯವನ್ನು ಹೊಂದಿದ್ದರು. ಈ ಅಭಿಪ್ರಾಯಕ್ಕೆ ನನ್ನ ಸಮ್ಮತಿ ಇರದಿದ್ದರೂ ಕೂಡ ಪಕ್ಷದ ವ್ಯವ್ಯಹಾರಗಳನ್ನು ಸೋನಿಯಾ ಗಾಂಧಿ ನಿಭಾಯಿಸಲು ವಿಫಲರಾಗಿದ್ದರು.ಇನ್ನೊಂದೆಡೆಗೆ ಪ್ರಧಾನಿ ಮನಮೋಹನ್ ಸಿಂಗ್ ಅವರು ಸದನಕ್ಕೆ ಗೈರು ಆಗಿದ್ದು ಒಂದು ರೀತಿಯಲ್ಲಿ ಇತರ ಸಂಸದರ ವ್ಯಯಕ್ತಿಕ ಸಂಪರ್ಕವನ್ನು ಕಳೆದುಕೊಂಡಿತು' ಎಂದು ಅವರು ತಮ್ಮ ಆತ್ಮಕತೆ ದಿ ಪ್ರಸಿಡೆಂಟಲ್ ಯಿಯರ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಜನವರಿಯಲ್ಲಿ ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ, 2012 ರಲ್ಲಿ ಅಧ್ಯಕ್ಷರಾಗುವವರೆಗೂ ಪ್ರತಿಯೊಂದು ಕಾಂಗ್ರೆಸ್ ಸರ್ಕಾರದಲ್ಲೂ ಕೇಂದ್ರ ಸಚಿವರಾಗಿದ್ದ ಪ್ರಣಬ್ ಮುಖರ್ಜಿ, 2014 ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಏಕೆ ಸೋಲನ್ನು ಅನುಭವಿಸಿತು ಎಂಬುದನ್ನು ವಿಶ್ಲೇಷಿಸಿದ್ದಾರೆ