ಕಾಂಗ್ರೆಸ್ ಪಕ್ಷದಲ್ಲಿ ಮೇಜರ್ ಸರ್ಜರಿ: ಯುವಕರಿಗೆ ಆಧ್ಯತೆ

ಗುಲಾಂ ನಬಿ ಆಜಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟು ಮಾಜಿ ಸಚಿವ ತಾರಿಕ್ ಅನ್ವರ್ ಅವರಿಗೆ ಡಬಲ್ ಬಡ್ತಿ ನೀಡುವ ಮೂಲಕ ಸೋನಿಯಾ ಗಾಂಧಿ ಶುಕ್ರವಾರ ಪಕ್ಷದಲ್ಲಿ ಪ್ರಮುಖ ಪುನರ್ರಚನೆ ಮಾಡಿದ್ದಾರೆ.ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಸೋನಿಯಾಗಾಂಧಿ ಗಾಂಧಿಗೆ ಪತ್ರ ಬರೆದ 23 ಜನರ ಗುಂಪಿನಲ್ಲಿ ಆಜಾದ್ ಅತ್ಯಂತ ಹಿರಿಯ ನಾಯಕರಾಗಿದ್ದರು.

Last Updated : Sep 11, 2020, 11:46 PM IST
 ಕಾಂಗ್ರೆಸ್ ಪಕ್ಷದಲ್ಲಿ ಮೇಜರ್ ಸರ್ಜರಿ: ಯುವಕರಿಗೆ ಆಧ್ಯತೆ  title=

ನವದೆಹಲಿ: ಗುಲಾಂ ನಬಿ ಆಜಾದ್ ಅವರನ್ನು ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಕೈಬಿಟ್ಟು ಮಾಜಿ ಸಚಿವ ತಾರಿಕ್ ಅನ್ವರ್ ಅವರಿಗೆ ಡಬಲ್ ಬಡ್ತಿ ನೀಡುವ ಮೂಲಕ ಸೋನಿಯಾ ಗಾಂಧಿ ಶುಕ್ರವಾರ ಪಕ್ಷದಲ್ಲಿ ಪ್ರಮುಖ ಪುನರ್ರಚನೆ ಮಾಡಿದ್ದಾರೆ.ಪಕ್ಷದಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಸೋನಿಯಾಗಾಂಧಿ ಗಾಂಧಿಗೆ ಪತ್ರ ಬರೆದ 23 ಜನರ ಗುಂಪಿನಲ್ಲಿ ಆಜಾದ್ ಅತ್ಯಂತ ಹಿರಿಯ ನಾಯಕರಾಗಿದ್ದರು.

ಅನ್ವರ್, ಶರದ್ ಪವಾರ್ ಮತ್ತು ಪಿಎ ಸಂಗ್ಮಾ ಅವರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಎನ್‌ಸಿಪಿಗೆ ಸೇರ್ಪಡೆಯಾಗಿದ್ದರು.ಆದರೆ, ನಂತರ ಅವರು ಕಳೆದ ವರ್ಷ ನಡೆದ ಲೋಕಸಭಾ ಚುನಾವಣೆಗೆ ಸ್ವಲ್ಪ ಮುಂಚಿತವಾಗಿ ಕಾಂಗ್ರೆಸ್ ಪಟ್ಟು ಮರಳಿದರು. ಅನ್ವರ್ ಅವರನ್ನು ಕೇರಳದ ಪ್ರಧಾನ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯೂಸಿ) ಸದಸ್ಯರನ್ನಾಗಿ ಮಾಡಲಾಗಿದೆ.

ಪಕ್ಷದ ವ್ಯವಹಾರಗಳನ್ನು ನಡೆಸಲು ಕಾಂಗ್ರೆಸ್ ಅಧ್ಯಕ್ಷರಿಗೆ ಸಹಾಯ ಮಾಡುವ ಆರು ಸದಸ್ಯರ ಸಮಿತಿಯಲ್ಲಿ ಭಿನ್ನಮತೀಯ ಶಿಬಿರದ ಒಬ್ಬ ಸದಸ್ಯ ಮುಕುಲ್ ವಾಸ್ನಿಕ್ ಅವರನ್ನು ಮಾತ್ರ ಸೇರಿಸಿಕೊಳ್ಳಲಾಗಿದೆ.ಇತರ ಸದಸ್ಯರಲ್ಲಿ ಕುಟುಂಬ ನಿಷ್ಠಾವಂತರಾದ ಎ.ಕೆ.ಆಂಥೋನಿ, ಅಹ್ಮದ್ ಪಟೇಲ್, ಅಂಬಿಕಾ ಸೋನಿ, ಕೆ.ಸಿ.ವೇಣುಗೋಪಾಲ್ ಮತ್ತು ರಂದೀಪ್ ಸಿಂಗ್ ಸುರ್ಜೆವಾಲಾ ಸೇರಿದ್ದಾರೆ.

ಕೆಲವು ಪ್ರಮುಖ ರಾಹುಲ್ ಗಾಂಧಿ ಸಹಾಯಕರು ಮತ್ತು ನಿಷ್ಠಾವಂತರಾದ ವೇಣುಗೋಪಾಲ್ ಮತ್ತು ಸುರ್ಜೆವಾಲಾ ಅವರನ್ನು ಎಲ್ಲಾ ಪ್ರಮುಖ ಸಮಿತಿಗಳಿಗೆ ನಾಮನಿರ್ದೇಶನ ಮಾಡಲಾಗಿದೆ.

ಕಾಂಗ್ರೆಸ್‌ನಲ್ಲಿ ಸಾಂಸ್ಥಿಕ ಸುಧಾರಣೆಗಳನ್ನು ಕೋರಿ ಪಕ್ಷದ ಮುಖಂಡರ ಒಂದು ಭಾಗ ಸೋನಿಯಾ ಗಾಂಧಿಗೆ ಪತ್ರ ಬರೆದ ಹಿನ್ನೆಲೆಯಲ್ಲಿ ಈ ಪುನರ್ರಚನೆ ನಡೆಯುತ್ತಿದೆ. ಸೋನಿಯಾ ಗಾಂಧಿ ಅವರು ಪಕ್ಷದ ಕೇಂದ್ರ ಚುನಾವಣಾ ಪ್ರಾಧಿಕಾರವನ್ನು ಪುನರ್ನಿರ್ಮಿಸಿದರು ಮತ್ತು ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯ ಉಸ್ತುವಾರಿಗಳನ್ನು ನೇಮಿಸಿದರು.

ಜಿತಿನ್ ಪ್ರಸಾದ್ ಅವರನ್ನು ಪಶ್ಚಿಮ ಬಂಗಾಳದ ಪಕ್ಷದ ಉಸ್ತುವಾರಿಯನ್ನಾಗಿ ನೇಮಕಮಾಡಲಾಗಿದೆ. ಮಧುಸೂದನ್ ಮಿಸ್ತ್ರಿ, ರಾಜೇಶ್ ಮಿಶ್ರಾ, ಕೃಷ್ಣ ಬೈರೆ ಗೌಡ, ಎಸ್ .ಜೋತಿಮಣಿ ಮತ್ತು ಅವಿಂದರ್ ಸಿಂಗ್ ಲವ್ಲಿ ಅವರನ್ನು ಕೇಂದ್ರ ಚುನಾವಣಾ ಪ್ರಾಧಿಕಾರದ ಸದಸ್ಯರನ್ನಾಗಿ ನೇಮಿಸಲಾಯಿತು.

ಎಚ್ ಕೆ ಪಾಟೀಲ್ ಅವರನ್ನು ಶಾಶ್ವತ ಆಹ್ವಾನಿತರ ಸದಸ್ಯರನ್ನಾಗಿ ಮತ್ತು ಮಹಾರಾಷ್ಟ್ರದ ಉಸ್ತುವಾರಿಯನ್ನಾಗಿ ನೇಮಕ ಮಾಡಲಾಗಿದೆ.ಇನ್ನು ದಿನೇಶ್ ಗುಂಡುರಾವ್ ಅವರನ್ನು ತಮಿಳುನಾಡು, ಪುದುಚೇರಿ,ಮತ್ತು ಗೋವಾ ರಾಜ್ಯಗಳ ಉಸ್ತುವಾರಿಗಳನ್ನಾಗಿ ನೇಮಕ ಮಾಡಲಾಗಿದೆ.ಸುರ್ಜೆವಾಲಾ, ಜಿತೇಂದ್ರ ಸಿಂಗ್ ಮತ್ತು ಅಜಯ್ ಮಾಕೆನ್ ಅವರನ್ನು ಕ್ರಮವಾಗಿ ಕರ್ನಾಟಕ, ಅಸ್ಸಾಂ ಮತ್ತು ರಾಜಸ್ಥಾನದ ಹೊಸ ಪ್ರಧಾನ ಕಾರ್ಯದರ್ಶಿಗಳನ್ನಾಗಿ ನೇಮಿಸಲಾಗಿದೆ.

Trending News