ನವ ದೆಹಲಿ: ಅಧಾರ ಸಂಖ್ಯೆಯನ್ನು ಬ್ಯಾಂಕ್ ಖಾತೆ, ಸಿಮ್ ಕಾರ್ಡ್ ಮತ್ತು ಪಾನ್ ಕಾರ್ಡ್ ಗಳ ಜೊತೆ ಲಿಂಕ್ ಮಾಡಿದ ನಂತರ, ತೆಲಂಗಾಣವು ಮದ್ಯ ಖರೀದಿಗೆ ಆಧಾರ್ ಅನ್ನು ಕಡ್ಡಾಯಗೊಳಿಸಿದೆ. 


COMMERCIAL BREAK
SCROLL TO CONTINUE READING

ನೀವು ಹೈದರಾಬಾದ್ ನಲ್ಲಿ ಆಲ್ಕೋಹಾಲ್ ಖರೀದಿಸ ಬೇಕಾದರೆ ಮೊದಲು ಆಧಾರ್ ಕಾರ್ಡನ್ನು ತೋರಿಸಬೇಕು ಎಂಬ ಹೊಸ ನಿಯಮವನ್ನು ತೆಲಂಗಾಣ ಸರ್ಕಾರದ ಅಬಕಾರಿ ಇಲಾಖೆ ಜಾರಿಗೆ ತಂದಿದೆ. ಹೆಚ್ಚುತ್ತಿರುವ ಅಪರಾಧಗಳನ್ನು ನಿಯಂತ್ರಿಸುವ ಸಲುವಾಗಿ ಈ ನಿಯಮವನ್ನು ಜಾರಿಗೆ ತರಲಾಗಿದೆ ಎಂದು ಮೂಲಗಳು ತಿಳಿಸಿವೆ.


ಹೊಸ ನಿಯಮದ ಪ್ರಕಾರ ತೆಲಂಗಾಣ ರಾಜ್ಯದಲ್ಲಿ ಪಬ್ನಲ್ಲಿ ಅಲ್ಕೋಹಾಲ್ ಖರಿದಿಸಬೇಕಾದರೆ ಆಧಾರ್ ಅನ್ನು ತೋರಿಸುವುದು ಕಡ್ಡಾಯವಾಗಿದೆ. ಹೈದರಾಬಾದ್ ನಲ್ಲಿ 17 ವರ್ಷದ ವಿದ್ಯಾರ್ಥಿಯು ತನ್ನೊಂದಿಗೆ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಹತ್ಯೆ ಮಾಡಿದ್ದ. ಈ ಘಟನೆಯ ನಂತರ 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ಗ್ರಾಹಕರಿಗೆ ಪಬ್ಗಳಲ್ಲಿ ಪ್ರವೇಶ ನಿರಾಕರಿಸುವಂತೆ ಸೂಚಿಸಲಾಗಿದೆ. ಈ ಮೂಲಕ ಕಿರಿಯ ವಯಸ್ಕರು ಪಬ್ಗಳಲ್ಲಿ ಅಲ್ಕೋಹಾಲ್ ಸೇವನೆ ಮಾಡುವುದನ್ನು ತಡೆಯಲಾಗಿದೆ.


ತಮ್ಮ ಗ್ರಾಹಕರ ವಿವರಗಳನ್ನು ಪ್ರತ್ಯೇಕ ರಿಜಿಸ್ಟರ್ ನಲ್ಲಿ ನೋಂದಾಯಿಸುವಂತೆ ಪಬ್ ಮತ್ತು ಬಾರ್ ಮ್ಯಾನೇಜರ್ ಗಳಿಗೆ ಸರ್ಕಾರ ಸೂಚಿಸಿದೆ.