ನವದೆಹಲಿ: ಕರೋನಾ ಬಿಕ್ಕಟ್ಟಿನಿಂದಾಗಿ ದೇಶದಲ್ಲಿ ಲಾಕ್ ಡೌನ್ ಜಾರಿಗೆ ತರಲಾಗಿರುವುದರಿಂದ  ಆಧಾರ್‌ಗೆ ಸಂಬಂಧಿಸಿದ ಸೇವೆಗಳ ಮೇಲೂ ಪರಿಣಾಮ ಉಂಟಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ದೇಶದ ಎಲ್ಲಾ ಆಧಾರ್ (Aadhaar) ಕೇಂದ್ರಗಳನ್ನು ಮುಚ್ಚಲಾಗಿದೆ ಎಂದು ಯುಐಡಿಎಐ ಮಾಹಿತಿ ನೀಡಿದೆ. ಆಧಾರ್ ಕೇಂದ್ರಗಳು ಬಂದ್ ಆಗಿರುವುದರ ಹೊರತಾಗಿಯೂ ನಿಮ್ಮ ಆಧಾರ್ ಸಂಬಂಧಿತ ಕೆಲಸಗಳಿಗಾಗಿ ನೀವು ಎಂ-ಆಧಾರ್ ಅಥವಾ ಆಧಾರ್ ವೆಬ್‌ಸೈಟ್ ಬಳಸಬಹುದು ಎಂದು ಯುಐಡಿಎಐ (UIDAI) ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದೆ.


COMMERCIAL BREAK
SCROLL TO CONTINUE READING

ಆಧಾರ್ ಸಂಬಂಧಿತ ಕೆಲಸಗಳು ಸ್ಥಗಿತಗೊಂಡಿದ್ದರೆ ಈ ಮಾರ್ಗಗಳನ್ನು ಅನುಸರಿಸಿ ನಿಮ್ಮ ಕೆಲಸ ಪೂರ್ಣಗೊಳಿಸಿ:


* IVRS ಮೋಡ್ ಅನ್ನು ಸಹ ಬಳಸಿ:
ಯುಐಡಿಎಐ ಪ್ರಕಾರ, ಲಾಕ್ ಡೌನ್ ಸಮಯದಲ್ಲಿ ಎಲ್ಲಾ ಆಧಾರ್ ಕೇಂದ್ರಗಳು ಮತ್ತು ಆಧಾರ್ ಕಚೇರಿಗಳನ್ನು ಮುಚ್ಚಲಾಗಿದೆ. ಆದ್ದರಿಂದ ಅಂತಹ ಪರಿಸ್ಥಿತಿಯಲ್ಲಿ ನೀವು ಆನ್‌ಲೈನ್ ಸೇವೆಯನ್ನು ಬಳಸಬಹುದು ಅಥವಾ ನೀವು ಆಧಾರ್ ಸಹಾಯವಾಣಿ 147ನ್ನು ಸ್ವಯಂ-ಚಾಲಿತ (IVRS) ಮೋಡ್ ಅನ್ನು ಮಾತ್ರ ಬಳಸಬಹುದು. ಈ ಎರಡು ವಿಧಾನಗಳ ಮೂಲಕ ನೀವು ಆಧಾರ್‌ಗೆ ಸಂಬಂಧಿಸಿದ ನಿಮ್ಮ ಕೆಲಸವನ್ನು ಮಾಡಬಹುದು.


ಆಧಾರ್‌ಗೆ ಸಂಬಂಧಿಸಿದ ಪ್ರತಿಯೊಂದು ಪ್ರಶ್ನೆಗೆ ಇಲ್ಲಿ ಸಿಗಲಿದೆ ಉತ್ತರ


* ಮೇಲ್ ಅನ್ನು ಸಹ ಬಳಸಬಹುದು:
ಇದರೊಂದಿಗೆ,  ಮೇಲ್ ಮೂಲಕವೂ ನಿಮ್ಮ ಸಮಸ್ಯೆಗಳನ್ನು ನಿವಾರಿಸಬಹುದು ಎಂದು ಆಧಾರ್ ತಿಳಿಸಿದೆ. ಆದಾಗ್ಯೂ, ನೀಮ್ಮ ಮೇಲ್ಗೆ ಪ್ರತ್ಯುತ್ತರ ಪಡೆಯಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. 


* UIDAI ಸೂಚನೆ: 
ಆನ್‌ಲೈನ್‌ನಲ್ಲಿ ಲಭ್ಯವಿರುವ ಇತರ ಸೇವೆಗಳಿಗೆ ಸಹ ಯುಐಡಿಎಐ ಪರಿಹಾರವನ್ನು ಒದಗಿಸಿದೆ. ಆಧಾರ್ ಆನ್‌ಲೈನ್ ಸೇವೆಗಳಿಗಾಗಿ ಎಂ-ಆಧಾರ್ ಅಪ್ಲಿಕೇಶನ್ ಅನ್ನು ಬಳಸಬಹುದು ಎಂದು ಯುಐಡಿಎಐ ಹೇಳಿದೆ.


ರದ್ದಾದ PAN ಕಾರ್ಡ್ ಬಳಸುವ ಮುನ್ನ ಎಚ್ಚರ...!


* ಈ ಬದಲಾವಣೆಗಳು ಸಾಧ್ಯ: 
ಕರೋನಾ ಹಾವಳಿ ನಡುವೆಯೂ ನೀವು ನಿಮ್ಮ ಆಧಾರ್ ಕಾರ್ಡಿನಲ್ಲಿ ನಿಮ್ಮ ವಿಳಾಸವನ್ನು ಬದಲಾಯಿಸುವುದು ಅಥವಾ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ನೋಂದಾಯಿಸುವುದು ಮುಂತಾದ ಎಲ್ಲಾ ಕೆಲಸಗಳನ್ನು ಮಾಡಬಹುದು. ಅಪ್ಲಿಕೇಶನ್‌ನಲ್ಲಿ, ನೀವು  ಆಧಾರ್ ಡೌನ್‌ಲೋಡ್ ಮಾಡಬಹುದು, ಅದರ ಸ್ಟೇಟಸ್ ಪರಿಶೀಲಿಸಬಹುದು, ಆಧಾರ್ ಮರುಮುದ್ರಣಕ್ಕಾಗಿ ಆದೇಶವನ್ನು ನೀಡಬಹುದು.


* ಅಪ್ಲಿಕೇಶನ್ ಅನ್ನು ಹೀಗೆ ಡೌನ್‌ಲೋಡ್ ಮಾಡಿ:
MAadhaar ಮೂಲಕ ನಿಮ್ಮ ಆಧಾರ್ ಅನ್ನು ನೀವು ಸುಲಭವಾಗಿ ನವೀಕರಿಸಬಹುದು ಇದರೊಂದಿಗೆ, ಮುಂದಿನ ದಿನಗಳಲ್ಲಿ ನೀವು ಅಪಾಯಿಂಟ್ಮೆಂಟ್ ಅನ್ನು ಸಹ ಕಾಯ್ದಿರಿಸಬಹುದು.